ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೫೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


too ಶ್ರೀಮದ್ರಾಮಯಣವು [ಸರ್ಗ 1 ಕೆಯು ನಿನ್ನ ಅನುಗ್ರಹದಿಂದಲೇ ಈಗ ಕೈಗೂಡಬೇಕಾಗಿರುವುದರಿಂದ, ಆಗ ನ್ನು ಸಫಲಗೊಳಿಸು ! ಎಲೈ ರಾಜಶ್ರೇಷ್ಠನೆ ! ಕನ್ನೆಲೆಯ ಹೂವಿನಂತೆ ಶ್ಯಾಮವರ್ಣದಿಂದ ಶೋಭಿಸುತ್ತ, ಸಮಸ್ತಶತ್ರುಗಳನ್ನೂ ಹುಟ್ಟಗಿಸತಕ್ಕೆ ಸಾಮರ್ಥ್ಯವುಳ್ಳ ನಿನ್ನ ಮಗನಾದ ರಾಮನು, ಯೌವರಾಜ್ಯಪದವಿಯಲ್ಲಿರ ವುದನ್ನು ನಾವೂ ನೋಡಬೇಕೆಂದಿರುವೆವು.ನೀನೂ ಆಶ್ರಿತರ ಕೋರಿಕೆಯನ್ನು ಸಲಿಸತಕ್ಕವನೆಂಬ ಖ್ಯಾತಿಹೊಂದಿದವನಾದುದರಿಂದ,ನಿಜವಾಗಿ ನಮ್ಮ ಹಿತ ವನ್ನು ಬಯಸುವನಾಗಿದ್ದರೆ, ದೇವದೇವನಾದ ಸಾಕ್ಷಾತ್ವಿಷ್ಣುವಿಗೆ ಸಮಾ ನವಾಗಿ, ಸತ್ಯಲೋಕಗಳಿಗೂ ಹಿತವನ್ನುಂಟುಮಾಡುವುದರಲ್ಲಿಯೇ ಬದ್ಧ ದೀಕ್ಷನಾಗಿ, ಮಹೌದಾಗ್ಯಗುಣವಿಶಿಷ್ಯನೆನಿಸಿಕೊಂಡಿರುವ ರಾಮನಿಗೆ ಈಗಲೇ ಪಟ್ಟಾಭಿಷೇಕವನ್ನು ಮಾಡಿಬಿಡು ” ಎಂದರು. ಇಲ್ಲಿಗೆ ಎರಡ ನೆಯ ಸರ್ಗವು. w+ಪಟ್ಟಾಭಿಷೇಕ ಸಾಮಗ್ರಿಗಳನ್ನು ಸಿದ್ದಪಡಿಸಿದುವು.++ ಹೀಗೆ ಆ ಸಭಿಕರು ಬದ್ಧಾಂಜಲಿಗಳಾಗಿ ನಿಂತು ವಿಜ್ಞಾಪಿಸಿದ ಮಾತುಗಳನ್ನು ,ದಶರಥನು ಅಂಗೀಕರಿಸಿ, ಪುನಃ ಅವರಿಗೆ ಪ್ರಿಯವಾಗಿಯೂ ಹಿತಕರವಾಗಿಯೂ ಇರುವ ಒಂದಾನೊಂದು ಮಾತನ್ನು ಹೇಳುವ «ಎಲೈ ಪ್ರಜೆಗಳೆ ! ನೀವು ಸತ್ವಜನಪ್ರಿಯನಾದ,ನನ್ನ ಜೇಷ್ಠ ಪುತ್ರನಾದೆ ರಾಮನನ್ನು ಯುವರಾಜನನ್ನಾಗಿ ಬಯಸಿದುದಕ್ಕಾಗಿ ನನ್ನ ಸಂಶೋ ಷಕ್ಕೆ ಪಾರವಿಲ್ಲದಂತಿದೆ ? ಆಹಾ ! ಇನ್ನು ನನ್ನ ಭಾಗ್ಯಕ್ಕೆ ಎಣೆಯೇನು ?” ಎಂದು ಹೇಳಿ, ಅವರೆಲ್ಲರನ್ನೂ ಗೌರವಿಸಿ, ಆ ಸಭೆಯಲ್ಲಿದ್ದ ಜನರೆಲ್ಲರೂ ಕೇ ಳುತ್ತಿರುವಾಗಲೇ, ವಸಿಷ್ಟವಾಮದೇವರಿಬ್ಬರನ್ನೂ ಕುರಿತು “ಎಲೈ ಬ್ರಾಹ್ಮ ಜೋತ್ತಮರೆ'ಈಗ ಪ್ರಾಪ್ತವಾಗಿರುವ ಚೈತ್ರಮಾಸವು ಬಹಳ ರಮಣೀಯ

  • ಇದಕ್ಕೆ 'ಚೈತ್ರಶಿಮಾನಯಂ ಮಾಸ: ಪಠ್ಯ: ಪಷಿತಕಾನನ:”ಎಂಬುದೆ ಮೂಲಶ್ಲೋಕವು. ಇದರಲ್ಲಿ ಕಾಣಿಸಲ್ಪಟ್ಟಿರುವ ವಿಶೇಷಾರಗಳೇನೆಂದರೆ:-(ಚೈತ್ರ:) ಮನುಷ್ಯರಲ್ಲಿ ರಾಮನು ಹೇಗೋಹಾಗೆ, ಮಾಸಗಳಲ್ಲಿ ಮೇಲೆನಿಸಿಕೊಂಡ ಚೈತ್ರಮಾಸ ವೆಂದು ಭಾವವು. (ಶ್ರೀರ್ಮಾ ) ರಾಜ್ಯಲಕ್ಷ್ಮಿಯೊಡನೆ ಕೂಡತಕ್ಕ ರಾಮನಂತೆಯೇ ಈ ಮಾಸವುಕೂಡ ಲಕ್ಷ (ಕಾಂತಿ) ವಿಶಿಷ್ಟವಾದುದೆಂದರು. (ಅಯಂ ಮಾಸ:) ಈ