ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೬೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸರ್ಗ. ೪.). ಅಯೋಧ್ಯಾಕಾಂಡವು. ೩೧೧ ಯಾವಂತನಾಗಿಯೂ,ಜಿತೇಂದ್ರಿಯನಾಗಿಯೂ ಇದ್ದರೂ,ಮನುಷ್ಯನ ಮನ #ು ಪ್ರಾಯಕವಾಗಿ ಚಂಚಲಸ್ವಭಾವವುಳ್ಳುದೆಂದು ನನಗೆ ತೋರಿರುವುದ ರಿಂದ, ಆತನು ಇಲ್ಲಿಗೆ ಬಂದುಸೇರುವುದಕ್ಕೆ ಮೊದಲೇ ಈಶುಭಕಾರವನ್ನು ನಡೆಸಿಬಿಡುವುದೇ ಒಂದು ಪಕ್ಷದಲ್ಲಿ ಉತ್ತಮವೆಂದೆಣಿಸಿರುವೆನು. ಅಥವಾ *ಯಾವಾಗಲೂ ಥರನಿರತರಾದ ಸತ್ಪುರುಷರ ಮನಸ್ಸು ಇತರರ ಶ್ರೇಯಃ ಕಾರಗಳಲ್ಲಿ ಅನುಕೂಲಭಾವದಿಂದ ಪರಸ್ಪರೋಪಕಾರಕ್ಕಾಗಿಯೇ ಪ್ರವ ರಿಸುವುದೇಹೊರತು,ಭೇದವನ್ನು ಹೊಂದುವುದಿಲ್ಲ. ರಘುವಂಶೋತ್ಪನ್ನ ನಾ ದ ನಿನಗೆ ಇವೆಲ್ಲವೂ ತಿಳಿಯದ ವಿಷಯವಲ್ಲ” ಎಂದನು.ಹೀಗೆ ದಶರಥನು ನಾ ಳೆ ನಡೆಯಬೇಕಾದಪಟ್ಟಾಭಿಷೇಕದ ವಿಷಯವನ್ನು ತಿಳಿಸಿದಮೇಲೆ,ರಾಮನು ಆತನ ಅನುಮತಿಯನ್ನು ಪಡೆದು, ತಂದೆಗೆ ನಮಸ್ಕರಿಸಿ, ಬಾಯೆತ್ತದೆ ಹೊರ ಟುಹೋದನು. ಮತ್ತು ತನ್ನ ತಂದೆಗೆ ಉಂಟಾಗಿರುವ ಈ ಉದ್ದೇಶವನ್ನು ತಾಯಿಯಾದ ಕೌಸಲೈಗೆ ತಿಳಿಸುವುದಕ್ಕಾಗಿ, ಒಡನೆಯೇ ಆಕೆ ಯ ಅಂತಃಪುರಕ್ಕೆ ಬಂದು ಸೇರಿದನು. ಅಷ್ಟರೊಳಗಾಗಿಯೇ ಕೌಸಲ್ಯ ಯು, ಅಲ್ಲಿ ಪಟ್ಟಿಮಡಿಯನ್ನುಟ್ಟು, ಗೃಹದೇವತೆಯ ಸಾನ್ನಿಧ್ಯದಮುಂದೆ ಕುಳಿತು, ಮೌನವ್ರತದಿಂದ ತನ್ನ ಇಷ್ಟದೇವತೆಯನ್ನು ಧ್ಯಾನಿಸುತ್ತಾ, ತನ್ನ ಮಗನಾದ ರಾಮನ ಶ್ರೇಯೋಭಿವೃದ್ಧಿಯನ್ನೇ ಪ್ರಾಕ್ಕಿಸುತ್ತಿದ್ದಳು.ಇಷ್ಟ ರಲ್ಲಿ ಸುಮಿತ್ರೆಯೂಕೂಡ, ರಾಮನಿಗೆ ಅಭಿಷೇಕವು ನಡೆಯುವುದೆಂಬ ಸು

  • ಸತಾಂತು ಧರ ನಿತ್ಯಾನಾಂ ಕೃತಶೋಭಿಚ ರಾಘವ” ಎಂಬುದೇ ಇದಕ್ಕೆ ಮೂಲ ವು. ಕೆಲವರು ಇದಕ್ಕೆ ಬೇರೆಬೇರೆ ವ್ಯಾಖ್ಯಾನಗಳನ್ನು ಕಲ್ಪಿಸಿರುವರು. ಧರನಿರತರಾದ ಸತ್ಪುರುಷರ ಮನಸೂಕೂಡ 'ಕೃತಶೋಭ”, ಇತರರು ಮಾಡಿದ ಮಿತ್ರಭೇದಾದಿ ಕೃತ್ಯಗಳಿಗನುಸಾರವಾಗಿ ಹೋಗುವುದುಂಟು” ಎಂದವು. ಅಥವಾ ಧರನಿರತರಾದವರ ಮನಸ್ಸು “ಕೃತ ಶೋಭಿ'ನಡೆದುಹೋದ ಕಾರವನ್ನು ಅನುಮೋದಿಸತಕ್ಕೆ ಸ್ವಭಾವವು ೪ುದು, ಎಂದರೆ, ಇಲ್ಲಿ ಭರತನು ಎಷ್ಟೆ ಧರನಿರತನಾದ ಸುರುಷಪ್ರಭಾವವುಳ ವನಾದರೂ, ತಾನು ಬಂದಮೇಲೆ ಒಂದುವೇಳೆ ಅಡ್ಡಿ ಮಾಡಿದರೂ ಮಾಡಬಹುದು. ತಾನು ಬರುವುದಕ್ಕೆ ಮೊದಲೇ ನಿನ್ನ ಅಭಿಷೇಕವು ನಡೆದುಹೋಗಿರುವ ಸಂದರ್ಭದಲ್ಲಿ, ಅದನ್ನ ನುಮೋದಿಸಿ ಸಂತೋಷಿಸಬಹುದಾದುದರಿಂದ, ಅವನ ಆಗಮನಕ್ಕೆ ಮೊದಲೇ ಅಭಿ ಷೇಕವನ್ನು ನಡೆಸಿಬಿಡುವುದುತ್ತಮವೆಂದು ಭಾವವು.