ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೭೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


L೨೦ ಶ್ರೀಮದ್ರಾಮಾಯಕನ | [ಸರ್ಗ, & ಸಲ್ಪಟ್ಟು, ಯಾವಾಗಲೂ ಅವಳ ಸಂಗಡಲೇ ಇರುತ್ತಿದ್ದ ಗೂನುಬೆನ್ನಿನ ದಾಸಿಯೊಬ್ಬಳು, ಹಠಾತ್ತಾಗಿ ಉಪ್ಪರಿಗೆಯನ್ನೇರಿದಳು. ಈ ದಾಸಿಯು ಎಲ್ಲಿ ಹುಟ್ಟಿದಳೆಂದು ಯಾರಿಗೂ ತಿಳಿಯದು. ಇವಳು, ಚಂದ್ರನಂತೆ ಬಿಳುಪಾಗಿ ಹೂಳಯುತಿದ್ದ ಆ ಉಪ್ಪರಿಗೆಯ ಮೇಲೆ ನಿಂತು ನೋಡುತ್ತ, ಆ ಅಯೋ ಧ್ಯಾಪಟ್ಟಣದ ಬೀದಿಗಳೆಲ್ಲವೂ ಜಲಸೇಚನಾದಿಗಳಿಂದಲೂ, ಪುಷ್ಪ ಹಾರಗಳಿಂದಲೂ ಅಲಂಕರಿಸಲ್ಪಟ್ಟಿದ್ದುದನ್ನು ಕಂಡಳು. ಎಲ್ಲೆಲ್ಲಿ ನೋಡಿ ದರೂ ವಿಚಿತ್ರವರ್ಣವುಳ್ಳ ಧ್ವಜಪತಾಕೆಗಳು ಕಟ್ಟಲ್ಪಟ್ಟಿದ್ದುವು. ನಾ ನಾದೇಶಗಳಿಂದಲೂ ಅನೇಕಜನರು ಗುಂಪುಗುಂಪಾಗಿ ಬಂದು ಆಯೋಧ್ಯಾ ಪಟ್ಟಣದಲ್ಲಿ ನೆರೆದಿದ್ದುದರಿಂದ, ಅವರ ಸಂಚಾರಕ್ಕೆ ಅನುಕೂಲಿಸುವಂತೆ ಅಲ್ಲಲ್ಲಿ ಹೊಸಹೊಸದಾಗಿ ಅಡ್ಡದಾರಿಗಳು ಏರ್ಪ್ಪಡಿಸಲ್ಪಟ್ಟಿದ್ದುವು. ಅಲ್ಲಿನ ಜನರೆಲ್ಲರೂ ಅಭ್ಯಂಗಸ್ನಾನಾದಿಗಳನ್ನು ಮಾಡಿ ಪರಿಶುದ್ಧರಾಗಿದ್ದರು. ಬ್ರಾ ಹ್ಮಣರೆಲ್ಲರೂ ಕೈಯಲ್ಲಿ ಪುಷ್ಪಮಾಲಿಕೆಗಳನ್ನೂ,ಕಡುಬು' ಮೊದಲಾದ ಭಕ ಣಗಳನ್ನೂ ಹಿಡಿದುಕೊಂಡು, ಅಲ್ಲಲ್ಲಿ ಸಂಭ್ರಮದಿಂದ ಕೋಲಾಹಲಗಳನ್ನು ಮಾಡುತಿದ್ದರು. ಅಲ್ಲಿನ ದೇವಾಲಯಗಳೆಲ್ಲವೂ ಸುಣ್ಣದಿಂದ ಅಲಂಕರಿಸಲ್ಲ ಟಿದ್ದುವು. ಎಲ್ಲೆಲ್ಲಿ ನೋಡಿದರೂ ಮಂಗಳವಾದ್ಯಗಳು ಮೊಳಗುತಿದ್ದುವು, * * ಜ್ಞಾತಿದಾಸೀ ಯ ಜಾತಾ” ಎಂಬುದೇ ಇದಕ್ಕೆ ಮೂಲವು. (ಯತ ಜಾತಾ) ಎಲ್ಲಿಯೇ ಹುಟ್ಟಿದವಳು. ಅವಳು ಹುಟ್ಟಿದ ಸ್ಥಳವಾಗಲಿ, ಅವಳ ತಾಯಿತಂ ದೆಗಳಾಗಲಿ ಯಾರಿಗೂ ತಿಳಿದಿಲ್ಲವೆಂದರು. ಇದರ ಏಶೇಷಾರವೇನೆಂದರೆ:-ಸರ ಲೋಕಪ್ರಿಯವಾದ ರಾಮಾಭಿಷೇಕವನ್ನು ತಪ್ಪಿಸುವ ಇಂತಹ ದುರ್ಬುದ್ದಿಯುಳ್ಳವರು ಮಹಾಪುಣ್ಯಸ್ಥಳವಾದ ಅಯೋಧ್ಯೆಯಲ್ಲಿ ಎಂದಿಗೂ ಹುಟ್ಟಿರಲಾರರು. ಅದರಿಂದ ಇವಳು ಎಲ್ಲಿಯೋ ಹುಟ್ಟಿರಬೇಕೆಂದುಭಾವವು, ಮತ್ತು ಇಂತಹ ಪಾಪಾತ್ಮರ ಹೆಸರು, ಜಾತಿ, ಮುಂತಾದುವುಗಳನ್ನು ಬಾಯಿಂದ ಉಚ್ಚರಿಸುವುದೂ ಕೂಡ ಮಹಾದೋಷವೆಂ ಬುದಕ್ಕಾಗಿ, ಮಂಧರೆಯೆಂದೂ ಹೇಳದೆ, “ಎಲ್ಲಿಯೋ ಹುಟ್ಟಿದವಳೊಬ್ಬಳು' ಎಂದು ಹೇಳಿದಹಾಗಿಯೂ ಗ್ರಹಿಸಬಹುದು, ಅಥವಾ ರಾಮನಿಂದ ನಡೆಯಬೇಕಾದ ರಾವಣ ವಥಾರವಾಗಿ ದೇವತೆಗಳಿಂದಲೇ ಈ ವ್ಯಕ್ತಿಯು ಸೃಷ್ಟಿಸಲ್ಪಟ್ಟಿರುವುದಂಬುದಕ್ಕಾಗಿ, ಆ ದೇವರಹಸ್ಯವನ್ನು ಹೊರಪಡಿಸಕೂಡದೆಂಬ ಭಾವದಿಂದ, ಅವಳ ಕುಲಾದಿಗಳನ್ನು ಹೇಳಸ ಎಲ್ಲಿಯೋ ಹುಟ್ಟಿದವಳೊಬ್ಬಳೆಂದು ಹೇಳಿದುದಾಗಿಯೂ ಭಾವವು,