ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1s ಸರ್ಗ, ೮] ಅಯೋಧ್ಯಾಕಾಂಡವು. ದುದರಿಂದ, ರಾಜ್ಯದಲ್ಲಿ ಅವರಿಗೆ ಬಾಧ್ಯತೆಯು ಕಡಿಮೆ! ಲಕ್ಷಣಶತ್ರುಘ್ನು ರಿಬ್ಬರೂ ಪರತಂತ್ರರಾಗಿದ್ದರೂ, ರಾಜ್ಯಾಭಿಲಾಷೆಯೆಂಬುದು ಎಲ್ಲರಿಗೂ ಸಮನಾಗಿಯೇ ಇರಬಹುದು. ಆದರೂ ರಾಮನಾದಮೇಲೆ ವಯಸ್ಸಿನಲ್ಲಿ ಭರತನೇ ಹಿರಿಯನಾದುದರಿಂದ, ಮುಖ್ಯವಾಗಿ ರಾಮನಿಗೆ ಭರತನಲ್ಲಿ ಯೇ ಬಲವಾದ ಕಣ್ಣಿರಬೇಕು!ಆದುದರಿಂದ ರಾಮನು ಮೊದಲು ಭರತನನ್ನು ಕೊಲ್ಲುವ ಯೋಚನೆಯಲ್ಲಿಯೇ ಇರುವನು. ಅದಕ್ಕಾಗಿ ಭರತನು ರಾಮ ನಿಗೇ ಭಯಪಡಬೇಕಾಗಿರುವುದು. (( ವಯಸ್ಸಿನ ತಾರತಮ್ಯವನ್ನು ನೋಡಿ ದರೂ, ರಾಜ್ಯ ಪ್ರಾಪ್ತಿಗೆ ರಾಮನೇ ಮುಖ್ಯಾಧ್ಯನಾಗಿರುವಾಗ ಭರತನಿಗೆ ಆ ರಾಜ್ಯವು ಹೇಗೆ ಬಂತು?” ಎಂದು ನೀನು ಆಕ್ಷೇಪಿಸಬಹುದು.ರಾಜ್ಯವು ಹೇ ಗಾದರೂ ಹೋಗಲಿ! ಮತ್ತೊಂದು ವಿಷಯವನ್ನು ಹೇಳುವೆನು ಕೇಳು?ಸ್ಕಾ ಭಾವಿಕವಾಗಿಯೇ ರಾಮನು ಬಹಳಬುದ್ದಿವಂತನು. ರಾಜನೀತಿಯಲ್ಲಿ ಬಹಳ ನಿ ಪುಣನು, ಯಾವಾಗ ಯಾವಯಾವ ಕೆಲಸಗಳನ್ನು ಮಾಡಬೇಕೋ, ಅವುಗಳ ನ್ನು ಆಗಲೇ ತಪ್ಪದೆಮಾಡಿ ಮುಗಿಸುವನು. ನಿನ್ನ ಮಗನಾದರೋ ಅಷ್ಟು ಸಮ ರನಲ್ಲ. ಯಾವಾಗಲೂ ರಾಮನಿಗೆ ಭಯಪಟ್ಟು ನಡುಗುತ್ತಿರುವನು.ಇದೆಲ್ಲವ ನ್ಯೂ ಯೋಚಿಸಿದರೆ ಮಹಾತಂತ್ರಿಯಾದರಾಮನು ರಾಜ್ಯಾಧಿಕಾರವನ್ನು ವಹಿ ಸಿದಮೇಲೆ,ಏನೂ ತಿಳಿಯದ ಭರತನನ್ನು ತನ್ನ ಕೈಕೆಳಗೆ ಅಡಗಿಸಿಟ್ಟುಕೊಂಡು ಆತನನ್ನು ಯಾವ ಅಪಾಯಕ್ಕೆ ಗುರಿಮಾಡುವನೋ ಎಂದು ನನ್ನ ಎದೆಯು ನಡುಗುತ್ತಿರುವುದು. ಇವುಗಳೆಲ್ಲವನ್ನೂ ನೀನು ಚೆನ್ನಾಗಿ ಯೋಚಿಸಿ, ಈಗಲೇ ತಕ್ಕ ಪ್ರತೀಕಾರವನ್ನು ಮಾಡಬೇಡವೆ ! ನಿನ್ನ ಮಗನ ವಿಷಯವೂ ಹಾಗಿರ ಲಿ!ನಿನ್ನ ಸವತಿಯಾದ ಕೌಸಲ್ಯಯ ಭಾಗ್ಯವನ್ನು ನೋಡಿದೆಯಾ!ಆಕೆಯ ಮ ಗನನ್ನು ನಾಳೇ ಪುಷ್ಯ ನಕ್ಷತ್ರದಲ್ಲಿ ರಾಜಸಿಂಹಾಸನದಮೇಲೆ ಕುಳ್ಳಿರಿಸಿ ಬಾ ಹ್ಮಣರೆಲ್ಲರೂ ಸೇರಿ ಪಟ್ಟಾಭಿಷೇಕವನ್ನು ನಡೆಸುವರು ! ಅವಳ ಭಾಗ್ಯಕ್ಕೆ ಮೇಲೆ ಭಾಗ್ಯವುಂಟೆ? ತನ್ನ ಮಗನು ಯುವರಾಜನಾಗಿಬಿಟ್ಟಮೇಲೆ, ಅವಳ ಅಧಿಕಾರಕ್ಕೆ ತಡೆಯುಂಟಿ'ನಿನ್ನಂತಹ ಸವತಿಯರ ಹೆಮ್ಮೆ ಯನ್ನೆಲ್ಲಾ ನಿಮಿಷ ಮಾತ್ರದಲ್ಲಿ ಮುರಿಹಿಟ್ಟು,ನಿರಂಕುಶವಾಗಿ ನಡೆಯುವಳು. ಆಗ ಅವಳ ಹೆಮ್ಮೆ ಗ, ಅವಳ ಸಂತೋಷಕ್ಕೂ ಪಾರವುಂಟೆ ? ನೀನು ದಾಸಿಯಂತೆ ಕೈಕಟ್ಟಿ,