ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

'&೨೩ ಸರ್ಗ. ೫೩.] ಅಯೋಧ್ಯಾಕಾಂಡವು. ಗಿರಲಿ ! ನನಗೆ ಕೋಪವುಂಟಾದರೆಮಾತ್ರ ಯಾರೂ ತಡೆಯಲಾರರು. ಈ ಅಯೋಧ್ಯೆಯನ್ನು ಮಾತ್ರವೇ ಅಲ್ಲ. ಸಮಸ್ತಭೂಮಂಡಲವನ್ನಾದರೂ ಬಾ ಣಗಳಿಂದ ಇತರರ ಸಹಾಯವಿಲ್ಲದೆ ನಾನೊಬ್ಬನೇ ಆಕ್ರಮಿಸಬಲ್ಲೆನು. ಹೀಗಿ ದರೂ ನಿಷ್ಕಾರಣವಾಗಿ ನನ್ನ ವೀರವನ್ನು ಪಯೋಗಿಸಬಾರದೆಂದು ಸುಮ್ಮ ನಿರುವೆನು. ಆದರೆ ಹೇತುವಾದ ಕಾವ್ಯದಲ್ಲಿ ವೀರವನ್ನು ಸಾಧನವನ್ನಾಗಿ ಉ ಪಯೋಗಿಸಬಾರದಲ್ಲವೆ? ಆದುದರಿಂದ ಧಕ್ಕೆ ಹಾನಿಯುಂಟಾಗುವುದೆಂಬಭಯ ದಿಂದಲೂ,ಪರಲೋಕಪ್ರಾಪ್ತಿಯು ಕೆಡುವುದೆಂಬಶಂಕೆಯಿಂದಲೂ, ನಾನಾ ಗಿಯೇ ಅಭಿಷೇಕಕ್ಕೆ ಇಷ್ಟಪಡದೆ ಇತ್ತಲಾಗಿ ಹೊರಟುಬಂದೆನು. ಆಧ ರಕ್ಕೂ, ಪರಲೋಕಕ್ಕೂ ಹೆದರಿ ನಾನು ಹೀಗೆ ಸುಮ್ಮನಿರುವೆನೇಹೊರ ತು, ಈ ಲೋಕದಲ್ಲಿ ನನಗೆ ಬೇರೊಬ್ಬರ ಭಯವಿಲ್ಲವು. ” ಎಂದನು. ಹೀಗೆ ರಾಮನು ಇನ್ನೂ ಅನೇಕ ವಿಧದಲ್ಲಿ ದುಖದಿಂದ ವಿಲಪಿಸಿ, ಜನಶೂನ್ಯ ವಾದ ಆ ಕಾಡಿನಲ್ಲಿ ಕಣ್ಣೀರನ್ನು ಸುರಿಸುತ್ತಾ ಹಾಗೆಯೇ ಸುಮ್ಮನಾದನು. ಹೀಗೆದೈನ್ಯದಿಂದ, ಜ್ವಾಲೆಯಿಲ್ಲದ ಅಗ್ನಿ ಯಂತೆಯೂ, ವೇಗವಿಲ್ಲದ ಸ ಮುದ್ರದಂತೆಯೂ ಸುಮ್ಮನಾಗಲು, ಲಕ್ಷಣನು ಆತನನ್ನು ಅನೇಕ ವಿಧದಲ್ಲಿ ಸಮಾಧಾನಪಡಿಸಿ, 11 ಅಣ! ಮಹಾವೀರನಾಗಿಯೂ, ರಾಜಪದವಿಗೆ ಅರ್ಹನಾಗಿಯೂ ಇರುವ ನೀನು ಅಯೋಧ್ಯೆಯನ್ನು ಬಿಟ್ಟು, ಬಂದುದರಿಂದ, ಈಗ ಆ ಪಟ್ಟಣವು ಚಂದ್ರನಿಲ್ಲದ ರಾತ್ರಿಯಂತೆ ಕೇವಲ ಕಾಂತಿಹೀನವಾಗಿರುವುದೆಂಬುದರಲ್ಲಿ ಸಂದೇಹವೇ ಇಲ್ಲ!ಆದರೂ ಪುರುಷಶ್ರೇ ಸ್ಥನಾದನೀನು ಹೀಗೆ ದುಃಖಿಸುವುದು ಸರಿಯಲ್ಲ!ಇದರಿಂದ ನನಗೂ, ಈ ಸೀತೆ ಗೂ ದುಃಖವನ್ನು ಹೆಚ್ಚಿಸಿದಂತಾಗುವುದೇ ಹೊರತು ಬೇರೆಯಲ್ಲ! ಬೆಳಗಾದ ಮೇಲೆ ಅಯೋಧ್ಯೆಗೆ ಹೋಗೆಂದು ನನಗೆ ಹೇಳಿದೆಯಲ್ಲವೆ? ಎಲೈ ಆರನೆ ! ಮುಖ್ಯವಾಗಿ ಒಂದುವಿಷಯವನ್ನು ಹೇಳುವೆನು ಕೇಳು; ಈ ಸೀತೆಯಾಗಲಿ, ನಾನಾಗಲಿ ನಿನ್ನನ್ನು ಬಿಟ್ಟುಹೋದಮೇಲೆ, ನೀರಿನಿಂದ ಹೊರಕ್ಕೆ ತಂದು ಹಾಕಿದ ಮೀನಿನಂತೆ, ಹಿಂದುಮುಹೂರ್ತಕಾಲವಾದರೂ ಬದುಕಿರಲಾರೆವು. ನಿನ್ನನ್ನು ಬಿಟ್ಟು ನಾನು ತಂದೆಯನ್ನಾಗಲಿ, ತಮ್ಮ ನಾದ ಶತ್ರುಘ್ನು ನಾ ಗಲಿ, ತಾಯಿಯಾದ ಸುಮಿತ್ರೆಯನ್ನಾಗಲಿ, ನೋಡಬೇಕೆಂದು ಆಸೆಪಡುವ