ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೮೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


196 ಶ್ರೀಮದ್ರಾಮಾಯಣವು. [ಸರ್ಗ, ಕೆ. ನಿಂತು, ಅವಳ ಸೇವಾವೃತ್ತಿಯಲ್ಲಿರಬೇಕು! ನಿನ್ನೊಡನೆ ನಾವೆಲ್ಲರೂ ಅವ ಳಿಗೆ ಗಡಿಯರಾಗಿದ್ದು ಕೆಲಸಮಾಡಬೇಕು. ನೀನು ಕೌಸಲ್ಯಗೆ ದಾಸಿಯಾಗಿ ರುವಂತೆ, ಭರತನು ರಾಮನಿಗೆ ದಾಸಭೂತನಾಗಿರಬೇಕು.ಇವೆಲ್ಲವೂ ಹಾಗಿ ರಲಿ ! ರಾಮನು ಪಟ್ಟಕ್ಕೆ ಬಂದಮೇಲೆ *ಆತನ ಸ್ತ್ರೀಯರ ಅಟ್ಟಹಾಸವನ್ನು ಕೇಳಬೇಕೆ? ಅವರ ಸಂತೋಷಕ್ಕೂ ಅವರ ಅಧಿಕಾರಕ್ಕೂ ತಡೆಯೇ ಇರುವುದಿ

  • “ಕೃಷ್ಣಾ: ಖಲು ಭವಿಷ್ಯ೦ತಿ ರಾಮಸ್ಯ ಪರಮಾಸ್ತಿಯಃ | ಅಪ್ರಕೃಷ್ಣಾ ಭವಿಷ್ಯಂತಿ ಸುಷಾಪ್ರೇ ಭರತ ಕ್ಷಯೆ” ಎಂಬುದೇ ಈ ವಾಕ್ಯದ ಮೂಲಶೆ ಕವು. ಇಲ್ಲಿ ('ರಾಮಸ್ಯ ಪರಮಾ: ಸ್ತ್ರೀಯ'8) ರಾಮನ ಉತ್ತಮಪ್ರೀಯರು” ಎಂದು ಬಹು ವಚನವನ್ನು ಹೇಳಿರುವುದರಿಂದಲೂ, ಸು ಪಾಸ್ತೆ) ನಿನ್ನ ಸೊಸೆಯರೆಂದು ಅಲ್ಲಿಯೂ ಬಹುವಚನವನ್ನು ಹೇಳಿರುವುದರಿಂದಲೂ, ಈ ಸಾಹಚಯ್ಯಗಳನ್ನು ನೋಡಿದರೆ, ರಾಮ ನಿಗೆ ಅನೇಕ ಪತ್ನಿಯರಿದ್ದಂತೆ ಊಹಿಸಬೇಕಾಗುವುದು, ಇದನ್ನನುಸರಿಸಿಯೇ ಸುಂದರ ಕಾಂಡದಲ್ಲಿ ('ಪಿತರ್ನಿದೇಶಂ ಸಮಯೇನ ಕೃತ್ವಾ ವನಾನ್ನಿ ವೃಶ್ಯರಿತವ್ರತಶ್ಯಸ್ತ್ರೀಭಿ

ಮನ್ನೇ ವಿಪುಲೇಕ್ಷಣಾಭಿ೦ರಂಸ್ಕಸ್ ವೀತಭಯಃ ಕೃತಾರ”)ನೀನು ಪಿತೃವಾ ಕ್ಯಪರಿಪಾಲನವನ್ನು ಮುಗಿಸಿಕೊಂಡು, ಕಾಡಿನಿಂದ ಹಿಂತಿರುಗಿಬಂದಮೇಲೆ, ನಿರಯನಾಗಿ ಕೃತಾರನಾಗಿ, ವಿಸ್ತಾರವಾದ ಕಣ್ಣುಳ್ಳ ಸ್ತ್ರೀಯರೆಡಗಡಿ ಕ್ರೀಡಾಸುಖಗಳನ್ನು ಅನುಭವಿಸುವೆ” ಎಂದು ಸೀತೆಯು ರಾಮನನ್ನು ಕುರಿತು ಹೇಳಿದುದಾಗಿ ಕಾಣಿಸಲ್ಪಟ್ಟಿ ದೆ, ಮತ್ತು ಯುದ್ಧ ಕಾಂಡದಲ್ಲಿ ದದೃಶಯನವನ್ನು ವರ್ಣಿಸುವಾಗ, (ಭುಜೈ; ಪರಮ ನಾರೀಣಾಮಭಿನ್ನ ಮನೇಕಧಾ) “ರಾಮನ ಕೈಯು ಉತ್ತಮಪ್ರೀಯರ ಭುಜಗ ಇಂದ ಒರೆಸಲ್ಪಟ್ಟುದು ಎಂದು ಹೇಳಲ್ಪಟ್ಟಿರುವುದು. ಮತ್ತು ಉತ್ತರಕಾಂಡದಲ್ಲಿ ಅಶ್ವಮೇಧಯಾಗಾರಂಭದಲ್ಲಿ, (ಮಾತರಶೈವ ಸಾಮೇ ಕುಮಾರಾಗಣಾನಿಚ| ಅಗ್ರತೋ ಭರತಂ ಕೃತ್ವಾ ಗಚ್ಛಂತಿ ಸಮಾಹಿತಾ:) ಎಂಬ ರಾಮನ ವಾಕ್ಯದಲ್ಲಿ ಸೀಗಡಗಳೆಂದು ಹೇಳಲ್ಪಟ್ಟಿದೆ. ರಾಮನಿಗೆ ಸೀತೆಯುಹೊರತು ಬೇರೆ ಹೆಂಡತಿಯರೆ ಬೃರೂ ಇಲ್ಲದಿದ್ದ ಪಕ್ಷದಲ್ಲಿ, ಈ ಸಂದರ್ಭದಲ್ಲಿ ನನ್ನ ಮಕ್ಕಳೆಂದೂ, ನನ್ನ ಸ್ತ್ರೀಯ ರೆಂದೂ ಹೇಳುವುದಕ್ಕೆ ಅವಕಾಶವಿರದು. ಮತ್ತು ಧಮ್ಮ ಪತ್ನಿಯಿಲ್ಲದವರಿಗೆ ಯಜ್ಞ ಮಾಡು ವುದಕ್ಕೂ ಅಧಿಕಾರವಿಲ್ಲ! ರಾಮನು ಸೀತೆಯನ್ನು ಅರಣ್ಯಕ್ಕೆ ಕಳುಹಿಸಿಬಿಟ್ಟ ಮೇಲೆಯೇ ಅಶ್ವಮೇಧವನ್ನು ಆರಂಭಿಸಿದುದರಿಂದ, ಆ ಕಾಲದಲ್ಲಿ ಬೇರೆ ಧರ ಪತ್ನಿಯರಿದ್ದೇ ಇರ ಬೇಕೆಂದು ಅನುಮಾನದಿಂದ ಸಿದ್ಧವಾಗುವುದು. ಹಾಗಿದ್ದರೆ ರಾಮನಿಗೆ ಏಕಪತ್ನಿ ವ್ರತವು ಹೇಗೆ ಸಲ್ಲುವುದೆಂಬುದಕ್ಕೆ, ಇವನಿಗಿದ್ದ ಪತ್ನಿಯರಲ್ಲಿ ಯಾರೂ ಭೋಗಿನಿಯರಲ್ಲವೆಂದೂ,