ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

&0೮ ಶ್ರೀಮದ್ರಾಮಾಯಣವು ( ಸರ್ಗ, ೨s, ಯಾವುದೊಂದು ಹಾನಿಯೂ ಇರದು.ನೀನು ಸೀತಾಲಕ್ಷ್ಮಣರೊಡನೆ ಕಾಡಿನ ಕ್ಲಿದ್ದರೂ, ಮೂರುಲೋಕವನ್ನೂ ವಶಮಾಡಿಕೊಳ್ಳತಕ್ಕ ಸರ್ತಿಯನ್ನು ಪಡೆದು ಮಹಾವಿಷ್ಣುವಿನಂತೆ ಬೆಳಗುವೆ : ಸರೊತ್ತಮವಾದ ಸದ್ಧತಿಗೆ ಪಾತ್ರನಾಗುವೆ. ಮುಖ್ಯವಾಗಿ ನಿನ್ನಿಂದಗಲಿ ನಾವು ಕೆಟ್ಟೆವು. ನಮ್ಮ ನ್ನು ವಂಚಿಸಿದವಳು ಕೈಕೇಯಿಯುಮಾತ್ರವೇ ಅಲ್ಲ. ನೀನೂ ಒಂದುವಿನ ದಲ್ಲಿ ನಮ್ಮನ್ನು ವಂಚಿಸಿದಂತೆಯೇ ಎಣಿಸಬೇಕಾಗಿದೆ. ಅಯ್ಯೋ ! ಇನ್ನು ನಮ್ಮ ಗತಿಯೇನು: ಮಹಾಪಾಪಿನಿಯಾದ ಆ ಕೈಕೇಯಿಯ ಕೈಕೆಳಗೆ ಸಿಕ್ಕಿ ಕೊಂಡು ದುಖದಿಂದ ಜೀವಿಸಬೇಕಾಗಿ ಬಂತಲ್ಲವೆ ? ” ಎಂದು ಹೇಳುತ್ತಾ, ತನಗೆ ಪ್ರಾಣಸಮನಾದ ರಾಮನು ತನ್ನನ್ನು ಬಿಟ್ಟು ದೂರದೇಶಕ್ಕೆ ಹೋ ಗುವ ಪ್ರಯತ್ನ ದಲ್ಲಿರುವುದನ್ನು ನೋಡಿ, ದುಃಖವನ್ನು ತಡೆಯಲಾರದೆ,ಬಹ ಳಹೊತ್ತಿನವರೆಗೆ ಗಟ್ಟಿಯಾಗಿ ಅಳುತ್ತಿದ್ದನು. ಹೀಗೆ ಬಹುಕಾಲದವರೆಗೆ ಕ ಣ್ಣೀರನ್ನು ಸುರಿಸುತ್ತಿದ್ದುದರಿಂದ, ಆಶುಚಿಯಾಗಿದ್ದ ಸುಮಂತ್ರನು, ಆಚಮ ನವನ್ನು ಮಾಡಿ ಶುದ್ಧ ನಾಗಿ ಬಂದಮೇಲೆ, ಆತನನ್ನು ನೋಡಿ ರಾಮನು ಬಾರಿಬಾರಿಗೂ ಸಮಾಧಾನವಾಕ್ಯಗಳನ್ನು ಹೇಳುತ್ತಾ, ಎಲೈ ಸುಮಂ ತ್ರನೆ ! ಇಕ್ಷಾಕುವಂಶದವರಿಗೆ ನಿನ್ನಂತೆ ಪ್ರಿಯಮಿತ್ರನಾದವನೊಬ್ಬನೂ ದೊರೆಯಲಾರನು. ಅದರಿಂದ ದಶರಥನು ನನಗಾಗಿ ವ್ಯಸನದಿಂದ ಕೊರಗ ದಂತೆ ಮಾಡಬೇಕಾದುದು ನಿನ್ನ ಕೃತ್ಯವು, ಮೊದಲೇ ಆತನು ದುಃಖದಿಂದ ಥೈರಗೆಟ್ಟಿರುವನು. ಇದರಮೇಲೆ ಬಹಳ ವೃದ್ಯವಯಸ್ಸುಳ್ಳವನು. ಒಂದು ಕಡೆಯಲ್ಲಿ ಕಾಮಪಾಶವೂ ಆತನನ್ನು ಸೆಳೆಯುತ್ತಿರುವುದು. ಹೀಗೆ ನಾನಾವಿ ಥದಲ್ಲಿಯೂ ಆತನ ದೇಹವೂ, ಮನಸೂ ಕದಲಿ ಹೋಗಿರುವುದು, ಆದುದ ರಿಂದ ನೀನು ಯಾವವಿಧದಲ್ಲಿಯೂ ಆತನ ಮಸ್ಸನ್ನು ನೋಯಿಸದೆ ಅವನ ಕೋರಿಕೆಗಳನ್ನು ಆಗಾಗಲೇ ನಡೆಸುತ್ತಿರಬೇಕು. ಮತ್ತು ಆತನು ಕೈಕೇ ಯಿಯ ಮನಸ್ಯಪ್ತಿಗಾಗಿ ಯಾವಯಾವ ಕಾರಗಳನ್ನು ನಿಯಮಿಸುವ ನೋ, ಅದೆಲ್ಲವನ್ನೂ ನೀನು ಸ್ವಲ್ಪವೂ ಹಿಂಜರಿಯದೆ ನಡೆಸುತ್ತಿರಬೇಕು, ರಾಜರು ಕಾಮದಿಂದಲೋ, ಅಥವಾ ಕ್ರೋಧದಿಂದಲೋ, ಆಗಾಗ ಹಿಂ ಹೊಂದುಕಾಠ್ಯಗಳನ್ನು ನಿಯಮಿಸುವುದುಂಟು. .ಅವರ ಕೋರಿಕೆಗಳಿಗೆ