ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೩೨ ಶ್ರೀಮದ್ರಾಮಾಯಣವು (ಸರ್ಗ ೮. ಯಾದ ಕೌಸಲೈಗಿಂತಲೂ ನನ್ನ ಸ್ನೇ ಹೆಚ್ಚಾಗಿ ಪ್ರೀತಿಸುತ್ತಿರುವನೆಂಬ ನಂಬಿ ಕೆಯೂ ಆತನಲ್ಲಿ ನನಗೆ ಸಂಪೂರವಾಗಿರುವುದು.ಆ ರಾಮನು ತನ್ನ ತಮ್ಮಂ ದಿರೆಲ್ಲರನ್ನೂ ತನ್ನಂತೆಯೇಭಾವಿಸಿರುವನೇಹೊರತು,ಆವರಲ್ಲಿ ಸ್ವಲ್ಪವಾದರೂ ಭೇದಬುದ್ಧಿಯನ್ನು ಎಣಿಸತಕ್ಕವನಲ್ಲ. ಆದುದರಿಂದ ಈಗ ರಾಮನು ಅನುಭವಿ ಸತಕ್ಕ ರಾಜ್ಯವನ್ನು, ಭರತನು ಅನುಭವಿಸುವಂತೆಯೇ ಎಣಿಸಬೇಕಲ್ಲವೆ!”ಎಂ ದಳು. ಈ ಮಾತನ್ನು ಕೇಳಿ ಮಂಥರೆಗೆ ಮತ್ತಷ್ಟು ದುಃಖವು ಹೆಚ್ಚಿ ತು. ಆ ದುಃಖವನ್ನು ತಡೆಯಲಾರದೆ, ಬಿಸಿಬಿಸಿಯಾಗಿ ನಿಟ್ಟುಸಿರನ್ನು ಬಿಡುತ್ತಾ ಪುನಃ ಕೈಕೇಯಿಯನ್ನು ಕುರಿತು ಆಯೋ!ಇನ್ನೂ ನಿನಗೆ ವಿವೇಕವು ಹುಟ್ಟಿ ಲಿಲ್ಲ ? ದೊಡ್ಡ ಅನರಗಳ ಇಷ್ಟಾರಗಳನ್ನಾಗಿ ತಿಳಿದಿರುವೆಯಲ್ಲಾ ! ನಿನ್ನ ಮೌಡ್ಯವನ್ನೇ ನೆಂದು ಹೇಳಲಿ! ಭರತನು ರಾಜ್ಯಭ್ರಷ್ಟನಾಗಿ ಕಾಡು ಪಾಲಾಗುವ ವ್ಯಸನವೊಂದು;ನೀನು ರಾಜಭೋಗಗಳೆಲ್ಲವನ್ನೂ ಬಿಟ್ಟು ಸವ ತಿಗೆ ಊಳಿಗವನ್ನು ಮಾಡಬೇಕಾದ ಮಹಾವಿಪತ್ತೊಂದು; ಇವೆಲ್ಲವೂ ಅಪಾ ರವಾದ ಸಮುದ್ರದಂತೆ ನಿನ್ನನ್ನು ಇದಿರುನೋಡುತ್ತಿರುವುವು. ' ಅಂತಹ ದುಃಖಸಮುದ್ರದಲ್ಲಿ ನೀನು ಮುಳುಗಿದಮೇಲೆ, ಎದ್ದು ಬರುವ ಬಗೆ ಹೇಗೆ ? ನೂರಾರುವರ್ಷಗಳ ಮೇಲಾದರೂ ಭರತಸಿಗೆ ರಾಜ್ಯವುಬರುವುದೆಂಬ ಆಶೋ ತರವು ನಿನಗಿರುವಂತಿದೆ. ಈ ಹುಚ್ಚು ತನವನ್ನು ಬಿಡು! ರಾಮನು ಈಗ ರಾಜ ನಾಗಿಬಿಟ್ಟರೆ, ಆರಾಜ್ಯವು ಅವನ ಹೊಟ್ಟಿಯಲ್ಲಿ ಹುಟ್ಟಿದ ಮಕ್ಕಳಿಗಲ್ಲದೆ ಭರ ತನಿಗೆ ಸಿಕ್ಕುವುದೆಂದರೇನು ? ಭರತನ ಮಕ್ಕಳಿಗೆತಾನೇ ಆ ರಾಜ್ಯವು ಸೇರುವ ಬಗೆ ಹೇಗೆ? ಅದರಿಂದ ರಾಜವಂಶದಲ್ಲಿ ಭರತನ ಹೆಸರೇ ಇರದು! ಭರತನು ಇಲ್ಲಿಂದ ಮುಂದೆ ರಾಜವಂಶದಿಂದ ಬಹಿಷತನಾದಂತೆಯೇ ತಿಳಿಯಬೇಕೇ ಹೊರತು ಮತ್ತೆ ಬೇರೆಯಲ್ಲ. ಒಬ್ಬ ರಾಜನಿಗೆ ಅನೇಕ ಪುತ್ರರು ಹುಟ್ಟಿ ದ್ದರೂ, ಆ ಮಕ್ಕಳೆಲ್ಲರಿಗೂ ರಾಜ್ಯದಲ್ಲಿ ಬಾಧ್ಯತೆಯಿರುವುದಿಲ್ಲ. ಅಥವಾ ಒಂದುವೇಳೆ ರಾಜ್ಯವನ್ನು ಎಲ್ಲರಿಗೂ ಹಂಚಿಕೊಟ್ಟರೆ, ಅದರಿಂದ ಅನೇಕವಿ ಧವಾದ ಅನರ್ಥಗಳುಂಟಾಗುವುವು. ಆದುದರಿಂದ ರಾಜರು ತಮಗೆ ಅನೇಕಪು ತ್ರರಿದ್ದರೂ ತಮ್ಮ ಹಿರಿಯಮಗನಿಗೆ ರಾಜ್ಯವನ್ನು ಒಪ್ಪಿಸುವರೇಹೊರತು ಇತರರು ಎಷ್ಮೆ ಗುಣವಂತರಾಗಿದ್ದರೂ, ಅವರನ್ನು ರಾಜ್ಯಕ್ಕೆ ಅಧಿಕಾರಿಗಳ