ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪. ಶ್ರೀಮದ್ರಾಮಾಯಣವು [ಸರ್ಗ, ಜ. ನು. ಹೀಗೆ ಮಹರ್ಷಿಶ್ರೇಷ್ಠನಾದ ವಸಿಷ್ಠನು, ತನ್ನ ಮನೆಗೆ ಬಂದುದನ್ನು ನೋಡಿ, ರಾಮನು ಆತನನ್ನು ಗೌರವಿಸುವುದಕ್ಕಾಗಿ, ಬಹುಸಂಭ್ರಮದಿಂದ ಲೂ, ಆತುರದಿಂದಲೂ ಇದಿರುಗೊಂಡು ಹೊರಕ್ಕೆ ಬಂದು, ರಥದ ಬಳಿಯ ಲ್ಲಿ ನಿಂತು, ತಾನಾಗಿಯೇ ಕೈಗೊಟ್ಟು ಆ ಮಹರ್ಷಿಯನ್ನು ರಥದಿಂದ ಕೆಳಕ್ಕಿ ಳಿಸಿದನು. ಆರಾಮನ ವಿನಯಾತಿಶಯವನ್ನು ನೋಡಿ, ವಸಿಷ್ಠನಿಗೆ ಆತ ನಲ್ಲಿ ಮೇಲೆಮೇಲೆ ಪ್ರೀತಿರಸವು ಉಕ್ಕುತ್ತಿತ್ತು. ಆತನನ್ನು ಕುಶಲಪ್ರಶ್ನಾ ದಿಗಳಿಂದ ಸಂತೋಷಪಡಿಸಿ, ಅವನನ್ನು ಕುರಿತು, ವತ್ಸರಾಮಾ ! ನೀನು ತಂದೆಯ ಪೂಾನುಗ್ರಹಕ್ಕೆ ಪಾತ್ರನಾಗಿರುವೆ!ನಾಳೆ ನಿನಗೆ ಯೌವರಾಜ್ಯಾ ಭಿಷೇಕವು ನಡೆಯುವುದು! ಅದಕ್ಕಾಗಿ ಈಗ ನೀನು ಸೀತಾಸಮೇತನಾಗಿ ಉಪವಾಸವಿರಬೇಕು! ನಹುಷನು ಯಯಾತಿಗೆ ಪದ್ಯವನ್ನು ಕಟ್ಟಿದಂತೆ, ನಾಳೆ ಪ್ರಾತಃಕಾಲದಲ್ಲಿ ನಿನ್ನ ತಂದೆಯು ನಿನಗೆ ಪ್ರೀತಿಪುರಸ್ಸರವಾಗಿ ಯ್ವರಾಜ್ಯಾಭಿಷೇಕವನ್ನು ನಡೆಸುವ ಉದ್ದೇಶವುಳ್ಳವನಾಗಿರುವನು. ” ಎಂದು ಹೇಳಿ, ಸೀತಾಸಮೇತನಾದ ಆ ರಾಮನನ್ನು ಮಂತ್ರವತ್ತಾಗಿ ಉಪ ವಾಸವಿರಿಸಿದನು. ಆಮೇಲೆ ವಸಿಷ್ಠನು ಅಲ್ಲಿ ಯಥೋಚಿತವಾಗಿ ಸತ್ಯ ರಿಸಲ್ಪಟ್ಟು, ರಾಮನ ಅನುಮತಿಯನ್ನು ಪಡೆದು, ಅಲ್ಲಿಂದ ಹಿಂತಿರುಗಿ ಹೊರಟುಬಂದನು. ಇತ್ತಲಾಗಿ ರಾಮನು, ತನ್ನ ಸನ್ನಿತರೊಡಗೂಡಿ ವಿನೋದವಾಕ್ಯಗಳನ್ನಾಡುತ್ತಿದ್ದು, ಕೊನೆಗೆ ಅವರಿಂದ ಸಮ್ಮತನಾಗಿ, ಅವ ರ ಅನುಮತಿಯನ್ನು ಪಡೆದು ಅಂತಃಪುರವನ್ನು ಸೇರಿದನು. ಆಕಾಲದಲ್ಲಿ ರಾಮಾಭ್ಯುದಯವನ್ನು ಕೇಳಿ ಮಹಾಸಂತೋಷಯುಕ್ತರಾಗಿರುವ ಸಿಪುರು ನಸಮೂಹದಿಂದ ಕೂಡಿದ ಆ ಅಂತಃಪುರವು,ಕಲಕಲಧ್ವನಿ ಮಾಡುತ್ತಿರುವ ಪಕ್ಷಿಸಮೂಹದಿಂದಕೂಡಿದ ತಾವರೆಗೊಳದಂತೆ ಶೋಭಿಸುತಿತ್ತು. ಅತ್ತಲಾ ಗಿ ವಸಿಷ್ಠನು ವಿಶಾಲವಾಗಿಯೂ ಸುಂದರವಾಗಿಯೂ ಇರುವ ರಾಮನ ಅರಮನೆಯನ್ನು ಬಿಟ್ಟು ಹೊರಟುಬರುವಾಗ, ರಾಜಮಾರ್ಗವೆಲ್ಲವೂ ಹರ್ಷ ಯುಕ್ತರಾದ ಜನಗಳಿಂದ ತುಂಬಿರುವುದನ್ನು ನೋಡಿದನು. ರಾಮಾಭಿಷೇಕ ವನ್ನು ನೋಡಬೇಕೆಂಬ ಕುತೂಹಲದಿಂದ, ನಾನಾದಿಕ್ಕುಗಳಿಂದಲೂ ಗುಂ ಪಗುಂಪಾಗಿ ಬಂದು ನೆರೆದಿರುವ ಜನಗಳಿಂದ ಆ ಅಯೋಧ್ಯಾಪಟ್ಟಣದ