ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೫೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸರ್ಗ, 1.] ಅಯೋಧ್ಯಾಕಾಂಡ, tos ಯ ಕಾಲದಲ್ಲಿ “ಮೇರುಪರತವನ್ನೇರಿ, ತನ್ನ ಕಾಂತಿಯಿಂದ ಆ ಪರೈತಪ್ಪಾ ತವೆಲ್ಲವನ್ನೂ ಬೆಳಗುವಂತೆ, ತನ್ನ ದಿವ್ಯತೇಜಸ್ಸಿನಿಂದ ಆ ಪೀಠವನ್ನು ಅಲಂಕ ರಿಸುತಿದ್ದುದಲ್ಲದೆ, ಶರತ್ಕಾಲದಲ್ಲಿ ಸ್ಪಷ್ಟವಾದ ನಕ್ಷತ್ರರಾತಿಯಿಂದಲೂ, ಗ್ರ ಹಗಳಿಂದಲೂ ಕೂಡಿದ ಆಕಾಶವನ್ನು, ಚಂದ್ರನು ತನ್ನ ಕಾಂತಿಯಿಂದ ಮತ್ತ ಷ್ಟು ಪ್ರಕಾಶಪಡಿಸುವಂತೆ,ಆ ಸಭಾಖ್ಯಾನವನ್ನೆಲ್ಲಾ ತನ್ನ ತೇಜಸ್ಸಿನಿಂದಬೆಳಗು ತಿದ್ದನು. ದಶರಥನೂಕೂಡ ತನ್ನ ಪ್ರಿಯಪುತ್ರನಾದ ರಾಮನ ಆಕಾರವನ್ನು ನೋಡಿದಾಗ, ಚೆನ್ನಾಗಿ ಆಲಂಕೃತರಾದವರು, ಕನ್ನಡಿಯಲ್ಲಿ ತಮ್ಮ ಪ್ರತಿ ಬಿಂಬವನ್ನು ನೋಡಿ ತಮ್ಮ ಮನಸ್ಸಿನಲ್ಲಿಯೇ ತಾವು ಸಂತೋಷಿಸುವಂತೆ ಆನಂದಿಸುತ್ತಿದ್ದನು.ಮಕ್ಕಳನ್ನು ಪಡೆದವರಲ್ಲಿ ಮೇಲೆನಿಸಿಕೊಂಡ ದಶರಥನು, ಮುಗುಳುನಗೆಯಿಂದ ಆ ಮಗನನ್ನು ನೋಡಿ, ಕಾಶ್ಯಪನು ತನ್ನ ಮಗನಾದ ದೇವೇಂದ್ರನೊಡನೆ ಸಲ್ಲಪಿಸುವಂತೆ ಒಂದಾನೊಂದು ವಾಕ್ಯವನ್ನು ಹೇಳು ವನು. ಎಲೆ ವತ್ಸ ರಾಮಾ ! ನನಗೆ ಅನುರೂಪಳಾದ ನನ್ನ ಜೈಷ್ಪ ತ್ತಿ ಯಲ್ಲಿ ನೀನೂ ತಕ್ಕ ಮಗನಾಗಿ ಹುಟ್ಟಿರುವೆ!ಗುಣಗಳಲ್ಲಿ ನಿನ್ನನ್ನು ಮೀರಿಸಿ ದವರು ಬೇರೆ ಯಾರೂ ಇಲ್ಲವು. ನೀನು ನನಗೆ ಪ್ರಿಯಪುತ್ರನಾಗಿದ್ದು, ನಿನ್ನ ಕಲ್ಯಾಣಗುಣಗಳಿಂದ ನನ್ನ ಮನಸ್ಸನ್ನು ಮಾತ್ರವೇ ಅಲ್ಲದೆ ನಮ್ಮ ರಾಷ್ಟ್ರದ ಪ್ರಜೆಗಳೆಲ್ಲರ ಮನಸ್ಸನ್ನೂ ಆಕರ್ಷಿಸಿರುವೆ. ಈ ಕಾರಣದಿಂದ ಈಗ ನೀನು ಯುವರಾಜಪದವಿಗೆ ಅರ್ಹನು! ನಾಳೇ ಪುಷ್ಯ ನಕ್ಷತ್ರ ದಲ್ಲಿಯೇ ನೀನು ಯುವರಾಜಪಟ್ಟವನ್ನು ವಹಿಸಬೇಕು. ವಿನಯಾದಿಗು ಣಗಳೆಲ್ಲವೂ ಸ್ವಾಭಾವಿಕವಾಗಿಯೇ ನಿನ್ನಲ್ಲಿ ಸಂಪೂರವಾಗಿ ನೆಲೆಗೊಂಡಿ ರುವುದರಿಂದ, ನಿನಗೆ ಉಪದೇಶಿಸಿ ತಿಳಿಸಬೇಕಾದ ವಿಷಯಗಳೊಂದೂ ಇಲ್ಲ.

  • ಸೂಯ್ಯನು ಪ್ರಧಾನವಾದ ಮೇರುಪರತವನ್ನು ಸುತ್ತಿ ಬರುವನೇಹೊರತು, ಅದ ರಲ್ಲಿ ಸೇರಿ ನಿಲ್ಲುವುದಿಲ್ಲವಾದುದರಿಂದ,ಇಲ್ಲಿ ಮೇರುವೆಂದರೆ ಅಸ್ತಗಿರಿಯ ಸಮೀಪದಲ್ಲಿರು ವ ಸಾವರಿ ಮೇರುವೆಂದು ಗ್ರಹಿಸಬೇಕು, ಇಲ್ಲಿ ಉದಯಕಾಲವನ್ನು ಹೇಳುವಾಗ ಅಸ್ತಗಿರಿಸಾನ್ನಿಧ್ಯವನ್ನು ಹೇಳುವುದು ಹೇಗೆ ಸಮಂಜಸವಾಗುವುದೆಂದು ಆಕ್ಷೇಪವುಂ ಟಾಗಬಹುದು ಉತ್ತರವರ್ಷದಲ್ಲಿರುವ ಸಿದ್ದ ಭರವಾಸಿಗಳಿಗೆ ಅಸ್ತಾದ್ರಿಯ ಸಮೀಪದಲ್ಲಿ ಯೇ ಸೂರನು ಉದಿಸುವನಾದುದರಿಂದ, ಅವರ ವಿಷಯವಾಗಿ ಗ್ರಹಿಸುವಾಗ, ಆ ಕಡೆ ಯಲ್ಲಿ ಸರೋದಯವಾಯಿತೆಂದು ಹೇಳಿದುದು ಸಮಂಜಸವೆಂದೇ ಗಾನ.

26