ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

80 ಸರ್ಗ, ೩.] ಶ್ರೀಮದ್ರಾಮಾಯಣವು ಇನ್ನೂ, ಭಕ್ಷಣಗಳನ್ನೂ, ದಕ್ಷಿಣೆಗಳನ್ನೂ , ಪಷ್ಟಹಾರಗಳನ್ನೂ ಕೊಟ್ಟು ಅಲ್ಲಲ್ಲಿ ನಿಲ್ಲಿಸಿ, ಅಭ್ಯಾಗತರಾಗಿ ಬಂದವರನ್ನು ಆದರಿಸುವಂತೆ ಮಾಡಿರಿ ! ವೀರಭಟರೆಲ್ಲರೂ ನಡುವಿನಲ್ಲಿ ಕತ್ತಿಗಳನ್ನು ಕಟ್ಟಿಕೊಂಡು, ಕವಚಗಳನ್ನು ಧರಿಸಿ, ಮಡಿಬಟ್ಟೆಗಳನ್ನು ಟ್ಟು, ಶ್ರೀರಾಮನ ಅಭಿಷೇಕಕ್ಕಾಗಿ ಏರಟ್ಟಿರುವ ಕಲ್ಯಾಣಮಂಟಪದಲ್ಲಿ ಸಿದ್ಧರಾಗಿ ನಿಲ್ಲುವಹಾಗೆ ಹೇಳಿರಿ ! ” ಎಂದರು. ಹೀಗೆ ಕಾವ್ಯದಕ್ಷರಾಗಿರುವ ವಸಿಷ್ಠವಾಮದೇವರಿಬ್ಬರೂ, ಅಲ್ಲಿ ನಡೆಸಬೇಕಾದ ಕಾಠ್ಯಗಳನ್ನು ನಿಯಮಿಸಿ, ಇನ್ನೂ ಉಳಿದ ಬೇರೆಬೇರೆ ಕಾವ್ಯಗಳನ್ನೂ ದಶ ರಧರಾಜನಿಗೆ ತಿಳಿಯಪಡಿಸಿ, ಅವೆಲ್ಲವೂ ಸಿದ್ಧವಾದಮೇಲೆ, ತಾವು ಕೃತಕ ತರಾದೆವೆಂದು ಮನಸ್ಸಿನಲ್ಲಿ ಸಂತೋಷಿಸಿದರು. ಹೀಗೆ ಸಮಸ್ತ ಸನ್ನಾ ಹಗ ಭೂ ಸಿದ್ಧವಾದಮೇಲೆ, ರಾಜನಿಗೂ ಆ ವಿಷಯವನ್ನು ವಿಜ್ಞಾಪಿಸಿದರು. ಆ ಮೇಲೆ ರಾಜನೂಕೂಡ ಹೀಗೆ ಅಭಿಷೇಕಸನ್ನಾಹಗಳೆಲ್ಲವೂ ಸಿದ್ಧವಾದುದ ನ್ನು ಕೇಳಿ, ಸಂತೋಷದಿಂದ ಉಬ್ಬಿದವನಾಗಿ,ಸುಮಂತ್ರನನ್ನು ಕುರಿತು ಲೈ ಮಂತ್ರಿಯೆ : ನೀನು ಹೋಗಿ ಸುಶಿಕ್ಷಿತವಾದ ಬುದ್ಧಿಯುಳ್ಳೆ ರಾಮನನ್ನು ಈಗಲೇ ಕರೆದುಕೊಂಡುಬಾ” ಎಂದನು. ಸುಮಂತ್ರನು ಹಾಗೆಯೇ ಆಗಲೆಂ ದು ಹೇಳಿ, ರಾಮನ ಸಮೀಪಕ್ಕೆ ಹೋಗಿ, ಅವನಿಗೆ ರಾಜಾಜ್ಞೆಯನ್ನು ತಿಳಿ ಸಿ, ರಥಿಕಶ್ರೇಷ್ಠನಾದ ಆ ರಾಮನನ್ನು ರಥದಮೇಲೆ ಏರಿಸಿ ಕರೆತಂದನು. ಆ ಮೇಲೆ ಅಲ್ಲಿ ನೆರೆದಿದ್ದ ಪೂರ, ದಕ್ಷಣ, ಪಶ್ಚಿಮೋತ್ತರ ದೇಶದ ರಾಜರೂ, ಮತ್ತು ಮೈಚ್ಛದೇಶಾಧಿಪತಿಗಳೂ, ಕಾಡುಗಳಲ್ಲಿಯೂ, ಬೆಟ್ಟಗಳಲ್ಲಿಯೂ ವಾಸಮಾಡುತ್ತಿರುವ ಆಟವಿಕರೂ ಸೇರಿ, ದೇವತೆಗಳು ದೇವೇಂದ್ರನನ್ನು ಹೇಗೋಹಾಗೆ ದಶರಥನನ್ನು ಓಲೈಸುತಿದ್ದರು. ದೇವತೆಗಳನಡುವೆ ಪ್ರಕಾತಿ ಸುವ ಇಂದ್ರನಂತೆ, ಆ ರಾಜಸಮೂಹಗಳ ಮಧ್ಯದಲ್ಲಿ ರಾಜಋಷಿಯಾದ ದ ಶರಥನು ಪ್ರಕಾಶಿಸುತ್ತಾ, ತನ್ನ ಅರಮನೆಯ ಉಪ್ಪರಿಗೆಯಲ್ಲಿ ನಿಂತುಕೊಂಡಿ ವ್ಯಾಗಲೇ ರಾಮನು ರಥದಲ್ಲಿ ಕುಳಿತು, ತನಗೆ ಇದಿರಾಗಿ ಬರುತ್ತಿರುವುದನ್ನು ನೋಡಿದನು, ಗಂಧರಾಜನಿಗೆ ಸಮನಾಗಿ, ಮೂರುಲೋಕದಲ್ಲಿಯೂ ಪ್ರಸಿ ವ್ಯಪರಾಕ್ರಮವುಳ್ಳವನಾಗಿ, ಮಹಾಪುರುಷಲಕ್ಷಣವನ್ನು ಸೂಚಿಸು