ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೪೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸರ್ಗ, ೨.] ಅಯೋಧ್ಯಾಕಾಂಡವು. ನಮ್ಮ ರಾಮನು, ದೊಡ್ಡ ಆನೆಯಮೇಲೆ ಕುಳಿತು, ರಾಜಚಿಹ್ನವಾದ ಶ್ವೇತ ಚ್ಛತ್ರವು ನೆತ್ತಿಯಮೇಲೆ ಪ್ರಕಾಶಿಸುತ್ತಿರಲು, ಬೀದಿಯಲ್ಲಿ ಮೆರವಣಿಗೆ ಬರುವದನ್ನು ಕಣ್ಣಾರೆಕಂಡು ತೃಪ್ತಿ ಹೊಂದಬೇಕೆಂದು ನಮಗೂ ಬಹಳ ಆಸೆಯುಂಟು.”ಎಂದರು. ಹೀಗೆ ಅವರೆಲ್ಲರೂ ಹೇಳುತ್ತಿರುವುದನ್ನು ಕೇಳಿ,ದಶ ರಥನು, ಅವರ ಮನಸ್ಸಿನ ಸಂತೋಷವನ್ನು ಚೆನ್ನಾಗಿ ಕಂಡುಕೊಂಡಿದ್ದರೂ, ತಿಳಿಯದಂತೆಯೇ ನಟಿಸುತ್ತ, ಅವರ ಬಾಯಿಯಿಂದ ಅದನ್ನು ಇನ್ನೂ ಸ್ಪ ವ್ಯವಾಗಿ ಹೊರಡಿಸಬೇಕೆಂದುತಿಸಿ, (( ಎಲೈ ರಾಜರೆ ! ನಾನು ರಾಮನಿಗೆ ಅಭಿಷೇಕವನ್ನು ಮಾಡಬೇಕೆಂಬ ಮಾತನ್ನು ಸೂಚಿಸಿದೊಡನೆಯೇ, ನೀವು ಹಿಂದುಮುಂದಾಲೋಚಿಸದೆ, ರಾಮನೇ ಪ್ರಭುವಾಗಿರಬೇಕೆಂಬ ಏಕಾಭಿ ಪ್ರಾಯವನ್ನು ಸೂಚಿಸಿಬಿಟ್ಟಿರಲ್ಲವೆ ? ಇದರಿಂದ ನನಗೆ ಸ್ವಲ್ಪ ಸಂದೇಹ ರಿಕೆಗಳಿಗೆ ಯಾವ ತಡೆಯೂ ಇಲ್ಲವಲ್ಲವೆ? ಎಂದು ಭಾವವು. (ಇಚ್ಯಾಮೋಹಿ)“ ನಮಗೆ ಮೊದಲೇ ಈ ಅಭಿಪ್ರಾಯವು ಹುಟ್ಟಿದ್ದರೂ, ನಿನ್ನ ಧರ ಪರಿಪಾಲನಕ್ಕೊಳಪಟ್ಟಿರುವ ನಾವು,ನಿನ್ನ ಅಭಿಪ್ರಾಯವನ್ನು ತಿಳಿದುಕೊಳ್ಳದೆ,ಯಾವ ಮಾತನ್ನೂ ಆಡಬಾರದೆಂದು ನಮ್ಮ ಆಸೆಯನ್ನು ಇದುವರೆಗೂ ಮರೆಸಿಕೊಂಡಿದ್ದೆವು. ಈಗ ನಿನ್ನ ಇಷ್ಟವು ನಮಗೆ ಚೆ ನ್ನಾಗಿ ತಿಳಿದುದರಿಂದ ನಮ್ಮ ಇಷ್ಟವನ್ನೂ ತಿಳಿಸಿಬಿಟ್ಟಿರುವೆ”ವೆಂವಭಿಪ್ರಾಯವು. (ಮಹಾ ಬಾಹುಂ) ಆತನ ಬಾಹುಬಲಕ್ಕೆ ಈ ಭೂಮಿಯನ್ನು ಭರಿಸುವುದೊಂದು ಅಸಾಧ್ಯವಲ್ಲ ಎಂದಭಿಪ್ರಾಯವು, (ಮಹಾಬಲಂ)ದೇಹಬಲಮನೋಬಲಗಳೆರಡೂ ಆತನಲ್ಲಿ ಸಂಪೂರ್ಣ ವಾಗಿರುವುದರಿಂದ, ರಾಜ್ಯ ಪರಿಪಾಲನಕಾರಕ್ಕೆ ಆತನೇ ತಕ್ಕವನು. (ಗಚೇನ ಮಹತಾ ಯಾಂತ೦)ಮಹಾಗಜದಂತೆ.ಗಂಭೀರವಾದ ನಡೆಯುಳ್ಳ ಆ ರಾಮನು, ತನ್ನ ಸೌಂದಯ್ಯ ವನ್ನು ಪುರಜನರಲ್ಲಿ 'ಆಬಾಲವೃದ್ಧರೂ ನೋಡಿ ಮನಸ್ತ್ರಪ್ತಿಯಾಗುವವರೆಗೆ ಅನುಭವಿಸ ಬೇಕಾದುದರಿಂದ, ಗಂಭೀರವಾದ ನಡೆಯಳ್ಳ . ಶತ್ರುಂಜಯವೆಂಬ ಪಟ್ಟದಾನೆಯಲ್ಲಿ ಕುಳಿತು ಬರುವಾಗ, ಆ ಆನಂದವನ್ನು ನಾವೆಲ್ಲರೂ ಅನುಭವಿಸಲೆಳಸುವೆವೆಂದಭಿಪ್ರಾ ಯವು (ರಾಮಂ ಛತ್ರಾವೃತಾನನಂ) ಸಿಜಂದರದಿಂದ ಜನಮನೋರಂಜಕನಾದ ಆ ರಾಮನಿಗೆ, ಆಕಾಲದಲ್ಲಿ ಹಿಡಿಯತಕ್ಕ ಶತಭತ್ರವು, ಏಕಾಧಿಪತ್ಯವನ್ನು ಸೂಚಿಸತಕ್ಕೆ ರಾಜಚಿಹ್ನವಾಗಿದ್ದರೂ, ಜನಗಳ ದೃಷ್ಟಿದೋಷವು ತಾಗದಂತೆ, ಆತನ ಮುಖವನ್ನು ಕಂ ಡೂಕಾಣದಹಾಗೆ ಮರೆಸತಕ್ಕದಾಗಿಯೂ ಇರುವುದೆಂದು ಭಾವವು, ಇವೇ ಮೊದಲಾದ ಇನ್ನೂ ಅನೇಕಾರಗಳು ವಿವರಿಸಲ್ಪಟ್ಟಿರುವುವು.