ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೧೭ 0 ಸರ್ಗ. ೫೨. ಅಯೋಧ್ಯಾಕಾಂಡವು, ಕೇಮದಿಂದ ಹಿಂತಿರುಗಿ ಬರುವಾಗ, ಸಂತೋಷದಿಂದ ನಿನ್ನನ್ನು ಪೂಜಿಸುವೆ ನು. ಆಗಲೇ ನನ್ನ ಎಲ್ಲಾ ಕೋರಿಕೆಗಳೂ ಕೈಗೂಡಿದಂತಾಗುವುದು. ಆಗ ಅತ್ಯುತ್ಸಾಹದಿಂದ ನಿನ್ನನ್ನು ಆರಾಧಿಸುವೆನು.ಎಲೆದೇವಿ!ನೀನು ಮೂರು ಕದಲ್ಲಿಯೂ ಸಂಚರಿಸತಕ್ಕ ಮಹಾಮಹಿಮೆಯುಳ್ಳವಳು. ಬ್ರಹ್ಮಲೋಕವೂ ಕೂಡ ನಿನ್ನ ದೃಷ್ಟಿಗೆ ಗೋಚರವಾಗಿರುವುದು. ಸಮುದ್ರರಾಜನಿಗೆ ನೀನು ಪ್ರಿಯಪತ್ತಿ ಯೆನಿಸಿಕೊಂಡಿರುವೆ.ಲೋಕದಲ್ಲಿ ನಿನಗೆ ಅಸಾಧಾರಣವಾದ ಪ್ರ ಸಿದ್ದಿಯುಂಟು. ನಿನಗೆ ನಮಸ್ಕರಿಸುವೆನು. ಅನೇಕ ವಿಧದಲ್ಲಿ ನಿನ್ನನ್ನು ಸ್ತುತಿ ಸುವೆನು. ಪುರುಷಶ್ರೇಷ್ಠನಾದ ಈ ನನ್ನ ಪತಿಯು ಕ್ಷೇಮದಿಂದ ಹಿಂತಿರುಗಿ ಬರುವಂತೆ ನೀನು ಅನುಗ್ರಹಿಸುವುದಾದರೆ, ನಾನು ಬಂದೊಡನೆಯೇ ನಿನ್ನ ಪ್ರೀತ್ಯರ್ಥವಾಗಿ ಬ್ರಾಹ್ಮಣರಿಗೆ ಲಕ್ಷಸಂಖ್ಯೆಯಿಂದ ಗೋದಾನವನ್ನೂ , ಅ ದಾನವನ್ನೂ, ವಸ್ತ್ರದಾನವನ್ನೂ ಮಾಡುವೆನು.ಮತ್ತು ನಾನು ಹಿಂತಿರುಗಿ ಬಂದಕೂಡಲೆ ನಿನಗೆ ಸಾವಿರಾರುಫುಟಗಳಲಿ ಮದವನೂ ಅರ್ಪಿಸುವೆನು. ಆಹಾರಾರ್ಥವಾಗಿ ಮಾಂಸರಾತಿಯನ್ನೂ ಸಮರ್ಪಿಸುವೆನು. ನಿನ್ನ ತೀರದಲ್ಲಿ ವಾಸವಾಗಿರತಕ್ಕ ಸಮಸ್ತ ದೇವತೆಗಳನ್ನೂ ತೃಪ್ತಿಪಡಿಸುವೆನು. ಮತ್ತು ನಿನ್ನ ತೀರದಲ್ಲಿ ಮಣಿಕರ್ಣಿಕೆ ಮೊದಲಾದ ಯಾವ ಪುಣ್ಯತೀರ್ಥಪುಟ್ಟಗ ಕುಂಟೋ,ಕಾತಿ ಮೊದಲಾದಯಾವಪುಣ್ಯಕ್ಷೇತ್ರಗಳುಂಟೋ, ಅವೆಲ್ಲವನ್ನೂ ಪೂಜಿಸುವೆನು. (ಎಲೈ ಪುಣ್ಯಾತ್ಮಳೆ! ಮಹಾಭುಜನಾದ ಈ ನನ್ನ ಪತಿಯು ಲಕ್ಷಣನೊಡನೆಯೂ, ನನ್ನೊಡನೆಯೂ ಕೂಡಿ ವನವಾಸವನ್ನು ಮುಗಿಸಿ ಕೊಂಡು ಕ್ಷೇಮದಿಂದ ಈ ಅಯೋಧ್ಯೆಗೆ ಹಿಂತಿರುಗಿಬರುವಂತೆ ಅನುಗ್ರಹಿ ಸು!” ಎಂದು ಗಂಗೆಯನ್ನು ಪ್ರಾರ್ಥಿಸುತ್ತಿರುವಾಗಲೇ ನಾವೆಯು ಆ ನದಿ ಯ ದಕ್ಷಿಣತೀರವನ್ನು ಸೇರಿತು. ಅಲ್ಲಿ ಮಹಾಬಾಹುವಾದ ರಾಮನು ಸೀ ತಾಲಕ್ಷ್ಮಣರೊಡನೆ ನಾವೆಯಿಂದಿಳಿದು ಮುಂದಕ್ಕೆ ಪ್ರಯಾಣಮಾಡು ತಿರುವಾಗ, ಸುಮಿತ್ರಾನಂದವರ್ಧಕನಾದ ಲಕ್ಷಣವನ್ನು ಕುರಿತು, (ಎಲೆವನೆ! ಇನ್ನು ನೀನು ಬಹುಜಾಗರೂಕನಾಗಿರಬೇಕು. ವಿಶೇಷವಾಗಿ ಜನರು ತುಂಬಿದ್ದರೂ, ಅಥವಾ ನಿರ್ಜನವಾದ ಪ್ರದೇಶವಾಗಿದ್ದರೂ ನೀನು ಎಚ್ಚರದಿಂದ ಕಾವಲಿರಬೇಕು. ಅದರಲ್ಲಿಯೂ ಮುಖ್ಯವಾಗಿ ನಾವು ಎಂದೂ ಕಾಣದ ಇಂತಹ ನಿರಾನುಹ್ಯವಾದ ಪ್ರದೇಶದಲ್ಲಿ ಬಹಳ ಎಚ್ಚರಿಕೆಯಿಂದಿರ