ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

$೭ ಸರ್ಗ, ೨] . ಅಯೋಧ್ಯಾಕಾಂಡವು. ಗಂಭೀರಸ್ವಭಾವವುಳ್ಳವನು. ಅತಿತೀಕ್ಷವಾದ ಬುದ್ಧಿವಿಕಾಸವುಳ್ಳವನು. ಧಾರಗಳನ್ನು ಪ್ರತಿಪಾದಿಸುವುದರಲ್ಲಿ ಸಮರರಾದ ಬ್ರಾಹ್ಮಣಶ್ರೇಷ್ಠ ನಿಂದ ಚೆನ್ನಾಗಿ ಶಿಕ್ಷಿಸಲ್ಪಟ್ಟವನು ಆತನುತನ್ನ ದೇಶದಲ್ಲಿರುವ ಗ್ರಾಮಗಳ, ಅಥವಾ ಪಟ್ಟಣದ ರಕ್ಷಣೆಗಾಗಿ ಶತ್ರುಗಳೊಡನೆ ಯುದ್ಧವು ಸಂಭವಿಸಿ ದಾಗ : ಲಕ್ಷಣನೊಡನೆ ಹೊರಟು, ಅಲ್ಲಿ ಜಯವನ್ನು ಹೊಂದದೆ ಹಿಂ ತಿರುಗತಕ್ಕವನಲ್ಲ. ಹೀಗೆ ಜಯವನ್ನು ಹೊಂದಿದಮಾತ್ರದಲ್ಲಿಯೇ ತೃಪ್ತನಾ ಗದೆ, ಅನೆಯನ್ನೊ, ರಥವನ್ನೊ ಏರಿ, ಪುರಪ್ರವೇಶ ಮಾಡಿದಮೇಲೆ, ಪುರ ವಾಸಿಗಳಲ್ಲಿ ಒಬ್ಬೊಬ್ಬರನ್ನೂ ತನ್ನ ಬಂಧುಜನರಂತೆ ಪ್ರೀತಿಯಿಂದ ಭಾ ವಿಸುವುದು, ಅವರ ಕ್ಷೇಮಲಾಭಗಳನ್ನು ವಿಚಾರಿಸುವುದು, ಮತ್ತು ತಂ ದೆಯು ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳನ್ನು ಕಾಣುವಂತೆ ಅವರನ್ನು ಕಾ ಣುವುದು, ಅವರ ಪುತ್ರ ಮಿತ್ರ ಕಳತ್ರ ಪರಿಜನಾಡಿಗಳೆಲ್ಲರ ಯೋಗಕ್ಷೇಮಗಳ ನ್ಯೂ ,ಅವರ ಅಗ್ನಿ ಹೋತ್ರಾದಿಕಾರಿಗಳ ನಿರಿಷ್ಟು ಪರಿಸಮಾಪ್ತಿಯನ್ನೂ ಒಂ ದೊಂದಾಗಿ ವಿಚಾರಿಸುವುದು, ಇವೆಲ್ಲವೂ ಆದಮೇಲೆತೃಪ್ತನಾಗುವನು.ಮತ್ತು ಆಗಾಗ ನಮ್ಮನ್ನು ಕುರಿತು ನಿಮ್ಮ ಆಿತರೆಲ್ಲರೂ ಅವರವರ ಕೆಲಸಗಳಲ್ಲಿ ಶ್ರದ್ಧೆಯಿಟ್ಟು ನಿಮ್ಮನ್ನು ಉಪಚರಿಸುತ್ತಿರುವರೆ?” ಎಂದು ವಿಚಾರಿಸುತ್ತಿರು ವನು. ಇತರರ ದುಃಖವನ್ನು ನೋಡಿದಾಗ ಅವರಿಗಿಂತಲೂ ತಾನು ಹೆಚ್ಚಾಗಿ ದುಃಖಿಸುವನು. ಅವರಿಗೆ ಯಾವುದಾದರೂ ಅಭ್ಯುದಯಗಳುಂಟಾದುದನ್ನು ನೋಡಿದಾಗ, ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳ ಅಭ್ಯುದಯವನ್ನು ನೋಡಿ ತಂದೆಯು ಎಷ್ಟು ಸಂತೋಷಪಡುವನೋ, ಅಷ್ಟು ಸಂತೋಷಹೊಂದುವ ನ. ಎಂತಹ ವಿಪತ್ತಿನಲ್ಲಿಯಾಗಲಿ ಸತ್ಯವನ್ನು ಬಿಡದೆ ನುಡಿಯುವನು. ಮಹಾಧನಸ್ಸನ್ನು ಧರಿಸತಕ್ಕವನು. ವೃದ್ಧರನ್ನು ಬಹುವಿಶ್ವಾಸದಿಂದ ಸೇವಿಸತಕ್ಕವನು. ಇಂದ್ರಿಯಗಳನ್ನು ಜಯಿಸಿದವನು. ಯಾವಾಗಲೂ ಹಸನ್ಮುಖನಾಗಿಯೇ ಮಾತಾಡತಕ್ಕವನು. ಎಂತಹ ಕಷ್ಟ ಕಾಲಗಳಲ್ಲಿಯೂ ಧರವನ್ನು ಬಿಡತಕ್ಕವನಲ್ಲ. ಆಶ್ರಿತರ ಶ್ರೇಯಸ್ಸನ್ನು ಅಕ್ಕರೆಯಿಟ್ಟು ನಡೆಸು ವನು, ಕಿರುಕುಳದ ಮಾತುಗಳನ್ನಾಗಲಿ, ಇತರವಿಧವಾದ ದುರ್ಭಾಷೆಗಳ ನಾಗಲಿ ಕಿವಿಗೊಟ್ಟು ಕೇಳಶಕ್ಕವನಲ್ಲ. ವಾದಪ್ರಸಕ್ತಿಯು ಬಂದಾಗ, ಮೇ