ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೨೪ ಶ್ರೀಮದ್ರಾಮಾಯಣವು [ಸಗ. . ವಸಲ್ಲ! ಕೊನೆಗೆ ಸ್ಪರಲೋಕವನ್ನೂ ನಾನು ಅಪೇಕ್ಷಿಸುವನಲ್ಲ! ಇದುನಿಜವು” ಎಂದನು. ಆಮೇಲೆ ರಾಮಲಕ್ಷ್ಮಣರಿಬ್ಬರೂ ಆ ಭೋಜನಸ್ಥಾನದಲ್ಲಿಯೇ ನಿಶ್ಚಿಂತರಾಗಿ ಸ್ವಲ್ಪ ಕಾಲದವರೆಗೆ ಕುಳಿತಿದ್ದು, ಆಮೇಲೆ ಅಲ್ಲಿಗೆ ಸಮೀಪದಲ್ಲಿ ಆಲದಮರದಕೆಳಗೆ ಲಕ್ಷಣನು ಸಿದ್ಧಪಡಿಸಿಟ್ಟ ಹಾಸಿಗೆಯನ್ನು ನೋಡಿ, ಅಲ್ಲಿ ಹೋಗಿ ಸುಖವಾಗಿ ಮಲಗಿದ್ದರು *ಲಕ್ಷಣನು ಹೇಳಿದ ಯುಕ್ತಿ ಯುಕ್ತವಾದ ಮಾತುಗಳೆಲ್ಲವನ್ನೂ ರಾಮನು ಅತ್ಯಾದರದಿಂದ ಕೇಳಿ, ಲಕ್ಷಣನೊಡನೆಯೇ ಆ ಹದಿನಾಲ್ಕು ವರ್ಷಗಳನ್ನೂ ವಾನಪ್ರಸ್ಥಧರ ದಿಂದ ಕಳೆಯುವುದಾಗಿ ಸಂಕಲ್ಪಿಸಿಕೊಂಡನು. ರಘುವಂಶವರ್ಧನರಾದ ಆ ರಾಮಲಕ್ಷ್ಮಣರಿಬ್ಬರೂ ಮಹಾಬಲಾಡ್ಯರಾದುದರಿಂದ, ನಿರ್ಜನವಾದ ಆ ಘೋರಾರಣ್ಯದಲ್ಲಿಯೂಕೊಡ, ಬೆಟ್ಟದ ತಪ್ಪಲುಗಳಲ್ಲಿ ತಿರುಗುತ್ತಿ ರುವ ಸಿಂಹಗಳಂತೆ ನಿರ್ಭಯರಾಗಿ ಸಂಚರಿಸುತಿದ್ದರು. ಇಲ್ಲಿಗೆ ಐವತ್ತು ಮೂರನೆಯ ಸರ್ಗವು,

  • ಇಲ್ಲಿ 'ಸ ಲಕ್ಷಣಸ್ತೋತ್ರಮಪುಷ್ಕಲಂ ವಚೊ ನಿಶಮ್ಯಚೈವಂ ವನವಾ ಮಾದರಾತ್ ! ಸಮಾಸ್ಸಮಸ್ತಾ ವಿದಧೇ ಪರಂತಪ: ಪ್ರಪದ್ಯ ಧರಂ ಸುಚಿರಾಯ ? ಘವ:” ಎಂದು ಮೂಲವು. ಇದಕ್ಕೆ ಮಹೇಶ್ವರತೀರರು ಬರೆದ ವ್ಯಾಖ್ಯಾನುಸಾ ವಾಗಿ, “ರಾಮನು, ತನಗೆ ಲಕ್ಷಣನು ವನವಾಸದ 'ಏಷಯವನ್ನು ಕುರಿತು ಹೇಳಿ ಮಾತುಗಳೆಲ್ಲವನ್ನೂ ಅತಿಪ್ರೀತಿಯಿಂದ ಕೇಳಿ, ತಾನು ಧರದೃಷ್ಟಿಯುಳ್ಳವನಾಗಿ, ಅಕ್ಷರನಿಗೆ ಆ ಸಂವತ್ಸರಗಳೆಲ್ಲವನ್ನೂ ತನ್ನೊಡನೆ, ವನವಾಸದಲ್ಲಿ ಕಳೆಯುವುದ ಅನುಮತಿಯನ್ನು ಕೊಟ್ಟನು' ಎಂಬುದಾಗಿ ಅರ್ಧಾ೦ತರವು ವಿವರಿಸಲ್ಪಟ್ಟಿದೆ,