ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ: ೯.] ಅಯೋಧ್ಯಾಕಾಂಡವು. 148 ಗಲೂ ಸುಖದಲ್ಲಿಯೇ ಬಳೆದು, ಕಷ್ಟವನ್ನೇ ಕಂಡರಿಯದ ಭರತ ನನ್ನು ಮತ್ತೊಬ್ಬರ ಅಧೀನದಲ್ಲಿಟ್ಟರೆ ಅವನಿಗೆ ಸುಖವೆಲ್ಲಿಯದು ? ಸವತಿಯ ಮಕ್ಕಳಲ್ಲಿ ಯಾರಿಗೂ ಪ್ರೇಮವು ಹುಟ್ಟದು. ಆದುದರಿಂದ ರಾಮನಿಗೆ ನಿನ್ನ ಮಗನು ಸಹಜಶತ್ರುವೆಂದೇ ತಿಳಿ! ರಾಜ್ಯಸಂಪತ್ತನ್ನು ಅನುಭವಿಸುತ್ತಿರುವ ರಾಮನ ವಶದಲ್ಲಿ ಅಸಹಾಯನಾದ ಭರತನು ಹೇಗೆ ಜೀವಿಸುವನು?ಕಾಡಿ' ನಲ್ಲಿ ಸಿಂಹದಿಂದೋಡಿಸಲ್ಪಟ್ಟ ಆನೆಯ ಮರಿಯಂತೆ ನಿನ್ನ ಮಗನು ರಾಮನ ಕೈಕೆಳಗೆ ಸಿಕ್ಕಿ ನರಳಬೇಕಾಗುವುದು. ಅವನನ್ನು ಕಾಪಾಡುವ ಉಪಾಯ ವನ್ನು ಯೋಚಿಸು. ಇದಲ್ಲದೆ ಭೂತ್ವದಲ್ಲಿ ನೀನು ನಿನ್ನ ಸೌಭಾಗ್ಯದ ಮದ ಹಿಂದ ನಿನ್ನ ಸವತಿಯಾದ ಕೌಸಲೈಯನ್ನು ಅನೇಕವೇಳೆಗಳಲ್ಲಿ ತಿರಸ್ಕರಿಸಿ ರುವೆ! ಈಗ ಅವಳು ಅದನ್ನೇ ಮನಸ್ಸಿನಲ್ಲಿಟ್ಟುಕೊಂಡಿದ್ದು, ತನ್ನ ಮಗನಿಗೆ ಪಟ್ಟವಾದಮೇಲೆ ಹಗೆ ತೀರಿಸಿಕೊಳ್ಳದೆ ಬಿಡಳು! ಇದರಲ್ಲಿ ಸಂದೇಹವಿಲ್ಲ. ಅವಳು ನಿನ್ನ ಕೈಯಿಂದ ಊಳಿಗವನ್ನೇ ಮಾಡಿಸಿಕೊಳ್ಳುವಳು. ವಿಸ್ತಾರ ವಾದ ಸಮುದ್ರಗಳಿಂದಲೂ, ಪ್ರತಗಳಿಂದಲೂ, ಪಟ್ಟಣಗಳಿಂದಲೂ, ಸಮೃದ್ಧವಾದ ಈ ಭೂಮಿಗೆ, ರಾಮನು ರಾಜನಾದೊಡನೆಯೇ, ನಿನಗೂ ನಿನ್ನ ಮಗನಿಗೂ ಅನೇಕ ವಿಧದಲ್ಲಿ ಹಾನಿಯೂ, ತಿರಸ್ಕಾರವೂ, ಉಂಟಾಗುವ ದರಲ್ಲಿ ಸಂದೇಹವಿಲ್ಲ. ರಾಮನು ರಾಜನಾದರೆ, ಭರತನ ಹಣೆಯ ಬರಹವು ಅಲ್ಲಿಗೆ ತೀರಿತು! ಆದುದರಿಂದ ಎಲೆ ಕೈಕೇಯಿ ! ನೀನೇ ಚೆನ್ನಾಗಿ ಆಲೋಚಿಸಿ ನೋಡು. ಭರತನಿಗೆ ರಾಜ್ಯ ಪ್ರಾಪ್ತಿಯಾಗುವುದಕ್ಕೂ, ಅವನ ಆ ಜನ್ಮ ಶತ್ರು ವಾದ ರಾಮನನ್ನು ದೇಶದಿಂದ ಹೊರಡಿಸುವುದಕ್ಕೂ, ತಕ್ಕ ಉಪಾಯವನ್ನು ಈಗಲೇ ಯೋಚಿಸು” ಎಂದಳು. ಇಲ್ಲಿಗೆ ಎಂಟನೆಯ ಸರ್ಗವು. -w+ಕೈಕೇಯಿಯು ಮಂಧರೆಯ ದುರ್ಬೋಧನೆಗೆ ಒಳಗಾದುದು+w ಮಂಧರೆಯ ಮಾತನ್ನು ಕೇಳಿ ಕೈಕೇಯಿಗೆ ಮನಸ್ಸಿನಲ್ಲಿ ಸ್ವಲ್ಪ ಸ್ವಲ್ಪವಾಗಿ ಕೋಪವು ಅಂಕುರಿಸುತ್ತ ಬಂದಿತು. ಆಃ ನಾನು ನನ್ನ ಸವತಿಗೆ ದಾಸಿಯಾಗಿರಬೇಕಾರ ಸಂಭವವು ಬಂದರೂ ಬರಬಹುದು” ಎಂದು ಯೋ ಚಿಸಿ, ಕೊನೆಕೊನೆಗೆ ಆ ಕೋಪವೇ ಹೆಚ್ಚು ತಿರಲು, ಕೆಂಪಾದ ಮುಖವುಳ್ಳ