ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರ್ಗ, ೨.] ಅಯೋಧ್ಯಾಕಾಂಡವು. ಕೊಂಡು, ಧನುರ್ಧಾರಿಗಳಾಗಿ ಸೀತೆಯೊಡಗೂಡಿ, ಆ ಗಂಗಾನದಿಗೆ ಜನಗಳು ಹೋಗಿ ಬಳಿಕೆಯಾದ ದಾರಿಯನ್ನು ಹಿಡಿದು ಹೊರಟರು. ಇವರೆಲ್ಲರೂ ನಾವೆಯನ್ನೇರುವುದಕ್ಕೆ ಸಿದ್ಧವಾಗಿರುವಾಗ, ಸುಮಂತ್ರನು ಧರ್ಮಜ್ಞನಾ ದ ರಾಮನ ಬಳಿಗೆ ಬಂದು, ವಿನಯದಿಂದ ಕೈಮುಗಿದುಧಿ, ರಾಮನೆ!ಈಗ ನಾನು ಮಾಡಬೇಕಾದುದೇನು ?” ಎಂದನು. ಆಗ ರಾಮನು ತನ್ನ ಬಲಗೈ ಯಿಂದ ಆ ಸುಮಂತ್ರನ ಬೆನ್ನನ್ನು ಸ್ಪರ್ಶಿಸುತ್ತ , ಎಲೆ ಸೂತನೆ ! ನಾನು ಇನ್ನು ನಿನಗೆ ಹೇಳಬೇಕಾದುದೇನು? ನೀನು ಶಿಘ್ರದಲ್ಲಿಯೇ ದಶರಥನಬಳಿಗೆ ಹಿಂತಿರುಗಿಹೋಗು, ಬಹುಜಾಗರೂಕನಾಗಿ ಆತನನ್ನು ನೋಡಿಕೊಳ್ಳು ತಿರು! ಇನ್ನು ನೀನು ಹಿಂತಿರುಗು! ಇದುವರೆಗೆ ನೀನು ನನ್ನನ್ನು ರಥದಲ್ಲಿ ಕುಳ್ಳಿರಿಸಿ ತಂದುಬಿಟ್ಟುದೇ ಸಾಕು! ಇನ್ನು ಮುಂದೆ ನಾವು ಕಾಲುನಡೆಯಿಂ ದಲೇ ಹೋಗುವೆವು” ಎಂದನು. ಇದನ್ನು ಕೇಳಿ ಸಾರಥಿಯು, ರಾಮನು ತನಗೆ ಹಿಂತಿರುಗಿಹೋಗುವುದಕ್ಕಾಗಿ ಅನುಮತಿಕೊಟ್ಟು ಬಿಟ್ಟುದನ್ನು ನೋಡಿ, ಆತನನ್ನು ಬಿಟ್ಟು ಹೋಗಲಾರದೆ ವ್ಯಸನದಿಂದ ಕೊರಗುತ್ತಾ, ಪುನಃ ಪುರುಷ ಶ್ರೇಷ್ಟನಾದ ಆ ರಾಮನನ್ನು ಕುರಿತು (ವತ್ತ ರಾಮಾ! ನಿನ್ನಂತಹ ಮಹಾ ನುಭಾವನು ಹೆಂಡತಿಯನ್ನೂ , ತಮ್ಮನನ್ನೂ ಸಂಗಡಕರೆದುಕೊಂಡು, ಕೇವಲ ಪ್ರಾಕೃತಮನುಷ್ಯನಂತೆ ಕಾಡಿನಲ್ಲಿರಬೇಕೆಂಬುದನ್ನು ಲೋಕದಲ್ಲಿ ಯಾರೂ ಸಮ್ಮತಿಸಲಾರರು. ಹೀಗಿರುವಾಗ ನಿನ್ನಲ್ಲಿ ಚಿರಪರಿಚಯವುಳ್ಳ ನಮ್ಮಂಥ ವರಿಗೆ ಹೇಳತಕ್ಕುದೇನು? ಎಲೈ ರಾಮನೆ! ಎಷ್ಟಾದರೇನು?ದೈವವು ಹೀಗೆ ನಿ ನಗೆ ತಂದಿಟ್ಟ ಈ ಕಷ್ಟವನ್ನು ತಪ್ಪಿಸುವುದಕ್ಕೆ ಕೇವಲಮನುಷ್ಯಮಾತ್ರರಿಂ ದ ಸಾಧ್ಯವೆ?ಬಹ್ಮಚಯ್ಯವ್ರತಗಳನ್ನು ಸಲ್ಲಿಸಿ, ವೇದಾಧ್ಯಯನಗಳನ್ನು ಮಾಡಿ, ದಯಾಳುವೆನಿಸಿಕೊಂಡು, ಬಹಳ ಋಜುಸ್ಸಭಾವವುಳ್ಳವನಾದ ನಿನ್ನಂತ ವನಿಗೇ ಈ ಮಹಾವ್ಯಸನವು ಬಂದಮೇಲೆ, ಮನುಷ್ಯನು ಎಷ್ಟು ವ್ರತಗಳ ನ್ನು ನಡೆಸಿದರೇನು ? ಆತನಲ್ಲಿ ಎಷ್ಟು ಗುಣಗಳಿದ್ದರೇನು ? ಆತನಿಗೆ ಎಷ್ಟು ಮಟ್ಟಿಗೆ ಪರಲೋಕಭೀತಿಯಿದ್ದರೇನು ? ಯಾವುದೊಂದರಲ್ಲಿಯೂ ಫಲವಿಲ್ಲ ವೆಂದೇ ನನಗೆ ತೋರಿರುವುದು. ಎಲೈ ಮಹಾವೀರನೆ : ನಿನ್ನ ಅಗಲಿಕೆಯಿಂದ ನಾವೆಲ್ಲರೂ ವ್ಯಸನದಲ್ಲಿ ಮುಳುಗಬೇಕಾಯಿತೇಹೊರತು, ಇದರಿಂದ ನಿನಗೆ