ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೬೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೩೧೩ ಸರ್ಗ. 2] ಅಯೋಧ್ಯಾಕಾಂಡವು. ತನಗಿದಿರಾಗಿ ವಿನಯದಿಂದ ಕೈಮುಗಿದು ನಿಂತಿಷ್ಯ ಲಕ್ಷಣವನ್ನು ನೋಡಿ, ಮಂದಹಾಸದಿಂದ ಕೂಡಿದವನಾಗಿ, ಆವತ್ಸಲಕ್ಷಣಾ! ನೀನೂ ನನ್ನೊಡ ನೆ ಸೇರಿ ಈ ಭೂಮಿಯನ್ನು ಪಾಲಿಸಬೇಕು. ನೀನು ನನಗಎರಡನೆಯಪ್ರಾಣ ದಂತೆಯೇ ಇರುವುದರಿಂದ,ರಾಜ್ಯಲಕ್ಷ್ಮಿಯು ನನ್ನನ್ನು ಯಾವಾಗ ಸೇರುವ ಲೋ, ಆಗಲೇ ನಿನ್ನನ್ನೂ ಸೇರಿದಹಾಗೆಯೇ ಅಲ್ಲವೇ! ಎಲೆ ವತ್ರನೆ!ನಿನಗೆ ಬೇ ಕಾದ ಭೋಗಗಳನ್ನೂ, ಮತ್ತು ರಾಜ್ಯ ಫಲಗಳನ್ನೂ ಯಥೇಷ್ಟವಾಗಿ ಅನು ಭವಿಸಬಹುದು. ನಾನು ನನ್ನ ಪ್ರಾಣವನ್ನೂ, ರಾಜ್ಯವನ್ನೂ ನಿನಗಾಗಿಯೇ ಬಯಸುವೆನೆಂದು ತಿಳಿ! ಇನ್ನು ನಾನು ಹೇಳಬೇಕಾದುದೊಂದೂ ಇಲ್ಲ ” ಎಂ ದು ಹೇಳಿ, ಜನನಿಯರಾದ ಆಸಲ್ಯಾಸುಮಿತ್ರೆಯರಿಬ್ಬರಿಗೂ ನಮಸ್ಕರಿಸಿ, ಸೀ ತೆಯನ್ನು ಕಳುಹಿಸಿಕೊಡುವಂತೆ ಅವರನ್ನು ಪ್ರಾಸಿ, ಅವರ ಅನುಮತಿಯ ನ್ನು ಪಡೆದು, ಪ್ರಿಯಪತ್ನಿಯಾದ ಸೀತೆಯನ್ನು ಕರೆದುಕೊಂಡು, ತನ್ನ ಮನೆ ಗೆ ಹೊರಟುಹೋದನು, ಇಲ್ಲಿಗೆ ನಾಲ್ಕನೆಯ ಸರ್ಗವು, ( ವಸಿಷ್ಠನು ರಾಮನನ್ನು ಉಪವಾಸವಿರುವಂತೆ ನಿಯ | ಮಿಸಿದುದು. ದಶರಥನು ಮಾರನೆಯದಿವಸದಲ್ಲಿ ನಡೆಯಬೇಕಾದ ಅಭಿಷೇಕಕ್ಕಾಗಿ, ಉಪವಾಸಾದಿವ್ರತಗಳನ್ನು ನಡೆಸುವಂತೆ ರಾಮನಿಗೆ ಆಜ್ಞಾಪಿಸಿ, ವಸಿಷ್ಠನ ನ್ನು ಕರೆಸಿ, 'ಎಲೈ ತಪಸ್ವಿಯೆ! ನೀನು ಹೋಗಿ ಈಗಲೇ ರಾಮನಿಗೆ ಪತ್ನಿ ಯೊ ಡನೆ ಉಪವಾಸವನ್ನು ಮಾಡಿಸು! ಈ ಉಪವಾಸವನ್ನು ನಡೆಸುವುದರಿಂದ, ಐಶ್ವರಕ್ಕೂ, ಕೀರಿಗೂ, ರಾಜ್ಯಲಾಭಕ್ಕೂ ಕಾರಣವಾಗುವುದು.” ಎಂದು ಪ್ರಾರಿಸಲು, ವೇದವಿತ್ತಾದ ಆ ಮಹರ್ಷಿಯು, ಹಾಗೆಯೇ ಆಗಲೆಂದು ಹೇಳಿ, ಮಂತೊಕವಾಗಿ ರಾಮನಿಂದ ಉಪವಾಸವನ್ನು ಮಾಡಿಸುವು ದಕ್ಕಾಗಿ, ತಾನಾಗಿಯೇ ರಾಮನ ಅರಮನೆಗೆ ಹೊರಟನು. ಬ್ರಾಹ್ಮಣರು ಏರುವುದಕ್ಕೆ ಯೋಗ್ಯವಾಗಿರುವಂತೆ ಸಿದ್ಧಪಡಿಸಲ್ಪಟ್ಟ ರಥವನ್ನೇರಿ, ಶರತ್ಕಾ ಲದ ಮೇಫುಗಳಂತೆ ಬಿಳುಪಾದ ರಾಮಕೃಹದ್ವಾರಕ್ಕೆ ಬಂದು, ಆ ರಥದಿಂ ದಲೇ ಆ ಮನೆಯ ಮೂರುತೊಟ್ಟಿಗಳನ್ನೂ ದಾಟಿ, ಒಳಕ್ಕೆ ಪ್ರವೇಶಿಸಿದ