ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೬೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೩೪ ಶ್ರೀಮದ್ರಾಮಾಯಣದ [ಸರ್ಗ, ೫೦. ವನ್ನು ನಿಲ್ಲಿಸಿಕೊಳ್ಳಲಾರರು. ನನ್ನ ತಾಯಿಯಾದ ಸುಮಿತ್ರೆಗೆ ಶತ್ರುಘ್ನು ನೆಂಬ ಮತ್ತೊಬ್ಬ ಮಗನಿರುವುದರಿಂದ, ಆಗಾಗ ಆತನನ್ನು ನೋಡಿಕೊಂಡು ಆಕೆಯು ಒಂದುವೇಳೆ ಬದುಕಿದ್ದರೂ ಇರಬಹುದು.ಅವಳ ವಿಷಯದಲ್ಲಿ ನಾ ನು ಅಷ್ಟಾಗಿ ಚಿಂತಿಸಬೇಕಾದುದಿಲ್ಲ. ರಾಮನಂತಹ ಪತ್ರಕತ್ರ ವನ್ನು ಪಡೆದ “ಕೌಸಲ್ಯಯು ಎಂದಿಗೂಬದುಕಿರಲಾರಳು. ಆ ಚಿಂತೆಯೇ ನನ್ನನ್ನು ಬಹಳ ವಾಗಿ ಭಾಧಿಸುತ್ತಿರುವುದು, ರಾಜನಲ್ಲಿ ಅನುರಕ್ತರಾದ ಆನೇಕಪ್ರಜೆಗಳಿಂದ ತುಂಬಿ,ಸುಖಾಶ್ರಯವಾಗಿರುವ ಅಯೋಧ್ಯೆ ಯು, ದಶರಥನ ಮರಣದಿಂದುಂ ಟಾದ ದುಃಖವನ್ನು ಸಹಿಸಲಾರದೆ, ನಾಶಹೊಂದುವುದರಲ್ಲಿ ಸಂದೇಹವಿಲ್ಲ. ದಶರಥನು ತನಗೆ ಜೇಷ್ಠ ಪುತ್ರನಾದ ಮಹಾತ್ಮನಾದ ಈರಾಮನನ್ನು ನೋ ಡದೆ ಹೇಗೆ ಬದುಕಿರಬಲ್ಲನು? ಆ ದಶರಥನಿಗೆ ಮರಣವೆಂಬುದೇ ನಿಜವು. ಈ ಪತಿವಿರಹವನ್ನು ಸಹಿಸಲಾರದೆ ಕೌಸಲ್ಯಯೂ ಪ್ರಾಣವನ್ನು ಬಿಡುವುದೇ ನಿಶ್ಚಯವು. ಇಷ್ಟು ಅನರ್ಥಗಳನ್ನು ನೋಡಿದಮೇಲೆ, ನನ್ನ ತಾಯಿಯಾದ ಸುಮಿತ್ರೆಯುತಾನೇ ಹೇಗೆ ಬದುಕಿರಬಲ್ಲಳು ? ಏನಾದರೇನು ? ಕಾರವು ಮಿಂಚಿಹೋಯಿತು. ನಮ್ಮ ತಂದೆಯಾದ ದಶರಥನು ತನ್ನ ಹಿರಿಯಮಗನಿಗೆ ಪಟ್ಟವನ್ನು ಕಟ್ಟಿ ಸಂತೋಷಿಸಬೇಕೆಂಬ ಮನೋರಥವನ್ನು ಈಡೇರಿಸಿ ಕೊಳ್ಳುವುದಕ್ಕೆ ಮೊದಲೇ ಸಾಯುವನು ! ಮುಖ್ಯವಾಗಿ ಕೆಲಸವೆಲ್ಲವೂ ಕೆಟ್ಟು ಹೋಯಿತು. ಅವುಗಳನ್ನು ಈಗ ನೆನೆಸಿಕೊಂಡು ಚಿಂತಿಸಿದುದರಿಂದ ಫಲವೇನು?ನನ್ನ ತಂದೆಯು ಬಹುಕಾಲದಿಂದ ಮನಸ್ಸಿನಲ್ಲಿ ರಾಮನು ಹುಟ್ಟಿ ಬಳೆದು ವಿವಾಹಿತನಾಗಿ ಪಟ್ಟಾಭಿಷಿಕ್ತನಾಗುವನೆಂದು ಕೋರುತ್ತಿದ್ದ ಕೋ ರಿಕೆಗಳೆಲ್ಲವೂ ಕೆಟ್ಟು ಹೋಯಿತು. ರಾಮನಿಗೆ ರಾಜ್ಯವನ್ನು ಕೊಡದೆಯೇ ಸಾ ಯಬೇಕಾಗಿ ಬಂತು.ಅಯ್ಯೋ!ನಮ್ಮ ತಂದೆಗೆ ಪ್ರೇತ ಕಾವ್ಯಗಳನ್ನು ನಡೆಸುವು ದಕ್ಕೂ ನಮಗೆ ಅದೃಷ್ಟವಿಲ್ಲದೆ ಹೋಯಿತಲ್ಲಾ! ಆತನಿಗೆ ಮರಣಕಾಲದ ಲ್ಲಿ ಮಾಡಬೇಕಾದ ಪ್ರೇತಕಾರಗಳನ್ನು ಮಾಡತಕ್ಕವರೇ ಧನ್ಯರಲ್ಲವೇ ? ನಮಗೆ ಆ ಧನ್ಯತೆಯೂ ಇಲ್ಲದೆ ಹೋಯಿತು. ಅತ್ತಿಮನೋಹರವಾದ ಅಂಗ ಳಗಳುಳುದಾಗಿ, ನೇರವಾಥ ಬೀದಿಗಳುಳ್ಳುದಾಗಿ, ಉಪ್ಪರಿಗೆಗಳಿಂದಲೂ, ಗೋಪುರಗಳಿಂದಲೂ ಕೂಡಿದುದಾಗಿ,ಅನೇಕಗಣಿ ಕಾಮಿ_ಯರಿಂದ ಶೋಭಿ