ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೮೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೩೩೧ ಸರ್ಗ, ೮ | ಅಯೋಧ್ಯಾಕಾಂಡವು. ಆಗಲೂ ಮರುಳಾಗದೆ, ರಾಮನ ಗುಣಾತಿಶಯಗಳನ್ನೇ ಪುನಃಪುನಃ ಪ್ರಸಂ ಸೆಮಾಡಲುಪಕ್ರಮಿಸಿದಳು. ('ಎಲೆ ಮಂಥರೆ ! ರಾಮನು ಧರಗಳೆಲ್ಲವನ್ನೂ ಬಲ್ಲವನು ? ಗುರುಗಳಿಂದ ಚೆನ್ನಾಗಿ ಶಿಕ್ಷಿಸಲ್ಪಟ್ಟಿರುವನು. ಆತನ ಕೃತಜ್ಞ ತೆಯ, ಆತನ ಸತ್ಯಸಂಧತೆಯೂ, ಆತನ ಶುದ್ಧ ಸ್ವಭಾವವೂ, ಲೋಕಾಭಿ ನಂದ್ಯವಾಗಿರುವುದು. ದಶರಥನಿಗೆ ಆತನೇ ಹಿರಿಯಮಗನಲ್ಲವೆ? ಆತನಿಗಲ್ಲದೆ ಈ ರಾಜ್ಯಾಭಿಷೇಕವು ಮತ್ತಾರಿಗೆ ಸಲ್ಲುವುದು ? ಭರತನೇ ಮೊದಲಾದವ ರಿಗೆ ರಾಜ್ಯದಲ್ಲಿ ಈಗ ಬಾಧ್ಯತೆಯೇನಿರುವುದು ? ಆ ರಾಮನು ತನ್ನ ತಮ್ಮಂದಿ ರನ್ನೂ , ತನ್ನ ನೃತ್ಯರನ್ನೂ, ಹೆತ್ತ ತಂದೆಯಂತೆ ಬಹುಪ್ರೀತಿಯಿಂದ ಪಾಲಿ ಸುವನು. ಆತನು ದೀಕ್ಷಾಯುಷ್ಯಂತನಾಗಿರಬೇಕೆಂಬುದೇ ನನ್ನ ಕೋರಿಕೆ! ಆಹಾ! ಇದೇನು? ನಿನಗೆ ಈ ವಿಧವಾದ ವಿಪರೀತಬುದ್ಧಿಯು ಹುಟ್ಟಿತು ? ರಾ ಮಾಭಿಷೇಕವನ್ನು ಕೇಳಿ ಸಂಕಟಪಡುವುದುಂಟಿ? ರಾಮನು ನೂರಾರುವರ್ಷ ಗಳವರೆಗೆ ರಾಜ್ಯವನ್ನು ಪಾಲಿಸಿ, ತಾನಾಗಿಯೇ ವಿಶ್ರಾಂತಿಯನ್ನು ಹೊಂದ ಬೇಕೆಂದು ಅಪೇಕ್ಷಿಸಿದಾಗ, ನಮ್ಮ ಭರತನು ಕುಲಕ್ರಮಾಗತವಾದ ಆ ರಾಜ್ಯವನ್ನನುಭವಿಸಲಿ : ಎಲೆ ಮಂಥರೆ ! ಈಗ ರಾಮಾ ಭಿಷೇಕವೆಂಬ ಅಭ್ಯು ದಯಕಾಲವು ಸಸಿ ಹಿತವಾಗಿರುವುದು. ಮುಂದೆ ಭರತನಿಗೆ ಇವರಾಜಾ ಭಿಷೇಕವೆಂಬ ಕಲ್ಯಾಣಕಾರವೂ ನಡೆಸಲ್ಪಡಬೇಕಾಗಿರುವುದು. ಹೀಗೆ ಮೇ ಲೆಮೇಲೆ ಒಂದರಮೇಲೊಂದು ಅಭ್ಯುದಯಪರಂಪರೆಯು ಬಂದೊದಗಿರು ವಾಗಲೂ ನೀನು ಹೀಗೆ ದುಃಖಿಸುವುದುಂಟಿ? ನನಗೆ ಭರತನಲ್ಲಿರುವುದಕ್ಕಿಂ ತಲೂ ಹೆಚ್ಚಾಗಿ ರಾಮನಲ್ಲಿ ಪ್ರೀತಿಯುಂಟು. ರಾಮನೂ ತನ್ನ ಹೆತ್ತ ತಾಯಿ ದರೆ “ಪರಮಾಯ:” ಎಂಬಲ್ಲಿ ಪರಿಚಾರಿಕೆಯರೇ ಮೊದಲಾದವರೆಂದರನ. 'ಪರ ಮನಾರೀಣಾಂ” ಎಂಬಲ್ಲಿ, ಲಕ್ಷ್ಮಿದೇವಿ, ಭೂದೇವಿ, ಸೀತೆ, ಈ ಮೂವರ ಭುಜಗಳಿಂದ ಒರೆಸಲ್ಪಟ್ಟುದೆಂದು ಭಾವವು, ಭಿಶ್ಚ ಮನೈ” ಎಂಬ ಸುಂದಕಾಂಡದೊಳಗಿನ ಸೀತಾವಾಕ್ಯದಲ್ಲಿಯೂ ಕೂಡ, ರಾಮನಿಯೋಗದು:ಖದಿಂದಲೇ ತಾನು ಒಂದುವೇಳೆ ನಾಶಹೊಂದಿದಪಕ್ಷದಲ್ಲಿ, ಆಮೇಲೆ ರಾಮನು ಬೇರೆ ಅನೇಕಭಾಗೈಯರನ್ನು ವರಿಸಿ ಸುಖಿಸಬಹುದೆಂದೂಹಿಸಿ, ದುಃಖದಿಂದ ಹೇಳಿದುದಾಗಿಯೂ ಗ್ರಹಿಸಬೇಕು. ಆದುದ ರಿಂದ ಸಂಪ್ರದಾಯಸಿದ್ದಾಂತಾನುಸಾರವಾಗಿ ವಿವರಿಸಿದರೆ, ರಾಮನಿಗೆ ಸೀತೆಯು ಹೊರತು ಬೇರೆ ಭಾರೆಯರಿಲ್ಲವೆಂದೇ ಸಿದ್ಧವಾಗುವುದು.


... "........

...........

- - -

...........