184
ಶ್ರೀಮದ್ರಾಮಾಯಣವು
(ಸರ್ಗ. ೯. ವಳಾಗಿ, ತಡೆಯಲಾರದ ದುಃಖದಿಂದ, ಉದ್ದವಾದ ನಿಟ್ಟುಸಿರನ್ನು ಬಿಟ್ಟು, ಮಂಥರೆಯನ್ನು ಕುರಿತು (ಎಲೆ ಮಂಥರೆ! ನೀನು ಹೇಳಿದುದು ನಿಜ! ಈಗಲೇ ರಾಮನನ್ನು ಕಾಡಿಗೆ ಕಳುಹಿಸುವ ಪ್ರಯತ್ನ ವನ್ನು ಮಾಡಬೇಕಾದುದೇ ಸಹ ಜವು. ಹೇಗಾದರೂ ಆ ಕೆಲಸವನ್ನು ಮಾಡಿಬಿಡುವೆನು. ಭರತಸಿಗೆ ಈಗಲೇ ಪಟ್ಟಾಭಿಷೇಕವನ್ನೂ ಮಾಡಿಸುವೆನು. ಎಲೆ ಮಂಥರೆ ! ಈಗ ಅದಕ್ಕೆ ಏನು ಪಾಯವನ್ನು ಮಾಡಬಹುದು ? ರಾಮನಿಗೆ ರಾಜ್ಯವನ್ನು ತಪ್ಪಿಸಿ, ಭರತನಿಗೆ ಅಭಿಷೇಕ ಮಾಡಿಸುವುದಕ್ಕೆ ತಕ್ಕ ಯುಕ್ತಿಯೇನಾದರೂ ನಿನಗೆ ತಿಳಿದಿದ್ದರೆ ಹೇಳು” ಎಂದಳು. ಇದನ್ನು ಕೇಳಿ ಪಾಪಬುದ್ದಿಯುಳ್ಳ ಆ ಮಂಥರೆಯು, ರಾ ಮನ ಅಭಿಷೇಕವನ್ನು ತಪ್ಪಿಸುವುದಕ್ಕೆ ಉಪಾಯವಾವುದೆಂದು ಯೋಚಿಸಿ, “ಭಲೆ! ಅಮ್ಮ ಕೈಕೇಯಿ! ಭರತನಿಗೆ ರಾಜ್ಯವನ್ನು ಕೊಡಿಸುವುದಕ್ಕೆ ಒಂದು ಪಾಯವುಂಟು.ಅದನ್ನು ಈಗಲೇ ಹೇಳುವೆನು ಕೆಳು! ಇದೇನು! ನಿನಗೆ ಜ್ಞಪ್ತಿ
ಲ್ಲವೆ? ಅಥವಾ ಜ್ಞಪ್ತಿಯಿದ್ದೂ ನನ್ನ ಬಾಯಿಯಿಂದಲೇ ಕೇಳಬೇಕೆಂದು ಮರೆಸಿಟ್ಟಿರುವೆಯೋ? ಹಾಗೆ ನನ್ನ ಬಾಯಿಂದಲೇ ಕೇಳಬೇಕೆಂಬ ಆಸೆಯು ನಿನಗಿದ್ದ ಪಕ್ಷದಲ್ಲಿ, ನಾನೇ ಹೇಳುವೆನು ಕೇಳು: ಆಮೇಲೆ ನಿನ್ನ ಆಲೋಚನೆಯಿ Wಂತೆ ನಡೆಸು”ಎಂದಳು. ಇದನ್ನು ಕೇಳಿ ಕೈಕೇಯಿಯು, ಆದರದಿಂದ ಸ್ವಲ್ಪ ಮೇಲಕ್ಕೆ ಎದ್ದು, ಎಲೆ ಮಂಥರೆ! ರಾಮನಿಗೆ ರಾಜ್ಯವನ್ನು ತಪ್ಪಿಸಿ ಭರತನಿಗೆ ಕೊಡಿಸುವುದಕ್ಕೆ ತಕ್ಕ ಉಪಾಯವೇನು ?” ಎಂದಳು. ಈ ಮಾತನ್ನು ಕೇಳಿ ಪಾಪಬುದ್ಧಿಯುಳ್ಳ ಆ ಗೂನಿಯು, ರಾಮನ ಶ್ರೇಯಸ್ಸಿಗೆ ವಿಫುತವನ್ನುಂ ಟುಮಾಡಬೇಕೆಂಬುದನ್ನೇ ದೃಢಸಂಕಲ್ಪವಾಗಿಟ್ಟುಕೊಂಡು, ಕೈಕೇಯಿ ಯನ್ನು ಕುರಿತು (ಎಲೆ ದೇವಿ ! ಹಿಂದೆ ದೇವಾಸುರಯುದ್ಧದಲ್ಲಿ ನಿನ್ನ ಪತಿ ಯಾದ ದಶರಥನು,ಇಂದ್ರನ ಸಹಾಯಕ್ಕಾಗಿ ಹೊರಟಾಗ, ಅನೇಕರಾಜರೊ ಡನೆ ನಿನ್ನನ್ನೂ ಸಂಗಡ ಕರೆದುಕೊಂಡು ಹೋಗಲಿಲ್ಲವೆ ? ಹೀಗೆ ಸಪರಿವಾರ ನಾಗಿ ದಕ್ಷಿಣದಿಕ್ಕಿಗೆ ಹೊರಟು, ದಂಡಕಾರಣ್ಯವನ್ನು ಸೇರಿ, ಅಲ್ಲಿ ತಿಮಿಧ್ವಜನು ಆಳುತಿದ್ದ ವೈಜಯಂತವೆಂಬ ಪಟ್ಟಣವನ್ನು ಸೇರಲಿಲ್ಲವೆ ಆ ತಿಮಿಧ್ವಜನೆಂಬ ವನು ಅನೇಕಮಾಯೆಗಳನ್ನು ತಿಳಿದ ದೊಡ್ಡ ರಾಕ್ಷಸನು ! ಆತನಿಗೆ ಶಂಬ ರಾಸುರನೆಂದೂ ಹೆಸರು. ಅವನು ಅವೇಕಾವರ್ತಿ ದೇವತೆಗಳೊಡನೆ ಯುದ್ದ
ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೮೯
Jump to navigation
Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.
