ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೫೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸರ್ಗ, ೪.] ಅಯೋಧ್ಯಾಕಾಂಡವು. 1* ನ್ಯೂ, ನಿನ್ನನ್ನು ಪಡೆದುದರಿಂದ ಪಿತೃಗಳಿಗೆ ಸಲ್ಲಿಸಬೇಕಾದ ಋಣವನ್ನೂ, ದಾನಾದಿಗಳಿಂದ ಬ್ರಾಹ್ಮಣರ ಋಣವ ತೀರಿಸಿ, “ಸಮಸ್ತಋಣಗಳಿಂದ ಲೂ ಮುಕ್ತನಾಗಿರುವೆನು. ನಿನಗೆ ರಾಜ್ಯಾಭಿಷೇಕವನ್ನು ಮಾಡುವುದು ಹೊ ರತ್ತು,ಇನ್ನು ಮೇಲೆ ನಾನು ನಡೆಸಬೇಕಾದ ಕಾಠ್ಯವು ಯಾವುದೊಂದೂ ಇಲ್ಲ. ಸಮಸ್ತ ಸುಖಾನುಭವಗಳಿಂದ ನನ್ನ ಈ ದೇಹದ ಋಣವನ್ನೂ ಸಂಪೂ ರವಾಗಿ ತೀರಿಸಿಕೊಂಡಂತಾಯಿತು. ವತ್ಸ ರಾಮಾ ! ಇನ್ನು ಮೇಲೆ ನಾನು ನಿನಗೆ ಹೇಳಬೇಕಾದ ಮಾತನ್ನು ಲಾಲಿಸಿ, ಅದು ನಿನಗೆ ಸಮ್ಮತವಾಗಿದ್ದರೂ, ಅಸಮ್ಮತವಾಗಿದ್ದರೂ, ನನಗಾಗಿ ನೀನು ಅದನ್ನು ನಡೆಸಿಯೇ ತೀರಬೇಕು. ಈಗಲಾದರೂ ನಮ್ಮ ಪ್ರಜೆಗಳೆಲ್ಲರೂ ನೀನೇ ರಾಜನಾಗಿರಬೇಕೆಂದು ಕೋ ರುತ್ತಿರುವರು. ಆದುದರಿಂದ ನಿನಗೆ ಈಗಲೇ ಯುವರಾಜಪಟ್ಟವನ್ನು ಕಟ್ಟಿ ಬೇಕೆಂದಿರುವೆನು. ಪ್ರಜೆಗಳ ಕೋರಿಕೆಯೂ, ನನ್ನ ಉದ್ದೇಶವೂ ಹಾಗಿರಲಿ ! ಈಗಲೇ ನಿನಗೆ ಪಟ್ಟವನ್ನು ಕಟ್ಟಬೇಕೆಂಬುದಕ್ಕೆ ಮತ್ತೊಂದು ಕಾರಣವೂ ಉಂಟು, ಈಗೀಗ ನನಗೆ ಸ್ವಪ್ನದಲ್ಲಿ ಭಯಂಕರಗಳಾದ ಉತ್ಪಾತಗಳು ಕಾಣು ತಿರುವುವು. ಈಗ ನನ್ನ ನಕ್ಷತ್ರಕ್ಕೆ ಗ್ರಹಗತಿಯು ಬಹಳ ಕ್ರೂರವಾಗಿರುವು ದು, ನನ್ನ 'ನಕ್ಷತ್ರವನ್ನು ಕೂರರಾದ ಸೂಯ್ಯಾಂಗಾರಕರಾಹುಗ್ರಹಗಳು ಆಕ್ರಮಿಸಿರುವುವೆಂದು ಜ್ಯೋತಿಷ್ಯರು ಹೇಳಿರುವರು. ಇಷ್ಟು ದುರ್ನಿಮಿತ್ತಗ

  • ಮನುಷ್ಯನು ಹುಟ್ಟುವಾಗಲೇ ಐದುವಿಧದಲ್ಲಿ ಋಣಗ್ರಸ್ತನಾಗಿರುವನು. ಬ್ರಾಹ್ಮ ನಿಗೆ ಬ್ರಹ್ಮಚಾದಿಮೂರುಗಣಗಳುಮಾತ್ರ ಶ್ರುತಿಸಿದ್ದಗಳಾಗಿರುವುವು. 'ಜಾಯ ಮಾನೋ ವೈ ಬ್ರಾಹ್ಮಣಸ್ವಿಭಿ: ಮಕರ್ವಾ ಜಾಯತೇ ಬ್ರಹ್ಮಚಯ್ಯಣರ್ಮಿಿ ಯ ಜೈನದೇವೇಭ್ಯಃ ಪ್ರಜಯಾಪಿತೃಭ್ಯ:”ಎಂಬಂತೆ, ಇವು ಮೂರೂ ಪ್ರಸಿದ್ದಗಳಾಗಿದ್ದರ ವಿಪ್ರರಿಗೂ ಆತ್ಮನಿಗೂ ಸಲ್ಲಿಸತಕ್ಕ ಋಣಗಳು ಬೇರೇ ಎರಡಿರುವುದರಿಂದ, ಋಣಪಂ ಚಕವೆಂಬುದು ಮತಾಂತರಸಿದ್ದವು. ಈ ಐದುಮಠಗಳ ವಿವರವು ಹೇಗೆಂದರೆ:--ಇಂದಿ ಯಾಧಿಷ್ಠಾತೃಗಳಾದ ದೇವತೆಗಳಿಗೂ, ವಾಗುಪಕಾರಿಗಳಾದ ಋಷಿಗಳಿಗೂ, ದೇಹವ ನ್ನು ಕೊಟ್ಟು ಉಪಕಾರಮಾಡಿದ ಪಿತೃಗಳಿಗೂ, ಕರಾಧೀನಗಳಾದ ಸಕಲಸಂಸ್ಕಾರಗಳ ನ್ಯೂ ಸಾಧಿಸಿ ಪಾಪನಾಶಕರಾಗಿರುವ ಬ್ರಾಹ್ಮಣರಿಗ, ಶರೀರೇಂದ್ರಿಯಸಂಘಇತರೂ ಸವಾಗಿ ಜ್ಞಾನಪ್ರಕಾಶವನ್ನುಂಟುಮಾಡುವುದಕ್ಕೆ ಹೇತುವಾದ ಆತ್ಮನಿಗೂ ಮಾಡದೆ ಕಾದ ಪ್ರತ್ಯುಪಕಾರಗಳೇ ಮನುಷ್ಯನಿಗೆ ಐದುಯಣಗಳೆಂದು ಗ್ರಹಿಸಬೇಕು.