ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೭೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೩೦೦ ೬ ಶ್ರೀಮದ್ರಾಮಾಯಣವು [ಸರ್ಗ. ೫೨, ಮಾಡಿದೆನೆಂದು ಹೇಳು, ಭರತನನ್ನು ಆತನ ಮಾವನ ಮನೆಯಿಂದ ಈಗಲೇ ಕರೆತರಿಸುವಂತೆ ನಮ್ಮ ತಂದೆಗೆ ತಿಳಿಸು. ಆತನು ಬಂದೊಡನೆಯೇ ಅವನಿಗೆ ಪಟ್ಟಾಭಿಷೇಕವನ್ನೂ ನಡೆಸಿಬಿಡುವಹಾಗೆ ಮಾಡು ! (ಪಟ್ಟಾಭಿಷಿಕ್ತನಾದ ಆ ಭರತನನ್ನು ಆಗಾಗ ಆಲಿಂಗಿಸಿಕೊಂಡು ಸಂತೋಷಿಸುತ್ತಿದ್ದರೆ, ನಮ್ಮ ವಿಷಯವಾಗಿ ನಿನಗೆ ಅಷ್ಟಾಗಿ ದುಃಖವುಂಟಾಗ”ವೆಂದು ನಾನು ಹೇಳಿದು ದಾಗಿಯೂ ದಶರಥನಿಗೆ ತಿಳಿಸು. (ತಂದೆಯಾದ ದಶರಥನಲ್ಲಿ ವರ್ತಿಸುತ್ತಿರು ವ ಹಾಗೆಯೇ ಎಲ್ಲಾ ಮಾತೆಯರಲ್ಲಿಯೂ ಪ್ರೀತಿಯಿಂದ ನಡೆದುಕೊಳ್ಳಬೇ ಕೆಂದು ನಾನು ಕೇಳಿಕೊಂಡುದಾಗಿ ಭರತನಿಗೆ ತಿಳಿಸು. ಹೆತ್ತ ತಾಯಿ ಯಾದ ಕೈಕೇಯಿಯಲ್ಲಿ ಆತನಿಗೆ ಸಹಜವಾಗಿಯೇ ಪ್ರೇಮವಿರುವುದು ಅದ ರಂತೆ ಶತ್ರುಘ್ನು ನಮೇಲಿನ ಅಭಿಮಾನದಿಂದ ಸುಮಿತ್ರೆಯಲ್ಲಿಯೂ ಆ ತನು ವಿಶೇಷಪ್ರೇಮವನ್ನು ತೋರಿಸಬಹುದು. ಹಾಗೆಯೇ ನನ್ನ ತಾಯಿಯಾ ದ ಕೌಸಲೈಯನ್ನೂ ತಕ್ಕ ರೀತಿಯಲ್ಲಿ ನಿಷ್ಪಕ್ಷಪಾತವಾಗಿ ಆದರಿಸುತ್ತಿರಬೇ. ಕೆಂದು ನಾನು ಕೇಳಿಕೊಂಡುದಾಗಿಯೂ ಭರತನಿಗೆ ಹೇಳು. ಭರತನಿಗೆ ನನ್ನ ಮಾತಿನಿಂದ ಹೇಳಬೇಕಾದ ಮುಖ್ಯ ವಿಷಯವು ಮತ್ತೊಂದುಂಟು ಎಲೆವ ತೃನೆ!ತಂದೆಯ ಪ್ರೀತ್ಯವಾಗಿಯೇ ನೀನು ಯವರಾಜ್ಯವನ್ನು ಕೈಕೊಂಡಿರ ವೆ! ಇದರಿಂದ ನೀವು ಇಹಪರಸೌಖ್ಯಗಳೆರಡನ್ನೂ ಸಂಪಾದಿಸಬಹುದಲ್ಲದೆ, ಅತ್ತಲಾಗಿ ರಾಷ್ಟ್ರದ ಪ್ರಜೆಗಳಿಗೂ, ಇತ್ತಲಾಗಿ ರಾಜನಿಗೂ ಸೌಖ್ಯವ ನ್ನುಂಟುಮಾಡಬಹುದು. ಆದುದರಿಂದ ನಿನಗೆ ಈಗ ಲಭಿಸಿರುವ ರಾಜ್ಯಾಥಿ ಕಾರವು ಆ ವಿಧವಾದ ಸತ್ಕಾರಗಳಿಂದ ಸಾರ್ಥಕ್ಯವನ್ನು ಹೊಂದುವಂತೆ ಜಾಗರೂಕನಾಗಿರಬೇಕು” ಎಂದು ನನ್ನ ಮಾತಿನಿಂದ ತಿಳಿಸು” ಎಂದನು. ಹೀ ಗೆ ಹೇಳಿ ರಾಮನು ಸುಮಂತ್ರವನ್ನು ಅಯೋಧ್ಯೆಗೆ ಹಿಂತಿರುಗಿ ಹೋಗೆಂ ದು ತ್ವರೆಪಡಿಸುತ್ತಿರಲು, - ಸುಮಂತ್ರನು ದುಃಖದಿಂದ ಕುಗ್ಗಿದವನಾಗಿ, ರಾಮನನ್ನು ಕುರಿತು,ಎಲೈ ರಾಮನೆ!ನಾನೂ ನಿನ್ನಲ್ಲಿ ನಿಷ್ಕಪಟವಾದ ಶಿಯಿಂದ ಒಂದೆರಡುಮಾತುಗಳನ್ನು ಹೇಳಬೇಕೆಂದಿರುವೆನು. ಅದನ್ನು ಲಾ ಲಿಸಬೇಕು. ಇವುಗಳನ್ನು ಉಪಚಾರವಾಕ್ಯಗಳೆಂದೆಣಿಸಬೇಡ! ನಿನ್ನಲ್ಲಿ ನನಗಿ ರುವ ಪ್ರೇಮದಿಂದುಂಟಾದ ಸಲಿಗೆಯಿಂದ ನಾನು ಈಗ ಸೇವಾಧರವನ್ನೂ ಮೀರಿ, ನಿರ್ಭಯವಾಗಿ ಈ ಮಾತುಗಳನ್ನಾಡಬೇಕಾಗಿಬಂದಿರುವುದು ! ಈ