ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೬೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


42 ಸರ್ಗ, ೬.] ಅಯೋಧ್ಯಾಕಾಂಡವು: ಗಾಗಿ ಆಜ್ಞಾಹುತಿಯನ್ನು ಮಾಡಿದನು, ಆಮೇಲೆ ಹೋಮಶೇಷವನ್ನು ಪ್ರೀತಿ ಯಿಂದ ಭುಜಿಸಿದನು. ಇಷ್ಟಾರ ಪ್ರಾಪ್ತಿಯನ್ನು ಕೋರಿ, ಮನಸ್ಸಿನಲ್ಲಿ ನಾರಾ ಯಣನನ್ನು ಧ್ಯಾನಿಸುತ್ತಾ, ತನ್ನ ಕೈಯಿಂದಲೇ ಸಿದ್ಧಪಡಿಸಿಕೊಂಡ ದಾಸನ ದಲ್ಲಿ ಕುಳಿತನು.ಮನದಿಂದ ಮನಸ್ಸನ್ನು *ನಿಶ್ಚಲಮಾಡಿಕೊಂಡು ಸೀತೆಯೊಡ ನ ಆ ವಿಷ್ಣು ಸಾನ್ನಿಧ್ಯದಲ್ಲಿಯೇ ಮಲಗಿದ್ದನು. ಆ ರಾತ್ರಿಯಲ್ಲಿ ಒಂದು ಯಾಮಮಾತ್ರವು ಉಳಿದಿರುವಾಗಲೇ ಎಚ್ಚರಗೊಂಡು, ಆ ದೇವಗೃಹಕ್ಕೆ ಮಾಡಬೇಕಾದ ಅಲಂಕಾರಕಾರಗಳನ್ನು ಮಾಡಿಸಿದನು. ಅಲ್ಲಿ ಸೂತಮಾಗಥ. ವಂದಿಗಳೇ ಮೊದಲಾದವರ ಸುಖಲ್ಲಾಪಗಳನ್ನು ಕೇಳುತ್ತಿದ್ದು ಪ್ರಾತಸ್ಸಂಜ್ಞೆ ಗೆ ಅಧಿದೇವತೆಯಾದ ಸೂರನನ್ನು ಉಪಾಸನೆಮಾಡಿ, ನಿಶ್ಚಲವಾದ ಮನ ಸ್ಸಿನಿಂದಗಾಯತ್ರೀಜಪವನ್ನು ಮುಗಿಸಿದನು. ಶ್ರೀಮನ್ನಾರಾಯಣನನ್ನು ಸ್ತುತಿ ಸುತ್ತಾ ಸಾಷ್ಟಾಂಗಪ್ರಣಾಮವನ್ನು ಮಾಡಿದನು. ತಿರುಗಿ ಸ್ನಾನಮಾಡಿ,ಬಿಳಿ ಪಟ್ಟಿಯನ್ನು ಟ್ಟು,ಬ್ರಾಹ್ಮಣರಿಂದ ಪುಣ್ಯಾಹವಾಚನವನ್ನು ಮಾಡಿಸಿದನು೩೦ ಪಾಗಿಯೂ, ಗಂಭೀರವಾಗಿಯೂ ಇರುವ ಆ ವೇದಘೋಷವು, ಮಂಗಳ ವಾದ್ಯಧ್ವನಿಗಳೊಡಗೂಡಿ ಆಯೋಧ್ಯಾನಗರವೆಲ್ಲವನ್ನೂ ತುಂಬಿತು. ಆಗ ಅಯೋಧ್ಯಾವಾಸಿಗಳೆಲ್ಲರೂ ಹೀಗೆ ರಾಮನು ಸೀತೆಯೊಡಗೂಡಿ ಉಪವಾಸ ವನ್ನು ನಡೆಸಿದನೆಂಬ ವೃತ್ತಾಂತವನ್ನು ಕೇಳಿ, ಮಹೋತ್ಸವಕಾಲವು ಸನ್ನಿಹಿ ತವಾಯಿತೆಂದು ನಿಶ್ಚಯಿಸಿ,ಸಂತೋಷಭರಿತರಾಗಿದ್ದರು. ಹಾಗೆಯೇ ಅವರೆಲ್ಲ ರೂ ಬೆಳಗಾದುದನ್ನು ನೋಡಿ ಪಟ್ಟಣವನ್ನು ಅಲಂಕರಿಸತೊಡಗಿದರು. ಬಿಳೀಮೇಧುಗಳಂತೆ ಶೋಭಿಸುತ್ತಿರುವ ದೇವಾಲಯಗಳಲ್ಲಿಯೂ, ಚತುಷ್ಟ

  • “ನಿಶ್ಚಲಮನಸ್ಕನಾಗಿ ಸೀತೆಯೊಡಗೂಡಿ ಮಲಗಿದ್ದನೆಂಬುದರಿಂದ, ಪ್ರಸಾ ನ್ನಿಧ್ಯದಲ್ಲಿಯೂ ಕೂಡ ರಾಮನ ಜಿತೇಂದ್ರಿಯತ್ವವು ಸೂಚಿತವಾಗುವುದು. ಶ್ರೀಮ ತ್ಯಾಯತನೇ ನಿಷ್ಠೆ” ಎಂದು ಮೂಲದಲ್ಲಿ ಹೇಳಲ್ಪಟ್ಟಿರುವುದರಿಂದ, ಇಲ್ಲಿ 'ಶ್ರೀ ಮತಿ” ಎಂದರೆ, 'ಯಚಾಮಾನಿ ಯಜೂಂಷಿ ಸಾಹಿ ಶ್ರೀರಮೃತಾ ಸತಾಂ” ಎಂಬ ಶ್ರುತಿಪ್ರಮಾಣವನ್ನನುಸರಿಸಿ, ವೇದತ್ರಯಸಾರಭೂತವಾದ ಪ್ರಣವಸ್ಯರಸವೆಂದು ಗ್ರಹಿಸಬೇಕು. ಆದುದರಿಂದಲೇ (ಏಮಾನಂ ಪ್ರಣಮಾಕಾರಂ?” ಎಂಬುದಾಗಿ ಪ್ರವಾ ಕಾರವಾದ ದಿವ್ಯವಿಮಾನವೆಂದು ಸಿದ್ಧವಾಗುವುದು, ಶ್ರೀರಂಗನಾಥನ ದಿವ್ಯ ವಿಮಾನಕ್ಕೆ ಮಾತ್ರವೇ ಈ ಪ್ರಸಿದ್ದಿಯುಂಟು.*