ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೭೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೬೧ ಸರ್ಗ, ೬.] ಅಯೋಧ್ಯಾಕಾಂಡವು. ನಾಗಿದ್ದರೂ ಆತನಲ್ಲಿ ಗತ್ವವೆಂಬುದು ಸ್ವಲ್ಪವೂ ಇಲ್ಲ. ಮತ್ತು ಅವನು ಥತ್ಮಸ್ವರೂಪನು. ಒಡಹುಟ್ಟಿದವರಲ್ಲಿ ವಿಶೇಷವಾತ್ಸಲ್ಯವುಳ್ಳವನು. ಒಡ ಹುಟ್ಟಿದವರಲ್ಲಿ ಹೇಗೋ ಹಾಗೆಯೇ ನಮ್ಮಲ್ಲಿಯೂ ಪ್ರೀತಿಯನ್ನು ತೋರಿ ಸುತ್ತಿರುವನು. ಹೀಗೆ ಲೋಕೋತ್ತರಗುಣವುಳ್ಳ ರಾಮನನ್ನು ರಾಜ್ಯದಲ್ಲಿರಿಸಿ, ಆತನ ಪಟ್ಟಾಭಿಷೇಕೋತ್ಸವವನ್ನು ನಾವೆಲ್ಲರೂ ಕಣ್ಣಾರೆ ಕಂಡನುಭವಿಸು ವಂತೆ ನಮ್ಮನ್ನು ಅನುಗ್ರಹಿಸಿದ ಧಾತ್ಮನಾದ ದಶರಥರಾಜನು, ಚಿರಜೀವಿ ಯಾಗಿರಲಿ”ಎಂದು ಒಬ್ಬರಿಗೊಬ್ಬರು ಮಾತನಾಡುತ್ತಿರುವರು. ಈ ಮಹೋ ತೃವಕ್ಕಾಗಿ ನಾನಾದಿಕ್ಕುಗಳಿಂದಲೂ ಬಂದು ಸೇರಿದ್ದ ದೇಶವಾಸಿಗಳೆಲ್ಲರೂ, ಈಕೊಂಡಾಟದ ಧ್ವನಿಗಳನ್ನು ಅಕ್ಕರೆಯಿಂದ ನಿಂತು ಕೇಳುತ್ತಿರುವರು. ಹೀಗೆ ಹೊರಗಿನಿಂದ ಬಂದ ಜನಸಮೂಹದಿಂದ * ಆ ರಾಮನ ಪುರವೆಲ್ಲವೂ ಕಿಕ್ಕಿರಿಸಿ ತುಂಬಿ ಹೋಯಿತು. ಈ ಜನರ ಕೋಲಾಹಲಧ್ವನಿಯು ಪಠ್ಯಕಾ ಲದ ಸಮುದ್ರಘೋಷದಂತೆ ಸಮಸ್ತದಿಕ್ಕುಗಳನ್ನೂ ವ್ಯಾಪಿಸಿತು. ಮಹೇಂ ದ್ರಭವನದಂತೆ ಅತಿರಮಣೀಯವಾದ ಆ ಪಟ್ಟಣದ ಬೀದಿಬೀದಿಗಳಲ್ಲಿಯೂ ರಾಮಾಭಿಷೇಕೋತ್ಸವಕ್ಕಾಗಿ ಕಾದಿದ್ದ ಜನಸಮೂಹವು ನಿಬಿಡವಾಗಿ ತುಂ ಬಿರಲು, ಅವರ ಕೋಲಾಹಲಧ್ವನಿಯು ತಿಮಿತಿಮಿಂಗಿಲಾಂಜಲಜಂತುಗಳ ಕೋಲಾಹಲಧ್ವನಿಯಿಂದ ಕೂಡಿದ 'ಮಹಾಸಮುದ್ರದಂತೆ ಶೋಭಿಸುತಿ ತ್ತು. ಇಲ್ಲಿಗೆ ಆರನೆಯ ಸರ್ಗವು. ಬಾ ಇನ್ಯ - .. ಮಂಧರೆಯು ಕೈಕೇಯಿಗೆ ದುರ್ಬೋಧನೆಯನ್ನು )

      • 1

ಮಾಡಿದುದು, ಮಾಡಿದುದು, ಹೀಗೆ ಮಹೋತ್ಸವಸಾಹಗಳೆಲ್ಲವೂ ಪರಮವೈಭವದಿಂದ ಜರು ಗುತಿದ್ದುವು. ಇಷ್ಟರೊಳಗಾಗಿ ಕೈಕೇಯಿಗೆ ಅವಳ ಬಂಧುಗಳಿಂದ ಒಪ್ಪಿ

  • ಇದಕ್ಕೆ ಮೊದಲುದಿನವೇ ಸಮಸ್ತ ಸಭಾಸದರ ಮುಂದೆ ರಾಮಾಭಿಷೇಕವು ನಿಶ್ಚ ಯಿಸಲ್ಪಟ್ಟುದರಿಂದ, ಇನ್ನು ಅಯೋಧ್ಯೆಗೆ ರಾಮನೇ ಅಧಿಪತಿಯೆಂಬ ಭಾವವನ್ನಿಟ್ಟು, ಇಲ್ಲಿ ರಾಮನ ಪಟ್ಟಣವೆಂದು ಹೇಳಲ್ಪಟ್ಟಿದೆ.