ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೫೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


#C೨ ಶ್ರೀಮದ್ರಾಮಾಯಣವು [ಸರ್ಗ, ಧ್ವಜವನ್ನೂ, ಅಗ್ನಿ ಯಂತೆ ಜ್ವಲಿಸುತ್ತಿರುವ ನೂರುಸುವರ್ಣಕುಂಭಗಳ ನ್ಯೂ ಸಿದ್ಧಪಡಿಸಿರಿ ! ಬಂಗಾರದಿಂದಲಂಕರಿಸಲ್ಪಟ್ಟ ಕೊಂಬುಗಳುಳ್ಳ ವೃಷಭಗಳನ್ನೂ, ಸಂಪೂರ್ಣವಾಗಿ ಅವಯವಗಳೆಲ್ಲವನ್ನೂ ಹೊಂದಿರುವ ಹುಲಿಯ ಚರ್ಮವನ್ನೂ ಸಿದ್ಧಪಡಿಸಿರಿ ! ಈ ಸಾಮಗ್ರಿಗಳೆಲ್ಲವೂ ಬೆಳಗಾ ಗಾಗುವಷ್ಟರಲ್ಲಿಯೇ ದಶರಥನ ಅಗ್ನಿಹೋತ್ರಶಾಲೆಯಲ್ಲಿ ಸಿದ್ಧವಾಗಿರ ಬೇಕು ! ಇವಲ್ಲದೆ ಗಂಧಪುಷ್ಟಾದಿಮಂಗಳದ್ರವ್ಯಗಳು ಯಾವಯಾವುವುಂ ಟೋ ಅವೆಲ್ಲವನ್ನೂ ತಂದಿರಿಸಿರಿ! ಅರಮನೆಯ ಬಾಗಿಲುಗಳನ್ನೂ, ಊರಬಾ ಗಿಲುಗಳನ್ನೂ ಗಂಧಪುಷ್ಪಾದಿಗಳಿಂದಲೂ, ಸುಗಂಧ ಧೂಪದೀಪಗಳಿಂ ದಲೂ ಅಲಂಕರಿಸಿರಿ ! ಬ್ರಾಹ್ಮಣರು ಲಕ್ಷಲಕ್ಷ ಸಂಖ್ಯೆಯಿಂದ ಬಂದರೂ ಅವರೆಲ್ಲರಿಗೂ ಸಂಪೂರ್ಣವಾಗಿ ತೃಪ್ತಿಯುಂಟುಮಾಡುವುದಕ್ಕೆ ಸಾಕಾದ ಷ್ಟು ಪ್ರಶಸ್ತವಾದ ಅನ್ನ ರಾಶಿಯನ್ನು ಹಾಲು, ಮೊಸರು, ಮುಂತಾದುವು ಗಳಿಂದಲೂ, ವ್ಯಂಜನೋಪಕರಣಗಳಿಂದಲೂ ಚೆನ್ನಾಗಿ ಪರಿಷ್ಕರಿಸಿಟ್ಟು, ನಾಳೆ ಬೆಳಗಾದಕೂಡಲೆ ಅಬ್ರಾಹ್ಮಣೋತ್ತಮರೆಲ್ಲರನ್ನೂ ಕರೆಸಿ, ಅವರನ್ನು ಚೆನ್ನಾಗಿ ಸತ್ಕರಿಸಿ ಭೋಜನಮಾಡಿಸಬೇಕು. ಮತ್ತು ಆ ಬ್ರಾಹ್ಮಣ ರಿಗೆ ಬೇಕಾದ ತುಪ್ಪ, ಮೊಸರು, ಅರಳು, ಪುಷ್ಕಲವಾದ ದಕ್ಷಿಣೆ, ಇವೆಲ್ಲ ವನ್ನೂ ಅವರವರ ಮನಸ್ಸಷ್ಟಿಯಾಗುವಂತೆ ಕೊಡಬೇಕು ! ನಾಳೆ ಸೂ ರೈನು ಉದಿಸಿದ ಉತ್ತರಕ್ಷಣದಲ್ಲಿಯೇ,ಸ್ವಸ್ತಿವಾಚನವು ನಡೆಯಬೇಕಾಗಿರು ವುದರಿಂದ ಬ್ರಾಹ್ಮಣರೆಲ್ಲರನ್ನೂ ಕರೆಸಿರಿ! ಅಲ್ಲಲ್ಲಿ ಮಂಗಳಧ್ವಜಗಳು ನಡ ಡಲಿ ! ರಾಜಮಾರ್ಗಗಳೆಲ್ಲವೂ ಸುಗಂಧಶೀತಲವಾದ ನಿರೀನಿಂದ ಸೇಚನ ಮಾಡಲ್ಪಡಲಿ ! ಅರಮನೆಯ ಮೊದಲನೆಯ ತೊಟ್ಟಿಯಲ್ಲಿ, ಸ್ವಸ್ತಿವಾಚನ ಮೊದಲಾದ ವೇದೋಕಕರಗಳನ್ನು ನಡೆಸುವುದಕ್ಕಾಗಿ,ಬ್ರಾಹ್ಮಣರ ಗೋ ಷಿಯು ನೆರೆಯಬೇಕಾದುದರಿಂದ, ಎರಡನೆಯತೊಟ್ಟಿಯಲ್ಲಿ ನಟರೂ, ಗಾ ಯಕರೂ, ವೇಶ್ಯಯರೂ ಚೆನ್ನಾಗಿ ಅಲಂಕರಿಸಿಕೊಂಡು ಬಂದು ಸಿದ್ಧರಾಗಿ ರಲಿ ! ದೇವಾಲಯಗಳಲ್ಲಿಯೂ, ನಾಲ್ಕು ಬೀದಿಗಳು ಕೂಡತಕ್ಕಸ್ಥಳಗಳಲ್ಲಿ ಯೂ, ಬೇರೆಬೇರೆಯಾಗಿ ಪುರುಷರನ್ನು ನಿಯಮಿಸಿ, ಅವರ ವಶದಲ್ಲಿ ಅನ್ನದ