ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩d. ಸರ್ಗ, ೩.] ಅಯೋಧ್ಯಾಕಾಂಡವು. ವಾಗಿ ಸೊಂಪೇರುತ್ತಿರುವುದು. ಮಂಗಳಕಾರಕ್ಕೆ ತಕ್ಕಂತೆ ಬಹುಪವಿ ತ್ರವಾದದು. ಉಪವನವೆಲ್ಲವೂ ಪುಷ್ಪಭರಿತವಾಗಿರುವುದು. ರಾಮನ ಯ್? ವರಾಜ್ಯಾಭಿಷೇಕಕ್ಕೆ ಬೇಕಾದ ಸಾಮಗ್ರಿಗಳೆಲ್ಲವೂ ಈಗಲೇ ಸಿದ್ಧವಾಗಲಿ!” ಎಂದನು. ರಾಜನು ಈಮಾತನ್ನು ಹೇಳಿ ಮುಗಿಸಿದೊಡನೆಯೇ, ಅಲ್ಲಿದ್ದ ಸಭಿ ಕರೆಲ್ಲರೂ ಸಂತೋಷದಿಂದ ಉಬ್ಬಿದವರಾಗಿ 14 ಆಃ ! ನಾವು ಬಹುಕಾಲ ದಿಂದ ಕೋರುತ್ತಿದ್ದ ಬಯಕೆಯು ಈಗ ಕೈಗೂಡಿತು !” ಎಂದು ಅಟ್ಟಹಾ ಸರಿಂದ ಉದ್ಯೋಷಿಸುತಿದ್ದರು. ಈ ಆನಂದಘೋಷವು ಮೆಲ್ಲಮೆಲ್ಲಗೆ ಶಾಂ ತವಾದಕೂಡಲೆ, ದಶರಥನು ವಸಿಷ್ಠವಾಮದೇವರಿಬ್ಬರನ್ನೂ ನೋಡಿಎಲೆ ಮಹಾತ್ಮರೆ ! ರಾಮಾಭಿಷೇಕಕ್ಕಾಗಿ ಯಾವಯಾವ ಕರಗಳನ್ನು ನಡೆಸಬೇ ಕೋ,ಅವುಗಳಿಗಾಗಿ ಯಾವಯಾವ ಉಪಕರಣಗಳು ಅವಶ್ಯಕಗಳೋ, ಅವೆಲ್ಲ ವನ್ನೂ ಆಜ್ಞಾಪಿಸಬೇಕು.” ಎಂದನು. ಇದನ್ನು 'ಕೇಳಿ ವಸಿಷ್ಠನು, ರಾಜನ ಮುಂದೆ ಕೈಜೋಡಿಸಿ ನಿಂತಿದ್ಯ ಯೋಗ್ಯರಾದ ಅಧಿಕಾರಿಗಳನ್ನೂ ಸುಮಂತ್ರನೇ ಮೊದಲಾದ ಮಂತ್ರಿಗಳನ್ನೂ ಕುರಿತು (ಎಲೈ ಮಂತ್ರಿ ಆರೆ! ಸುವರ್ಣವೇಮೊದಲಾದ ರತ್ನಗಳನ್ನೂ ,ಉಪಹಾರಸಾಮಗ್ರಿಗಳನ್ನೂ, ನ್ಯಗಳನ್ನೂ , ಬಿಳಿಬಣ್ಣವುಳ್ಳ ಪುಷ್ಪಮಾಲಿಕೆಗಳನ್ನೂ, ಅರಳು, ಜೇನು ತುಪ್ಪ, ನೂತನವಸ್ತ್ರಗಳು, ರಥಗಳು, ಸಮಸ್ತಶಸ್ತ್ರಾಸ್ತ್ರಗಳು, ಮುಂತಾದ ಸಾಮಗ್ರಿಗಳೆಲ್ಲವನ್ನೂ ಸಿದ್ಧಪಡಿಸಿಡಬೇಕು. ಚತುರಂಗಸೈನ್ಯವನ್ನೂ, ಶುಭ ಲಕ್ಷಣವುಳ್ಳ ಆನೆಯನ್ನೂ, ಬಿಳೀಚಾಮರಗಳನ್ನೂ, ಶ್ವೇತಚ್ಛತ್ರವನ್ನೂ ...... .... --- ... ------ ....... .... .......... ....... A p= dt- ............ - 4 4= var ke . . . . . . . . . r - ಒಬai --- ಮಾಸವು 'ಎಂಬುದರಿಂದ ನಾವು ರಾಮಾಭಿಷೇಕವನ್ನಪೇಕ್ಷಿಸಿದಸಮಯಕ್ಕೆ ಸರಿ ಯಾಗಿ,ಆ ರಾಮನಿಗೆ ಅನುರೂಪವಾದ ಗುಣವುಳ್ಳ ಈ ಮಾಸವೇ ಸನ್ನಿಹಿತವಾಗಿರುವ ದೆಂದು ಭಾವವು. (ಪಣ್ಯ:) ರಾಮನಂತೆಯೇ ಇದು ಪುಣ್ಯವರ ಕವು, (ಪಷಿತಕಾನನ:) ಪಷಿಸಿದ ತೋಟಗಳುಳ್ಳುದು. ಮನುಷ್ಯರು ವಿಶೇಷಪ್ರಯತ್ನದಿಂದ ನಗರಗಳ ನ್ನಲಂಕರಿಸುವಂತಲ್ಲದೆ, ಈ ಮಾಸವು ರಾಮಾಭಿಷೇಕಕ್ಕಾಗಿ ತನ್ನನ್ನು ತಾನೇ ಶಷಾ ದಿಗಳಿಂದಲಂಕರಿಸಿಕೊಂಡು ಬಂದಿರುವುದೆಂದು ಭಾವವ. ಅಥವಾ ರಾಮನು ಕನಕ ಕಿರೀಟವನ್ನು ಧರಿಸುವನೆಂಬುದಕ್ಕಾಗಿ ಅವನಿಗೆ ಅನುರೂಪವಾಗಿರುವಂತೆ, ತಾನೂ ಪಪ್ಪಕಿರೀಟವನ್ನು ಧರಿಸಿ ಬಂದಿರುವುದೆಂದೂ ಅಭಿಪ್ರಾಯವು.