ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೧೫ ಸರ್ಗ. ೫೨] ಅಯೋಧಾ ಕಾಂಡವು. ಲಕ್ಷಣರಿಗೂ ಇದರಿಂದ ಶ್ರೇಯಸ್ಸುಂಟು. ಆದುದರಿಂದ ಈಗಲೇ ನಾನು ಜಡೆಯನ್ನು ಧರಿಸುವೆನು, ಆಲದ ಹಾಲನ್ನು ತರಿಸು. ಆಮೇಲೆ ಮುಂದೆ ಹೊರ ಡುವೆನು.”ಎಂದನು. ಒಡನೆಯೇ ಗುಹನು ಆ ಹಾಲನ್ನು ತರಿಸಿಡಲು, ಅದರಿಂದ ಮೊದಲು ಲಕ್ಷಣನಿಗೆ ಜಡೆಯನ್ನು ಕಲ್ಪಿಸಿ, ಪುರುಷಶ್ರೇಷ್ಠನೆನಿಸಿಕೊಂಡ ರಾಮನೂ ಜಟಾಧಾರಿಯಾದನು.ಹೀಗೆ ಜಡೆಯನ್ನು ಧರಿಸಿ, ನಾರುಮಡಿಯನ್ನು ಟ್ಟು ನಿಂತಿದ್ದ ಅಣ್ಣತಮ್ಮಂದಿರಾದ ರಾಮಲಕ್ಷ್ಮಣರಿಬ್ಬರೂ ಇಬ್ಬರು ಋ ಷಿಕುಮಾರರಂತೆ ಶೋಭಿಸುತ್ತಿದ್ದರು. ಹೀಗೆ ರಾಮನು ಲಕ್ಷಣನೊಡನೆ*ವೈ ಖಾನಸವೃತ್ತಿಯನ್ನ೦ಗೀಕರಿಸಿ, ವ್ರತವನ್ನು ಹಿಡಿದಮೇಲೆ,ಸಮೀಪದಲ್ಲಿದ್ದ ತ ಪ್ರಿಯಮಿತ್ರನಾದ ಗುಹನನ್ನು ನೋಡಿ, ಮಿತ್ರನೆ! ರಾಜ್ಯ ರಕ್ಷಣೆಯೆಂಬ ದು ಸುಲಭವಲ್ಲ. ಆದುದರಿಂದ ನೀನು ಬಹುಜಾಗರೂಕನಾಗಿದ್ದು, ನಿನ್ನ ಚತುರಂಗಸೈನ್ಯಗಳನ್ನೂ , ನಿನ್ನ ಬೊಕ್ಕಸಬಂಡಾರಗಳನ್ನೂ, ಕೋಟೆ ಕೊತ್ತ ಲಗಳನ್ನೂ, ರಾಷ್ಟ್ರಗಳನ್ನೂ ನೋಡಿಕೊಳ್ಳುತ್ತಿರಬೇಕು” ಎಂದುಹೇಳಿ, ಆ ಮೇಲೆ ಆತನ ಅನುಮತಿಯನ್ನು ಪಡೆದು, ಸೀತಾಲಕ್ಷ್ಮಣರೊಡನೆ ಮುಂ ದಕ್ಕೆ ಹೊರಟನು. ಗಂಗಾತೀರಕ್ಕೆ ಹೋಗಿ ಅಲ್ಲಿ ಲಕ್ಷಣವನ್ನು ನೋ ದಿದ್ದರೂ, ಹಿತವಾದುದೆಂದು ಗ್ರಹಿಸಬೇಕು. ಹೀಗೆ ರಾಮನು ಜಟಾಧಾರಿಯಾಗುವ ದರಿಂದ ಸಹಧರಚಾರಿಣಿಯಾದ ಸೀತೆಯೂ, ಅಣ್ಣನಲ್ಲಿ ಭಕ್ತಿಯುಳ್ಳ ಲಕ್ಷಣನೂ ಅವನನ್ನೇ ಅನುಸರಿಸಿರಬೇಕಾಗಿಬರುವುದರಿಂದ, ಅವರಿಬ್ಬರಿಗೂ ಆ ದರವು ಸಿದ್ದಿಸುವು ದಲ್ಲವೆ? ಆದುದರಿಂದ ಇದು ಅವರಿಗೆ ಹಿತಕರವಾದುದೆಂಬುದೇ ಸಿದ್ದವು,

  • ಇಲ್ಲಿ ರಾಮನು ವಾನಪ್ರಸ್ತಧರ ಗಳೆಲ್ಲವನ್ನೂ ಅಂಗೀಕರಿಸಿದನೆ? ಅಥವಾ ಅವು ಗಳಲ್ಲಿ ಒಂದೆರಡನ್ನು ಮಾತ್ರ ಅವಲಂಬಿಸಿದನೇ ? ಎಂದು ಶಂಕೆಯುಂಟಾಗುವುದು ಪೂರ್ಣವಾಗಿ ಅಂಗೀಕರಿಸಿದನೆಂದು ಹೇಳುವುದಕ್ಕಿಲ್ಲ, ಹಾಗೆ ಸಂಪೂರ್ಣವಾಗಿ ವಾನ ಪ್ರಸ್ಥವನ್ನಾಶ್ರಯಿಸಿದವನು ಪುನಃ ಗೃಹಸ್ಥಾಶ್ರಮಕ್ಕೆ ಬರಲಾಗದು. ಹಾಗೆ ಬಂದರೆ “ಆರೂಢಪಶಿರೋಹಿ ಖ:' ಎಂಬಂತೆ ನಿಂದಾಸ್ಪದವಾಗುವುದು, ಅವುಗಳಲ್ಲಿ ಒಂದರ ಡನ್ನು ಮಾತ್ರ ಅವಲಂಬಿಸಿದನೆಂದೂ ಹೇಳುವುದಕ್ಕಿಲ್ಲ, ಹೀಗೆ ಆಶ್ರಮದಲ್ಲಿ ವಾಸ ಮಾಡುವುದು ಹಾಸ್ಯಾಸ್ಪದವು, ಆದುದರಿಂದ ಈತನು ಯುಧಿಷ್ಠಿರಾದಿಗಳ ಸನ್ಯಾಸ ಧರದಂತೆ ಪಿತೃವಿಯೋಗದಿಂದುಂಟಾದ ಸಾಂಕಿಕವಾದ ನಿಯಮವಿಶೇಷವನ್ನು ಅಂಗೀಕರಿಸಿದ್ದನೆಂದು ಹೇಳಿದರೆ ದೋಷವಿಲ್ಲವೆ. 'ಸಮ್ಮರ್ ಸಂಕಲ್ಪಜ: ಕಾಮೋ ಧರಮೂಲಮಿದಂ ಸ್ಮತಂ' ಎಂದು ಮನುವಾಕ್ಯವುಂಟು.