ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೭೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸರ್ಗ, ೭] ಅಯೋಧ್ಯಾಕಾಂಡವು. ೨೨೩ ಮಾಡಿದ ಕೈಕೇಯಿಯ ಮಾತನ್ನು ಕೇಳಿ, ಸಮಯೋಚಿತವಾಗಿ ಮಾತಾಡು ವುದರಲ್ಲಿ ಚತುರೆಯಾದ ಮಂಥರೆಯು, ಮತ್ತಷ್ಟು ದುಃಖವನ್ನೂ, ಕೋಪವ ನ್ಯೂ ತೋರಿಸಿ, ಆ ಕೈಕೇಯಿಗೆ ತಾನು ಬಹಳ ಹಿತೈಷಿಣಿಯಂತೆ ನಟಿ ಸುತ್ತಾ, ಅವಳಿಗೆ ರಾಮನಲ್ಲಿರುವ ಸ್ವಾಭಾವಿಕವಾದ ಪ್ರೀತಿಯನ್ನು ತಪ್ಪಿಸಿ ಕೋಪವನ್ನುಂಟು ಮಾಡುವಂತೆ ಒಂದಾನೊಂದು ಮಾತನ್ನು ಹೇಳುವಳು. (ಅಮ್ಮ ಕೈಕೇಯಿ! ನಾನೇನು ಹೇಳಲಿ! ನಿನ್ನನ್ನು ಕೆಡಿಸುವುದಕ್ಕಾಗಿ ದೊ ಈ ಪ್ರಯತ್ನವು ನಡೆಯುತ್ತಿದೆ. ಅದಕ್ಕೆ ಪ್ರತೀಕಾರವೇನೆಂದು ಯೋಚಿಸು ವುದಕ್ಕೂ ದಾರಿಯಿಲ್ಲ. ಅಯ್ಯೋ! ಅತ್ತಲಾಗಿ ರಾಜ್ಯವೇ ಸೂರೆಹೋಗುತ್ತಿರು ವುದಲ್ಲಾ ! ನಾಳೆ ದಶರಥನು ರಾಮನಿಗೆ ಪಟ್ಟವನ್ನು ಕಟ್ಟುವನಂತೆ ! ಇದನ್ನು ಕೇಳಿದೊಡನೆ ನನ್ನ ಎದೆಯಲ್ಲಿ ಬೆಂಕಿಯಿಟ್ಟಂತಾಯಿತು. ಕರ್ಣಕಠೋರ ವಾದ ಈ ಮಾತನ್ನು ಕೇಳಿ ನಾನು ಅಪಾರವಾದ ಭೀತಿಸಾಗರದಲ್ಲಿ ಮುಳುಗಿ, ಸಂಕಟವನ್ನು ತಡೆಯಲಾರದೆ, ಈ ವಿಷಯವನ್ನು ನಿನಗೆ ತಿಳಿಸಬೇಕೆಂದೇ ಬಂದೆನು. ಅಮ್ಮ ಕೈಕೇಯಿ: ನಿನ್ನ ದುಃಖವೇ ನನ್ನ ದುಃಖವು! ನಿನ್ನ ಶೈಯ ಸ್ಟೇ ನನ್ನ ಶ್ರೇಯಸ್ಸು ! ಮುಖ್ಯವಾಗಿ ಈ ಭಾಗದಲ್ಲಿ ನಿನ್ನ ದುಃಖಕ್ಕಿಂತ ಲೂ ನನ್ನ ದುಃಖವೇ ಅಧಿಕವೆಂದು ತಿಳಿ! ಇದರಲ್ಲಿ ಸ್ವಲ್ಪವೂ ಸಂದೇಹವಿಲ್ಲ. ಆಹಾ! ರಾಜಕುಲದಲ್ಲಿ ಹುಟ್ಟಿ,ಇದುವರೆಗೆ ರಾಜಮಹಿಷಿಯಾಗಿ ಬಳೆದಿದ್ದರೂ, ನಿನಗೆ ರಾಜನಲ್ಲಿರುವ ಕೊರಭಾವವು ತಿಳಿಯದೆಕೊಯಿತೆ ? ಮುಖ್ಯವಾ ಗಿ ನಿನ್ನ ಗಂಡನು,ಮೇಲೆಮೇಲೆ ಧರಗಳನ್ನು ನುಡಿಯುತ್ತಿದ್ದರೂ, ಅಂತರಂಗ ದಲ್ಲಿ ಬಹಳ ಕಪದಸ್ವಭಾವವುಳ್ಳವನು! ಬಾಯಲ್ಲಿ ಮೃದುವಾದ ಮಾತು ಗಳನ್ನಾಡುತ್ತಿದ್ದರೂ, ಆತನ ಮನಸ್ಸು ಬಹಳ ಕಠಿಣವಾದುದು! ನೀನು ಬಹಳ ಋಜುಸ್ವಭಾವವುಳ್ಳವಳಾದುದರಿಂದ, ಬೆಳ್ಳಗಿರುವುದನ್ನೆಲ್ಲಾ ಹಾಲೆಂದು ನಂಬುವವರಂತೆ,ಆತನ ಕಪಟವನ್ನೂ ಅರಿಯದೆ ಹೋದೆಯಲ್ಲಾ! ರಾಜನು ಆ ಗಾಗ ಸಿನ್ನಲ್ಲಿಗೆ ಬಂದು ಕೇವಲಸಿರರಕಗಳಾದ ಸವಿನುಡಿಗಳಿಂದ ನಿನ್ನನ್ನು ಮರುಳುಮಾಡುತ್ತಿರುವನೇಹೊರತು, ತನ್ನ ನಿಜವಾದ ಪ್ರೀತಿಗೆ ಫಲವನ್ನು ಕೌಸಿಯಲ್ಲಿ ತೋರಿಸುತ್ತಿರುವನು. ಅಯ್ಯೋ ! ಇನ್ನೊಂದು ರಹಸ್ಯವುಂ ಟು! ದಶರಥನು ನಿನ್ನ ಮಗನಾದ ಭರತನನ್ನು ಉಪಾಯದಿಂದ ನಿನ್ನ ತೌರು