ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೬೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸರ್ಗ, ೫೨.] ಅಯೋಧ್ಯಾಕಾಂಡವು. ೩೦ ತವಾಗಿ, ಆನೆಕುದುರೆಗಳಿಂದಲೂ, ರಥಗಳಿಂದಲೂ, ವಾದ್ಯಧ್ವನಿಗಳಿಂದಲೂ ತುಂಬಿದುದಾಗಿ, ಸತ್ಯಸಂತೋಷಿಗಳಾದ ಧನಿಕರಿಂದ ಕೂಡಿದುದಾಗಿ, ಉದ್ಯಾನಗಳಿಂದಲೂ, ಕ್ರೀಡಾವನಗಳಿಂದಲೂ, ಶೋಭಿತವಾಗಿ ಸಮಸ್ತ ಕಲ್ಯಾಣಗಳಿಗೂ ನೆಲೆಯಾದ ನಮ್ಮ ತಂದೆಯ ರಾಜಧಾನಿಯಲ್ಲಿ ಸುಖವಾಗಿ ಸಂಚರಿಸತಕ್ಕವರೇ ಭಾಗ್ಯಶಾಲಿಗಳು ! ನಮಗಂತೂ ಆ ಭಾಗ್ಯವಿಲ್ಲದೆ ಹೋಯಿತು, ದಶರಥನು ನಾವು ಬರುವವರೆಗೂ ಬದುಕಿರು ವನೇ? ನಾವು ವನವಾಸದಿಂದ ಹಿಂತಿರುಗಿ ಬಂದು ಮಹಾತ್ಮನಾದ ಆತ ನನ್ನು ಪುನಃ ನೋಡುವೆವೇ ? ಸತ್ಯಪ್ರತಿಜ್ಯನಾದ ರಾಮನಿಗೆ ವನವಾಸವು ಮುಗಿದಮೇಲೆ ಆತನೊಡಗೂಡಿ ನಾವು ಈ ಅಯೋಧ್ಯೆಗೆ ಪುನಃ ಪ್ರವೇಶಿಸು ವೆವೆ? ನಮಗೆ ಅಷ್ಟೊಂದು ಭಾಗ್ಯವು ಲಭಿಸುವುದೇ?” ಎಂದು ವ್ಯಸನ ದಿಂದ ನಾನಾವಿಧವಾಗಿ ವಿಲಪಿಸುತ್ತಿದ್ದನು. ಹೀಗೆ ಆ ಲಕ್ಷಣನು ಮಾ ತಾಡುತ್ತಿರುವಾಗಲೇ ರಾತ್ರಿಯು ಕಳೆದುಹೋಯಿತು. ಪ್ರಜೆಗಳಿಗೆ ಹಿತ ನಾದ ಆ ರಾಜಕುಮಾರನು ಹೀಗೆ ತನ್ನ ತಂದೆಯಾದ ದಶರಥನನ್ನು ಸ್ಮರಿಸಿ ಕೊಂಡು, ರಾಮನಲ್ಲಿ ತನಗಿರುವ ಮನಃಪೂರಕವಾದ ಭಕ್ತಿಯಿಂದ ಅವನ ಕಷ್ಟಗಳನ್ನೂ ನೆನೆಸಿಕೊಂಡು ಹೇಳಿದ ತತ್ಕಾಂಶಗಳೆಲ್ಲವನ್ನೂ ಗುಹನು ಕೇಳಿ, ರಾಮನಲ್ಲಿ ತನಗಿರುವ ಪ್ರೇಮಾತಿಶಯದಿಂದ ತಾನೂ ಬಹುದುಃಖಿತ ನಾಗಿ ಜ್ವರದಲ್ಲಿ ನರಳುವ ಆನೆಯಂತೆ, ಕಳವಳಹೊಂದಿ, ಕೊರಗಿ ಕಣ್ಣೀ ರನ್ನು ಬಿಡುತ್ತಿದ್ದನು. ಇಲ್ಲಿಗೆ ಐವತ್ತೊಂದನೆಯ ಸರ್ಗವು. { ರಾಮನು ಸುಮಂತ್ರನೊಡನೆ ತನ್ನ ತಂದೆತಾಯಿಗಳಿಗೆ ) ಸಂದೇಶಗಳನ್ನು ಹೇಳಿ, ಗುಹನನ್ನು ಸಮಾಧಾನ ಪಡಿಸಿ, ಜಡೆಗಳನ್ನು ಧರಿಸಿದುದು, ವದೇಶ ವನ್ನು ದಾಟಿ, ಮೃಗಮಾಂಸವನ್ನು ಭಜಿಸಿ, ಮರದ ಕೆಳಗೆ ಮಲಗಿದುದು. ರಾತ್ರಿಯು ಕಳೆದು ಬೆಳಗಾದಕೂಡಲೆ, ಮಹಾಯಶಸ್ವಿಯಾದ ರಾ ಮನು ಲಕ್ಷಣವನ್ನು ಕುರಿತು, ಎಲೆ ವತೃನೆ! ಇದೋ ಶೂದ್ರೋದಯಸ