ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܦܘܬ ಶ್ರೀಮದ್ರಾಮಾಯಣವು ಸರ್ಗ, ೨. ಬಿಡುವೆನೆಂದರೆ, ಈ ಅಪ್ರಿಯವಾಕ್ಯವನ್ನು ಹೇಳುವುದು ಹೇಗೆ ? ಸತ್ಯ ವಾಗಿದ್ದ ಮಾತ್ರಕ್ಕೆ ಅಪ್ರಿಯವನ್ನು ನುಡಿಯಬಹುದೆ? ಆಕೆಯ ಆಪಮೃತ್ಯು ವಿಗೆ ನಾನೇ ಕಾರಣನಾಗುವೆನಲ್ಲವೆ? ಅದೂ ಹೋಗಲಿ ! ನಿನ್ನನ್ನೂ , ನಿನ್ನ ಪ್ರಿಯಪತ್ನಿ ಯಾದ ಸೀತೆಯನ್ನೂ , ನಿನ್ನ ಮೋಹದ ತಮ್ಮನಾದ ಲಕ್ಷ ನನ್ನ ರಥದಮೇಲೇರಿಸಿ ಇಲ್ಲಿಗೆ ಕರೆತರುವಾಗ, ಈ ರಥಾಶ್ವಗಳು ನಾನು ಹೇಳಿದಂತೆ ಕೇಳುತಿದ್ದುದೇನೋ ನಿಜವು ನಿಮ್ಮನ್ನು ಇಲ್ಲಿ ಬಿಟ್ಟು ಈ ಶೂ ವ್ಯರಥವನ್ನು ಹಿಂತಿರುಗಿಸಿದರೆ, ಈ ಕುದುರೆಗಳಾದರೂ ನನ್ನ ವಶದಲ್ಲಿರುವು ವೆ? ಎಂದಿಗೂ ನಾನು ಹೇಳಿದಂತೆ ಕೇಳಲಾರವು. ಇದು ನಿಜವು!ನೀನಿಲ್ಲದ ರಥ ವನ್ನು ಕುದುರೆಗಳು ಎಂದಿಗೂ ಎಳೆಯಲೊಲ್ಲವು!ಹೇಗೂ ನಿನ್ನನ್ನು ಬಿಟ್ಟು ನಾನು ಅಯೋಧ್ಯೆಗೆ ಹಿಂತಿರುಗಿ ಹೋಗಲಾರೆನು. ಆದುದರಿಂದ ನಿನ್ನೊಡನೆ ನಾನೂ ಕಾಡಿಗೆ ಬಂದುಬಿಡುವೆನು. ನನಗೆ ಅನುಜ್ಞೆಯನ್ನು ಕೊಡು, ನಾನು ಇಷ್ಟು ವಿಧವಾಗಿ ಕೇಳಿಕೊಳ್ಳುತಿದ್ದರೂ ನೀನು ನನ್ನನ್ನು ಬಿಟ್ಟು ಹೋಗುವು ದೇ ನಿಜವಾದರೆ, ನೀನು ಅತ್ತಲಾಗಿ ತಿರುಗಿದೊಡನೆಯೇ, ನಾನು ಈ ರಥ ದೊಡನೆ ಅಗ್ನಿ ಯಲ್ಲಿ ಬಿದ್ದು ಪ್ರಾಣಬಿಡುವೆನು. ಎಲೈ ರಾಮನೆ ! ನನ್ನಿಂದ ನಿನಗೆ ಅನೇಕ ವಿಧದಲ್ಲಿ ಸಹಾಯಗಳುಂಟು. ಕಾಡಿನಲ್ಲಿ ನಿನ್ನ ತಪಸ್ಸಿಗೆ ವಿಷ್ಣು ವನ್ನುಂಟುಮಾಡುವ ಕೂರಜಂತುಗಳೆಲ್ಲವನ್ನೂ ನಾನು ರಥದಲ್ಲಿ ಕುಳಿತು ಕೊಲ್ಲುತ್ತಾ ಬರುವೆನು. ನೀನು ಪಟ್ಟಾಭಿಷಿಕ್ತನಾದಮೇಲೆ, ನಿನ್ನ ರಥವನ್ನು

  • ಇಲ್ಲಿ '

ತೃತೇನ ಮಯಾ ಲಬ್ಬಂ ರಥಚರಾಕೃತಂ ಸುಖಂ | ಆಶಂಸೇ ತ. ತೇನಾಹಂ ವನವಾಸಕೃತಂ ಸುಖಂ ! ” ಎಂದು ಮೂಲವು. ಇದಕ್ಕೆ ನಿನ್ನನು ಗ್ರಹದಿಂದ ನನಗೆ ಈಗ ನಿನ್ನ ರಥವನ್ನು ನಡೆಸುವುದರಿಂದುಂಟಾಗುವ ಸುಖವು ಲಭಿ ಸಿತು.ಹಾಗೆಯೇ ವನವಾಸದಲ್ಲಿಯೂ ನಿನೊಡನಿದ್ದು ನಿನ್ನ ಉಪಚಾರವನ್ನು ನಡೆಸುವು ದರಿಂದ ಲಭಿಸಬಹುದಾದ ಸುಖವನ್ನೂ ಅಪೇಕ್ಷಿಸುವೆನು.” ಎಂದು ಅಕ್ಷಾಂತರವ. ಇದರಿಂದ “ ನಾನು ಮಂತ್ರಿ ಪ್ರಧಾನವಾಗಿದ್ದರೂ, ನಿನಗೆ ರಥವನ್ನು ನಡೆಸತಕ್ಕ ಮಹಾಭಾಗ್ಯವು ಲಭಿಸುವುದೆಂಬುದಕ್ಕಾಗಿಯೇ,ಸಾರಥಿಕೃತ್ಯವು ನಿಂದ್ಯವಾಗಿದ್ದರೂ ನಾ ನು ಅದನ್ನೇ ಅಂಗೀಕರಿಸಿದನು. ಹೀಗೆಯೇ ವನವಾಸದಲ್ಲಿಯೂ ನಿನ್ನ ಸೇವೆಯಿಂದುಂ ಟಾದ ಸುಖವನ್ನನುಭವಿಸಬೇಕೆಂದು ಕೋರುವೆನು.” ಎಂದು ಹೇಳಿದುದಾಗಿ ಮಹೇಶ್ವ ರತೀರವ್ಯಾಖ್ಯಾನವು. ..........