ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೭೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


194 ಶ್ರೀಮದ್ರಾಮಾಯಣವು [ಸರ್ಗ, ೮, ಷ್ಟು ಸಂಕಟವುಂಟಾಗಿದ್ದರೂ, ನಿನ್ನ ಅವಿವೇಕದ ಮಾತನ್ನು ಕೇಳಿ ನನಗೆ ಒಳಗೊಳಗೆ ನಗೆಯುಂಟಾಗುತ್ತಿರುವುದು. ಸಂಕಟಕರವಾದ ಈ ಮಹಾವ್ಯ ಸನದಲ್ಲಿಯೂ ನೀನು ಹೀಗೆ ಸಂತೋಷಪಡುವುದನ್ನು ನೋಡಿದರೆ,ನನಗೆ ಪರ ಮಾಸ್ತ್ರ ಗ್ಯವಾಗಿದೆ!ರಾಮನ ಪಟ್ಟಾಭಿಷೇಕವಾರ್ತೆಗಿಂತಲೂ ಈ ನಿನ್ನ ಹುಚ್ಚು ಮಾತನ್ನು ಕೇಳಿ ನನಗೆ ಹೆಚ್ಚು ಸಂಕಟವುಂಟಾಗುತ್ತಿದೆ. ಲೋಕದಲ್ಲಿ ಸವತಿಯ ಮಗನಿಗಿಂತಲೂ ಬೇರೊಬ್ಬ ಶತ್ರುವುಂಟೆ! ಅಂತವರಿಗೆ ಶ್ರೇಯ ಸೃನ್ನು ಕೋರುವುದು ಮೃತ್ಯುವನ್ನು ಬಯಸಿದಹಾಗೆಯೇ ಹೊರತು ಬೇರೆ ಯಲ್ಲ. ವಿವೇಕವುಳ್ಳ ಯಾವ ಹೆಂಗಸು ತಾನೇ ಈ ವಿಷಯದಲ್ಲಿ ಸಂತೋಷ ಪಡುವಳು ? ರಾಜ್ಯದಲ್ಲಿ ರಾಮನಿಗೂ ಭರತನಿಗೂ ಸಮವಾದ ಬಾಧ್ಯತೆ ಯುಂಟು. ಆದುದರಿಂದ, ರಾಮನಿಗೆ ಮುಖ್ಯವಾಗಿ ಭರತನ ಭಯವು ಬಹಳ ವಾಗಿದೆ. ಈ ಭಯಕ್ಕಾಗಿ ರಾಮನು ಅವನಿಗೆ ಕೇಡನ್ನೆ ಕೋರುತ್ತ, ಅವನ ಮೇಲೆ ಯಾವಾಗಲೂ ಕಣ್ಣಿಟ್ಟು ಕಾದಿರುವನು! ಹುಲಿ, ಹಾವು, ಮೊದ ಲಾದುವುಗಳನ್ನು ನೋಡಿ ನಮಗೆ ಭಯವುಂಟಾಗುವುದರಿಂದಲೇ,ಅವುಗಳನ್ನು ನಾವೂ ಕಂಡಕಂಡಲ್ಲಿ ಕೊಲ್ಲುತ್ತಿರುವೆವಲ್ಲವೆ ! ಇದೆಲ್ಲವನ್ನೂ ಯೋಚಿಸಿ ಯೇ ನನಗೆ ಮನಸ್ಸಿನಲ್ಲಿ ಬಹಳ ಸಂಕಟವುಂಟಾಗಿರುವುದು. ಈ ಲಕ್ಷಣಶ ತ್ರುಘ್ನು ರಿಗೂಕೂಡ ರಾಜ್ಯದಲ್ಲಿ ಸಮವಾದ ಬಾಧ್ಯತೆಯಿರುವಾಗ, ಅವರಿ ಬ್ಬರಿಗೂ ಈ ಭಯವಿಲ್ಲವೆ ?” ಎಂದು ನೀವು ತಿಳಿಯಬೇಡ! ಮಹಾಥನು ರ್ಧಾರಿಯಾದ ಲಕ್ಷಣನಾದರೋ, ತ್ರಿಕರಣಶುದ್ಧಿಯಿಂದ ರಾಮನನ್ನೆ ಆಶ್ರಯಿಸಿಕೊಂಡಿರುವನು ಅದರಂತೆಯೇ ಶತ್ರುಘ್ನುನು ಭರತನನ್ನು ಆಶ್ರ ಯಿಸಿರುವನು. ಹೀಗೆ ಅವರಿಬ್ಬರೂ ಪರತಂತ್ರರಾಗಿರುವುದರಿಂದ, ಅವರಿಬ್ಬ ರಿಗೂ ಭೀತಿಗೆ ಕಾರಣವಿಲ್ಲ. ಭರತನವಿಷಯದಲ್ಲಿ ರಾಮನಿಗೆ ಯಾವಾಗಲೂ ಭೀತಿಯುಂಟೆಂಬುದಕ್ಕೆ ಮತ್ತೊಂದು ಕಾರಣವೂ ಉಂಟು. ಈ ನಾಲ್ವರು ಕುಮಾರರ ಜನ್ಮಕ್ರಮವನ್ನು ನೋಡಿದರೆ, ಭರತನ ಜನನವು ರಾಮನ ಜನ್ಮ ಕೈ ಬಹಳ ಸಮೀಪವಾಗಿರುವುದು. ಆದುದರಿಂದ ರಾಜ್ಯ ಪ್ರಾಪ್ತಿಯ ವಿಷ ಯದಲ್ಲಿಯೂ, ರಾಮನಿಂದೀಚೆಗೆ ಭರತನಿಗೆಮಾತ್ರವೇ ಹೆಚ್ಚು ಬಾಧ್ಯತೆಯು ಸಲ್ಲುವುದು. ಭರತನಿಗಿಂತಲೂ ಲಕ್ಷಣಶತ್ರುಘ್ನು ರು ಕಿರಿಯವರಾಗಿ ಹುಟ್ಟಿ