ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೮ ಸರ್ಗ, ೨.] ಅಯೋಧ್ಯಾಕಾಂಡವ. ಬಹಳವಾಗಿ ಬಳಲಿರುವೆನು. ಆದುದರಿಂದ ಈ ಪ್ರಜಾಕ್ಷೇಮಕಾತ್ಯಕ್ಕಾಗಿ ನನ್ನ ಹಿರಿಯಮಗನಸಿ ಟ್ಯ, ನಾನು ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕೆಂ ಬರುವೆನು. ಇದಕ್ಕಾಗಿ ಇಲ್ಲಿರತಕ್ಕ ಬ್ರಾಹ್ಮಣಶ್ರೇಷ್ಟರ ಅನುಮತಿಯನ್ನೇ ಇರುನೋಡುತ್ತಿರುವೆನು. ನನ್ನ ಜೈಷ್ಠ ಪುತ್ರನಾದ ರಾಮನ ಅರ್ಹತೆಯ ವಿಷಯದಲ್ಲಿ, ನಾನು ನಿಮಗೆ ಹೇಳಿ ತಿಳಿಸಬೇಕಾದುದೇನೂ ಇಲ್ಲ!ಇತರಗುಣ ಗಳ ವಿಷಯದಲ್ಲಿಯೂ, ಆತನು ನನಗಿಂತಲೂ ಯಾವಭಾಗದಲ್ಲಿಯೂ ಕಡಿಮೆ ಯಾದವನಲ್ಲ! ವೀರದಲ್ಲಿ ಇಂದ್ರನಿಗೆ ಸಮಾನನಾಗಿರುವನು! ಶತ್ರಾಪಟ್ಟಣ ಗಳನ್ನು ಜಯಿಸುವುದರಲ್ಲಿ ಅಸಾಧಾರಣವಾದ ಪರಾಕ್ರಮವುಳ್ಳವನು. ಥರ ಜ್ಞರಲ್ಲಿ ಶಿರೋರತ್ನ ಪ್ರಾಯನಾಗಿರುವನು. ಪುರುಷಶ್ರೇಷ್ಠನೆನಿಸಿಕೊಂಡು, ಪುಷ್ಯ ನಕ್ಷತ್ರದೊಡಗೂಡಿದ ಚಂದ್ರನಂತೆ, ಸತ್ವಲೋಕಾಹ್ವಾದಕನಾದ ಆ ರಾಮನನ್ನು ಈಗಲೇ ಯ ರಾಜ್ಯದಲ್ಲಿರಿಸಬೇಕೆಂದು ಉದ್ದೇಶಿಸಿರುವೆ ನು. “ಅಪ್ರಮೇಯವಾದ ಮಹಾತೇಜಸ್ಸುಳ್ಳವನಾಗಿ,ಲಕ್ಷಿ ವರ್ಧನನಾಗಿ, --

  • ಇದಕ್ಕೆ ಅನುರೂಪಸ್‌ವೈ ನಾಥೋ ಲಕ್ಷವಾ೯ ಲಕ್ಷ್ಮಣಾಗ್ರಜ: | ತ್ರೆ, ಲೋಕ್ಯಮಪಿ ನಾಥೇವ ಯೇನ ಸ್ಯಾನ್ನಾಥವರಂ!!” ಎಂಬುದು ಮೂಲಶೋಕವು.ಶ್ರೀ ರಾಮನ ಗುಣಾನುವರ್ಣನರೂಪವಾದ ಈ ಶ್ಲೋಕಕ್ಕೆ ಆತನಲ್ಲಿರುವ ಭಗವದಂಶವನ್ನು ಸೂಚಿಸುವಂತೆ ಭಗವತ್ಪರವಾದ ಕೆಲವು ವಿಶೇಷಾರಗಳು ಹೇಳಲ್ಪಟ್ಟಿರುವವ, ಹೇಗಂ ದರೆ:- (ಸ:) ಆ ರಾಮನು (ಅನುರೂಪ: ನಾಥ: ಸಹಜವಾದ ಪ್ರಭುವು, ಎಂದರೆ ಇತರ ರಾಜಾಧಿರಾಜರಂತೆ ತಮ್ಮ ಪೂರೈಕರಾನುಗುಣವಾಗಿ ಪ್ರಭುಪದವಿಯನ್ನು ಪಡೆದವನಲ್ಲ. ಈತನೇ ತ್ರೈಲೋಕ್ಯಕ್ಕೂ ಸಹಜವಾದ (ನಿಜವಾದ) ಪ್ರಭುವೆಂದರವ, ಇತರದೇವತೆ ಗಳೂ, ರಾಜರೂ, ಔಪಾಧಿಕವಾದ ಮತ್ತು ನಶ್ವರವಾದ ಪ್ರಭುತ್ವವನ್ನು ಪಡೆದವರೆಂ ದೂ,ಈತನೇಚರಾಚರಾತ್ಮಕವಾದ ಸಕಲಪ್ರಪಂಚ ಸ್ವತಸ್ಸಿದ್ದನಾದ ಪ್ರಭುವೆಂದೂ ಭಾವವ. ಅಥವಾ (ಅನುರೂಪ:) ಅನುಕೂಲವಾದ ರೂಪವುಳ್ಳವನು ಆನಂದಮಯ ವಾದ ದಿವ್ಯ ಸುಂದರನಿಗ್ರಹವುಳ್ಳವನು, ಅಥವಾ, (ಅನುರೂಪ: ಅನುಗತವಾದ (ಒಳ ಗಡಗಿದರೂಪವುಳ್ಳವನು.ಸಮಸ್ತ ವಸ್ತುವನ್ನೂ ವ್ಯಾಪಿಸಿರುವ ರೂಪವುಳ್ಳವನು,ಸರಾಂ ತರಾಮಿಯೆಂದು ಭಾವವು, ಅಥವಾ (ಅನುರೂಪ:) ಅನುಕ್ರವಿಷ್ಟವಾದ ರೂಪವುಳ್ಳ ವನು. ಎಂದರೆ ಎಲ್ಲವನ್ನೂ ಅನುಸರಿಸಿದ ರೂಪವುಳ್ಳವನು. ಸರಶರೀರಿಯೆಂದು ಭಾ ವವು. ಅಥವಾ (ಅನುರೂಪ:) ಅನುಸ್ಮತವಾದ ನಾನಾರೂಪವುಳ್ಳವನು, ಪರವೂ ಹಾ

19