ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೭೪ ಶ್ರೀಮದ್ರಾಮಾಯಣವು [ಸರ್ಗ. ೮. ಕೆಡಿಸಿದಂತಾಯಿತು! ಅದೂ ಹೋಗಲಿ! ಶತ್ರುಘ್ನು ನನ್ನಾ ದರೂ ಇಲ್ಲಿರಿಸಿ ದೆಯಾ? ಅದೂ ಇಲ್ಲ! ಅವನಿಗೆ ಭರತನಲ್ಲಿ ನಿಜವಾದಪ್ರೇಮವುಂಟು. ಲಕ್ಷ ಣನು ರಾಮನನ್ನಾಶ್ರಯಿಸಿರುವಂತೆ, ಶತ್ರುಘ್ನುನು ಭರತನನ್ನೇ ಅನುಸರಿಸಿ ಹೊರಟುಹೋದನು.ಆ ಶತ್ರುಘ್ನು ನಾದರೂ ಇಲ್ಲಿಯೇ ಇದ್ದಿದ್ದರೆ ದಶರಥನ ಪ್ರೇಮಕ್ಕೆ ಸ್ವಲ್ಪ ಮಟ್ಟಿಗಾದರೂ ಭಾಗಿಯಾಗಿ, ಸಮಯಬಂದಾಗ ಭರತನಿಗೂ ಸಹಾಯಮಾಡಬಹುದಾಗಿತ್ತು. ಅದೂ ಇಲ್ಲದೆ ಹೋಯಿತು. ಕಾಡಿನಲ್ಲಿ ಕಟ್ಟಿಗೆಗಳನ್ನು ಕಡಿದು ಜೀವಿಸುವವನೊಬ್ಬನು, ಒಂದು ಮರವ ನ್ನು ಕಡಿಯುವುದಕ್ಕಾಗಿ ಅಲ್ಲಿಗೆ ಬಂದಾಗ, ಸುತ್ತಲಿದ್ದ ಮುಳ್ಳುಗಿಡಗಳೆಲ್ಲ ವೂ ಆ ಮರವನ್ನು ಸುತ್ತಿಕೊಂಡು, ಅದಕ್ಕೆ ಆ ಭಯವನ್ನು ತಪ್ಪಿಸಿತೆಂಬ ಕಥೆಯನ್ನಾದರೂ ಕೇಳಿ ತಿಳಿಯೆಯಾ? ಅದರಂತೆಯೇ ರಾಮಲಕ್ಷ್ಮಣರಿಬ್ಬ ರೂ ಒಬ್ಬರಿಗೊಬ್ಬರು ಬೆಂಬಲವಾಗಿ ಇತರರಿಗೆ ಸ್ವಲ್ಪವೂ ಅವಕಾಶಕೊಡ ದಂತಿರುವರು. ಅಶ್ವಿನಿದೇವತೆಗಳಿಗಿರುವಂತೆ ಅವರಿಬ್ಬರಿಗೂ ಇರುವ ಪರಸ್ಪರ ಪ್ರೇಮವು ಲೋಕಪ್ರಸಿದ್ಧವಾಗಿರುವುದು. ರಾಮನು ಲಕ್ಷ್ಮಣನಿಗೆ ಸ್ವಲ್ಪ ಮಾತ್ರವೂ ಕೇಡನ್ನು ಕೋರುವವನಲ್ಲ. ರಾಮನಿಂದ ಭರತನಿಗೆ ಕೇಡುಂಟಾ ಗುವುದೆಂಬುದರಲ್ಲಿ ಸಂದೇಹವೇ ಇಲ್ಲ! ಆದುದೇನೋ ಆಯಿತು! ಈಗಲೂ ನಾನೊಂದುಪಾಯವನ್ನು ಹೇಳುವೆನು ಕೇಳು, ನಿನ್ನ ಮಗನನ್ನು ಇದೇಶದಲ್ಲಿ ಯೇ ಇರಿಸಬೇಡ! ಆತನನ್ನು ಈಗಲೇ ಕಾಡಿಗೆ ಕಳುಹಿಸಿಬಿಡುಮೇಲು ! ಇಲ್ಲದಿದ್ದರೆ ಆತನಿಗೆ ಉಳಿಗಾಲವಿಲ್ಲ. ಈಗಲೂ ನಿನ್ನ ಮಗನು ಇನ್ನೂ ಕೆಲವು ಕಾಲಬದುಕಿರಬೇಕೆಂಬ ಆಸೆಯು ನಿನಗಿದರೆ, ಮಿಂಚಿಹೋದ ಕೆಲಸಕ್ಕೆ ಇದೇ ಮೇಲಾದ ಉಪಾಯವೆಂದು ನನಗೆ ತೋರಿರುವುದು. ಇದು ನಿನಗೂ ಶ್ರೇಯಸ್ಕರವು ! ಆತನನ್ನು ಇಲ್ಲಿಗೆ ಪುನಃ ಬರಗೊಳಿಸದೆ, ಅಲ್ಲಿಂದ ಹಾಗೆಯೇ ಕಾಡಿಗೆ ಕಳುಹಿಸಿಬಿಡು! ಹಾಗೆ ಅವನನ್ನು ಕಾಡಿಗೆ ಕಳುಹಿಸುವುದು ನಿನಗೆ ಇಷ್ಟವಿಲ್ಲದ ಪಕ್ಷದಲ್ಲಿ, ಅವನಿಗೆ ರಾಜ್ಯವನ್ನಾದರೂ ಕೊಡಿಸುವ ಉಪಾಯ ವನ್ನು ಮಾಡು! ಭರತನು ತಂದೆಯ ಅನುಮತಿಯಿಂದ ರಾಜ್ಯವನ್ನು ಪಡೆದಾ ಗಮಾತ್ರವೇ, ನಿನಗೂ, ನಿನ್ನ ಬಂಧುವರ್ಗಕ್ಕೂ ಶ್ರೇಯಸ್ಸುಂಟು. ಮುಖ್ಯ ವಾಗಿ ಭರತನನ್ನು ರಾಮನ ಅಧೀನದಲ್ಲಿಮಾತ್ರ ಇರಿಸಬೇಡ. ಯಾವಾ