ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

804 ಶ್ರೀಮದ್ರಾಮಾಯಣವು (ಸರ್ಗ, ೩, ಆದರೂ ಪತ್ರಸ್ನೇಹದಿಂದ ನಿನಗೆ ಒಂದೆರಡು ಹಿತವಾಕ್ಯಗಳನ್ನು ಹೇಳ ಬೇಕೆಂದಿರುವೆನು. ಸಾವಧಾನದಿಂದ ಕೇಳು! ನೀನು ಎಲ್ಲರಲ್ಲಿಯೂ ಯಾವಾ ಗಲೂ ವಿನೀತನಾಗಿದ್ದು ಇಂದ್ರಿಯಗಳನ್ನು ನಿಗ್ರಹಿಸಿಡಬೇಕು. ಜೂಜು, ಮದ್ಯಪಾನ, ಮುಂತಾದ ವ್ಯಸನಗಳೆಲ್ಲವೂ ಮನುಷ್ಯರಿಗೆ ಸ್ವಾಭಾವಿಕವಾಗಿ ಕಾಮಕ್ರೋಧಾದಿದುರ್ಗುಣಗಳಿಂದಲೇ ಸಂಭವಿಸುವುದುಂಟು. ಅವುಗಳಿಗೆ ನೀನು ಸ್ವಲ್ಪವೂ ಅವಕಾಶಕೊಡಬಾರದು, ಮತ್ತು ಕ್ರೂರವಾಕ್ಯಗಳ ನಾಡುವುದು, ಕ್ರೂರವಾಗಿ ದಂಡಿಸುವುದು, ಇವೇ ಮೊದಲಾದ ದುಶ್ಯ ಸನಗಳೆಲ್ಲವೂ ಕೋಪದಿಂದುಂಟಾಗುವುದರಿಂದ, ಆ ಕೋಪವನ್ನು ಸಂಪೂರ್ ವಾಗಿ ತ್ಯಜಿಸಬೇಕು. ಸಾಮಾನ್ಯರಾದ ಸೇವಕರಲ್ಲಿ ವಿಶೇಷವಾಗಿ ಸಲಿ ಗೆಯನ್ನು ತೋರಿಸುತ್ತಾ, ಅವರೊಡನೆ ಪ್ರತ್ಯಕ್ಷಸಂಭಾಷಣಗಳಿಗೆ ಅವಕಾಶ ಕೊಡಬಾರದು ! ಪರೋಕ್ಷದಲ್ಲಿದ್ದುಕೊಂಡು, ಬೇರೆ ಅಧಿಕಾರಿಗಳ ಮೂಲಕ ವಾಗಿಯೇ ಅವರಿಗೆ ಆಜ್ಞೆಯನ್ನು ಕೊಟ್ಟು, ಅವರಿಂದ ಕೆಲಸವನ್ನು ನಡೆಸು! ನಡೆಸಬೇಕಾದ ಕಾವ್ಯಗಳನ್ನು ಮಂತ್ರಿಗಳೇ ಮೊದಲಾದ ಮುಖ್ಯಾಧಿಕಾರಿ ಗಳೊಡನೆ ಚೆನ್ನಾಗಿ ಆಲೋಚಿಸಿ ನಡೆಸಬೇಕು. ಪರೋಕ್ಷದಲ್ಲಿದ್ದುಕೊಂಡೇ ಚಾರರ ಮೂಲಕವಾಗಿ ಇತರದೇಶವೃತ್ತಾಂತವನ್ನು ತಿಳಿದುಕೊಳ್ಳುತ್ತಿರ ಬೇಕು. ಸ್ವದೇಶವೃತ್ತಾಂತಗಳನ್ನು ಪ್ರತ್ಯಕ್ಷದಲ್ಲಿ ಹೋಗಿ ಕಂಡು ಕೊಳ್ಳಬೇಕು! ಮಂತ್ರಿಗಳಿಗೂ, ಪ್ರಜೆಗಳಿಗೂ ಮನಸ್ಸಿಗೆ ನೋವುಂಟಾಗ ದಂತೆ, ಅವರಿಗೆ ತೃಪ್ತಿಕರವಾದ ಮಾತುಗಳನ್ನು ನುಡಿಯುತ್ತಾ, ಅವರನ್ನು ಸಂತೋಷಪಡಿಸಬೇಕು. ಯಾವಾಗಲೂ ಧಾನ್ಯ ಸಮೃದ್ಧಿಯೂ, ಆಯುಧ ಸಮೃದ್ಧಿಯೂ ಇರುವಂತೆ, ಧಾನ್ಯಶಾಲೆಗಳನ್ನೂ, ಆಯುಧಶಾಲೆಗಳನ್ನೂ ವೃದ್ಧಿಪಡಿಸುತ್ತಿರು ! ಯಾವನು ಪ್ರಜೆಗಳಿಗೆ ಸಂತೋಷವನ್ನುಂಟುಮಾಡು ತ, ಅವರನ್ನು ತನ್ನಲ್ಲಿ ವಿಶೇಷ ಅನುರಕ್ತರನ್ನಾಗಿ ಮಾಡಿ, ಭೂಮಿಯನ್ನು ಆಳುವನೋ, ಆ ರಾಜನನ್ನು ನೋಡಿ ಸಮಸ್ತಸಾಮಂತರಾಜರೂ ಅಮೃತ ವನ್ನು ಕಂಡ ದೇವತೆಗಳಂತೆ ಸಂತೋಷಿಸುವರು. ಆದುದರಿಂದ ವತ್ಸರಾ ಮಾ ! ನೀನೂ ಈ ವಿಷಯಗಳಲ್ಲಿ ಸಂಪೂರವಾದ ಗಮನವನ್ನಿಟ್ಟು, ಮನ ಸೃನ್ನು ನಿಗ್ರಹಿಸಿ, ಉಚಿತರೀತಿಯಲ್ಲಿ ನಡೆಯುತ್ತಿರು.” ಎಂದನು.