ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

SyY ಶ್ರೀಮದ್ರಾಮಾಯಣವು ಸರ್ಗ: ೫೨, ಇನ್ನು ಈಗ ಅಯೋಧ್ಯೆಗೆ ಕಳುಹಿಸುವುದಕ್ಕೆ ಅವಶ್ಯವಾದ ಕಾರಣವುಂಟು. ನೀನು ಈಗ ಪಟ್ಟಣಪ್ರವೇಶವನ್ನು ಮಾಡಿದರೆ, ಕೈಕೇಯಿಗೆ ನಾನು ಕಾಡಿಗೆ ಹೊರಟುಹೋದೆನೆಂದು ಸಂಪೂರ್ಣವಾದ ನಂಬಿಕೆಯುಂಟಾಗುವುದು - ಹಾಗಿಲ್ಲದಿದ್ದರೆ ಅವಳಿಗೆ ಆ ಸಂದೇಹವು ತಪ್ಪವುದೇ ಇಲ್ಲ. ಅವಳಿಗೆ ಈ ನಂಬಿಕೆಯುಂಟಾಗುವವರೆಗೂ ಅವಳ ಮನಸ್ಸಿಗೆ ನೆಮ್ಮದಿಯಿರುವು ದಿಲ್ಲ. ರಾಜನಲ್ಲಿಯೂ ಸುಳ್ಳು ಹೇಳಿರುವನೆಂದು ಅವಳಿಗೆ ಸಂದೇಹವುಂಟಾಗು ವುದು. ಧಾರಿ ಕನಾದ ಆತನಲ್ಲಿ ಇಲ್ಲದ ಅಪವಾದವನ್ನು ಹೊರಿಸುವಳು ನೀನು ಇಲ್ಲಿಂದ ಹಿಂತಿರುಗಿ ಹೋದರೆ ಅವಳಿಗೆ ಆ ಸಂದೇಹವೆಲ್ಲವೂ ತಪ್ಪ. ವುದು. ಆಗ ದಶರಥನನ್ನೂ ಪ್ರೀತಿಯಿಂದ ಆದರಿಸುವಳು. ಆದುದರಿಂದ ನೀನು ಹೋಗಿ ಮೊದಲು ಅವಳಿಗೆ ಈ ವೃತ್ತಾಂತವನ್ನು ತಿಳಿಸುವುದು, ಮವು, ಎಲೆ ಸುಮಂತ್ರನೆ ! ನನ್ನ ಬಲತಾಯಿಯಾದ ಕೈಕೇಯಿಯು, ತನ್ನ ಮಗನಾದ ಭರತನಿಂದ ಸುರಕ್ಷಿತವಾಗಿ ಪಾಲಿಸಲ್ಪಡುತ್ತಿರುವ ಸಮೃದ್ಧ ವಾದ ಈ ರಾಜ್ಯವನ್ನು ನೋಡಿ, ಸಂತೋಷಿಸುತ್ತಿರಬೇಕೆಂಬುದೇ ನನ್ನ ಮುಖ್ಯೋದ್ದೇಶವು, ನೀನು ನನಗೂ, ರಾಜನಿಗೂ ನಿಜವಾಗಿ ಪ್ರಿಯವನ್ನು ೦ ಟುಮಾಡಬೇಕೆಂದಿದ್ದರೆ, ಈ ರಥವನ್ನು ಹಿಂತಿರುಗಿಸಿಕೊಂಡು ಈಗಲೇ ಅಯೋಧ್ಯೆಗೆಕೊರಡು, ಮತ್ತು ನಾನು ನಿನಗೆ ಹೇಳಿರುವ ವಿಷಯಗಳೆಲ್ಲ ವನ್ನೂ ಅವರವರಿಗೆ ಯಥಾವತ್ತಾಗಿ ತಿಳಿಸು.”ಎಂದು ಹೇಳಿ, ಆ ಸುಮಂತ್ರ ನನ್ನು ಅನೇಕ ವಿಧದಲ್ಲಿ ಸಮಾಧಾನಪಡಿಸಿದನು. ಆ ಮೇಲೆ ಗುಹನನ್ನು ನೋಡಿ ಯುಕ್ತಿಯುಕ್ತಗಳಾದ ಮಾತುಗಳಿಂದ ಎಲೆ ಸಖನೆ! ನೀನು ನನ್ನ ನ್ನು ಇಲ್ಲಿ ಯೇ ನಿಲ್ಲೆಂದು ಹೇಳುವೆಯಲ್ಲವೆ ? ಜನಸಂಚಾರವುಳ್ಳ ಈ ವನಪ್ರದೇಶದಲ್ಲಿ ನಾನು ನಿಂತುಬಿಡುವುದು ಸರಿಯಲ್ಲ. ನಾನು ಆಶ್ರಮಗಳಲ್ಲಿಯೇ ಇದ್ದು ಈ ವನವಾಸಕಾಲವನ್ನು ಕಳೆಯಬೇಕು. ತಂದೆಯಾಜ್ಞೆಯೂ ಹಾಗೆಯೇ ಆಗಿರು ವುದು. ಆತನ ಆಜ್ಞೆಯನ್ನನುಸರಿಸಿ ನಡೆಯಬೇಕಾದುದೇ ಯುಕ್ತವಾದುದ ರಿಂದ, ನಾನು ತಪಸ್ಸಿಗಳಿಗೆ ಭೂಷಣವಾದ ವ್ರತವನ್ನು ಕೈಕೊಂಡು,ಜಟಾ ಧಾರಿಯಾಗಿವನಕ್ಕೆ ಹೋಗುವೆನು.ಇದರಿಂದತಂದೆಗೂ ಕ್ಷೇಮವುಂಟು,*ಸೀತಾ * ಇಲ್ಲಿ ರಾಮನು ಜಡೆಯನ್ನು ಧರಿಸುವುದು ಸೀತಾಲಕ್ಷಕರಿಗೆ ಪ್ರಿಯವಲ್ಲ