ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܘܦܬ ಸರ್ಗ ೭.] ಅಯೋಧ್ಯಾಕಾಂಡವು. ಜನರೆಲ್ಲರೂ ಸಂತೋಷಭರಿತರಾಗಿ ಅಲ್ಲಲ್ಲಿ ಗುಂಪುಗೂಡಿದ್ದರು. ಅಲ್ಲಲ್ಲಿ ಬ್ರಾ ಹ್ಮಣರು ವೇದಘೋಷಗಳನ್ನು ನಡೆಸುತ್ತಿದ್ದರು. ಆನೆಗಳು, ಕುದುರೆಗಳು, ಗೋವುಗಳು, ಮುಂತಾದ ಮೃಗಜಾತಿಗಳುಕೂಡ, ಸಂತೋಷಸೂಚಕವಾದ ಧ್ವನಿಯನ್ನು ಮಾಡುತ್ತ, ಉತ್ಸಾಹದಿಂದ ತಿರುಗುತ್ತಿದ್ದುವು. ಪಟ್ಟಣವಾ' ಸಿಗಳೆಲ್ಲರೂ ಪರಮಸಂತೋಷಯುಕ್ತರಾಗಿ, ಮನೆಮನೆಯ ಬಾಗಿಲುಗಳಲ್ಲಿ ಯೂ ಧ್ವಜತೋರಣಾದಿಗಳನ್ನು ಕಟ್ಟಿ ಅಲಂಕರಿಸಿದ್ದರು. ಹೀಗೆ ಸಾಲಂ ಕಾರಭೂಷಿತವಾದ ಆ ಪಟ್ಟಣದ ಅಂದವನ್ನು ನೋಡಿದೊಡನೆಯೇ, ಮಂ ಧರೆಯೆಂಬ ಆ ದಾಸಿಗೆ, ಮನಸ್ಸಿನಲ್ಲಿ ಪರಮಾಶರವುಂಟಾಯಿತು. ಅವಳು ಸ್ವಲ್ಪ ಹೊತ್ತಿನವರೆಗೆ ಆಶ್ಚರಭರಿತಳಾಗಿ ನೋಡುತಿದ್ದಳು. ಆಮೇಲೆ ಆ ಉ ಸ್ಪರಿಗೆಯ ಮತ್ತೊಂದುಕಡೆಯಲ್ಲಿ, ತನಗೆ ಸ್ವಲ್ಪ ದೂರವಾಗಿ ಬಿಳೀದುಕೂಲ ವನ್ನು ಟ್ಟುಕೊಂಡು, ಸಂತೋಷದಿಂದರಳಿದ ಕಣ್ಣುಳ್ಳವಳಾಗಿ ನಿಂತಿದ್ದ ರಾಮನ ದಾಹಿಯೊಬ್ಬಳನ್ನು ಕಂಡಳು. ಮೆಲ್ಲಗೆ ಅವಳ ಸಮೀಪಕ್ಕೆ ಹೋಗಿ ಅವಳನ್ನು ಕುರಿತು ಏನಮ್ಮ ! ಈ ಸಂಭ್ರಮಗಳಿಗೆ ಕಾರಣವೇ ನು ? ರಾಮನ ತಾಯಿಯಾದರೆ ಪರಮಕೃಪಣಳು ! ಈ ಹಣದಾಸೆಯು ಆಕೆಗೆ ಮಿತಿಮೀರಿರುವುದು. ಹೀಗಿದ್ದರೂ ಆಂತವಳು, ಈಗ ಇಲ್ಲಿನ ಜನರಿ ಗೆಲ್ಲಾ ಅಪರಿಮಿತವಾಗಿ ಹಣವನ್ನು ಕೊಡುವಂತಿದೆ ! ಅವಳಿಗೆ ಹಾಗೆ ಮೈಮರೆಯುವಷ್ಟು ಸಂತೋಷವುಂಟಾಗುವುದಕ್ಕೆ ಕಾರಣವೇನು ? ಇಲ್ಲಿನ ಜನರೆಲ್ಲರೂ ಇಷ್ಟು ಸಂತೋಷಭರಿತರಾಗಿರುವುದೇಕೆ ? ಈಗ ದಶರಥರಾ ಜನು ಇಷ್ಟು ಸಂತೋಷದಿಂದ ನಡೆಸಬೇಕಾದ ಕಾವ್ಯವೇನು?” ಎಂದು ಕೇಳಿ ದಳು. ಹೀಗೆ ಕೇಳಿದೊಡನೆಯೇ, ಆ ದಾದಿಯು, ರಾಮಾಭ್ಯುದಯವನ್ನು ತಿಳಿಸುವೆನೆಂಬ ಪರಮಸಂತೋಷದಿಂದ ಮೆಯೊಡೆಯುವಂತೆ ಉಬ್ಬಿದಳು. ಅಸೂಯಾಸ್ವಭಾವವುಳ್ಳ ಮಂಥರೆಯು ಈ ಶುಭಕಾರಕ್ಕೆ ಅಡ್ಡಿ ಮಾಡ ಬಹುದೆಂದು ತಿಳಿದಿದ್ದರೂ, ಆಗ ಅವಳಿಗುಂಟಾದ ಸಂತೋಷವು.

  • ಆಸಿಯಲ್ಲಿ ಅಸೂಯೆಯಿಂದಲೇ ಮಂಧರೆಯು ಈ ದೋಷವನ್ನು ಹೇಳಿದು ದಾಗಿ ಗ್ರಹಿಸಬೇಕು. ಅದಕ್ಕಾಗಿಯೇ ಇಲ್ಲಿ ಮಂಧರೆಯು ಕಸಿಯೆಂದು ಹೆಸರು ಹಿ ಇದು ಹೇಳುವುದಕ್ಕೂ ಇಷ್ಟಪಡದೆ, ರಾಮನ ತಾಯಿಯೆಂದು ಹೇಳಿರುವಳು.

- 21