ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

#AL ಶ್ರೀಮದ್ರಾಮಯಯನ [ಸರ್ಗ, ೬. ನು ಆ ಪ್ರದೇಶವನ್ನು ತನ್ನ ತೇಜಸ್ಸಿನಿಂದ ಮತ್ತಷ್ಟು ಕಾಂತಿವಿಶೇಷವುಳ್ಳು ನನ್ನಾಗಿ ಮಾಡುತ್ತ ಅಲ್ಲಿಗೆ ಪ್ರವೇಶಿಸಿದನು. ಇಲ್ಲಿಗೆ ಐದನೆಯ ಸರವು.

++ರಾಮಾಭಿಷೇಕದ ಸನ್ನಾಹವು.+w “ಪುರೋಹಿತನಾದ ವಸಿಷ್ಠನು ಹೊರಟುಹೋದೊಡನೆಯೇ, ರಾಮ ನು ಸ್ನಾನಮಾಡಿ, ವಿಶಾಲಾಕ್ಷಿಯಾದ ತನ್ನ ಪ್ರಿಯಪತ್ನಿ ಯಾದ ಸೀತೆಯೊಡ ಗೂಡಿ ಭಗವತ್ಪಾನ್ನಿಧ್ಯಕ್ಕೆ ಹೋಗಿ, ನಿಶ್ಚಲಮನಸ್ಸುಳ್ಳವನಾಗಿ, ಅಲ್ಲಿ ಶ್ರೀಮನ್ನಾರಾಯಣನನ್ನು ಉಪಾಸನೆಮಾಡುತಿದ್ದನು. ಮತ್ತು ಅಲ್ಲಿ ಶಾ ಸೊಕ್ಕವಾಗಿ *ಹವಿಃಪಾತ್ರವನ್ನು ತಲೆಯಮೇಲಿಟ್ಟುಕೊಂಡು, ಜ್ವಲಿಸು ತಿರುವ ಅಗ್ನಿಕುಂಡದಲ್ಲಿ #ದೇವದೇವೋತ್ತಮನಾದ ಶ್ರೀಮನ್ನಾರಾಯಣನಿ

  • ಇದಕ್ಕೆ 'ಗತೇ ಪರೋಹಿತೇ ರಾಮಾಖ್ಯಾ ನಿಯತಮಾನಸ: 1 ಸಹಪ ತ್ಯಾ ವಿಲಾಲಾಕ್ಷ ನಾರಾಯಣಮುಖಾಗಮತ್”ಎಂಬುದೇ ಮೂಲವು.ಇಲ್ಲಿ ಸ್ನಾತಃ” ಎಂಬುದರಿಂದ ಕಾಯಶುದ್ದಿಯೂ, ನಿಯತಮಾನಸ" ಎಂಬುದರಿಂದ ಮನಶುದ್ಧಿ ಯೂ ಸೂಚಿಸಲ್ಪಡುವುದು. (ಸಹಪಾ) 'ಪುರೊ ಯಜ್ಞಸಂಯೋಗೇ” ಎಂ ಬಂತೆ ದೀಕ್ಷಾನಿಯಮಕ್ಕೆ ಪತ್ನಿಯೊಡಗೂಡಿದ್ದು ಅವಳ ಸಹಾಯವನ್ನು ಹೊಂದಿರಬೇ ಕಾದುದು ಶಾಸ್ತ್ರವಿಹಿತವು. ಇಲ್ಲಿ ರಾಮನು ಭಗವದುಪಾಸನವನ್ನು ಮಾಡುವಾಗ ಸೀ ತೆಯು ಉಪಕರಣಗಳನ್ನು ಒದಗಿಸಿಕೊಡುತ್ತಿದ್ದಳೆಂದು ಸೂಚಿತವಾಗುವುದು. (ವಿಶಾ ಲಾಕ್ಷ) ಎಂಬುದರಿಂದ ಮತೇ ಮಾಯಾಂ ವಿಶಾಲಾಕ್ಷೀಂ ತವ ಪೂರೈಸರಿಗ್ರಹಂ" ಎಂಬಂತೆ, ವಿಶಾಲಾಕ್ಷೇಶಬ್ದವು ಮಹಾಲಕ್ಷೆಯಲ್ಲಿಯೇ ರೂಢವಾಗಿರುವುದರಿಂದಸೀತೆ ಯು ಸಾಕ್ಷಾಕ್ಷಿಯೆಂಬುದು ವ್ಯಕ್ತವಾಗುವುದು (ನಾರಾಯಣಂ) ಇಲ್ಲಿ ನಾರಾಯಣ ನೆಂದರೆ ಶ್ರೀರಂಗನಾಥನೆಂದು ಗ್ರಹಿಸಬೇಕು. ರಾಮನು ತನಗೆ ಗೃಹಾರಾಧನದಲ್ಲಿದ್ದ ಶ್ರೀರಂಗನಾಥವನ್ನು ವಿಭೀಷಣನಿಗೆ ಕೊಟ್ಟುದಾಗಿ ಮುಂದೆ ವ್ಯಕ್ತವಾಗುವುದು.
  • ಉಪರಿ ದೇವೇಭ್ಯ ಧಾರಯ” ಎಂಬಂತೆ, ದೇವತೆಗಳಿಗಾಗಿ ಹನಿ: ಪಾತ್ರ ವನ್ನು ಮೇಲಾಗಿ ಎತ್ತಿಹಿಡಿಯಬೇಕೆಂದು ಶ್ರುತಿಪ್ರಮಾಣವು.
  • “ತಂ ದೇವತಾನಾಂ ಪರಮಂ ಚ ದೈವತಂ” ಎಂಬ ಶ್ರುತಿಶ್ರಮಾಣದಿಂದ ದೇವದೇವೋತ್ತಮನೆಂದು ಹೇಳಲ್ಪಟ್ಟಿದೆ,