ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೯.] ಅಯೋಧ್ಯಾಕಾಂಡವು. ೩೩೩ ಮಾಡಿ, ಅವರೆಲ್ಲರನ್ನೂ ಜಯಿಸಿ, ಕೊನೆಗೆ ಇಂದ್ರನೊಡನೆಯೂ ಯುದ್ಧಕ್ಕೆ ನಿಂತನು, ಈ ದೊಡ್ಡ ಯುದ್ಧದಲ್ಲಿ, ಬಾಣಗಳಿಂದ ಹೊಡೆಯಲ್ಪಟ್ಟವರೂ, ಖಡ್ಡಾದ್ಯಾಯುಧಗಳಿಂದ ಕತ್ತರಿಸಲ್ಪಟ್ಟವರೂ, ರಾತ್ರಿಯಲ್ಲಿ ತಮ್ಮ ತಮ್ಮ ಬಿಡಾರಗಳೊಳಗೆ ಮಲಗಿರುವಾಗ, ಆ ರಾಕ್ಷಸನ ಕಡೆಯವರು ಬಂದು, ಅಲ್ಲಿ ಯೂ ಅವರನ್ನು ಕೊಲ್ಲುತ್ತಿದ್ದರು. ಈ ಸಂದರದಲ್ಲಿ ನಿನ್ನ ಪತಿಯಾದ ದಶರ ಧನು, ಅವರೊಡನೆ ಯುದ್ಧಕ್ಕೆ ನಿಂತನು. ಈ ಯುದ್ಧ ಕಾಲದಲ್ಲಿ ರಾಕ್ಷಸರೆಲ್ಲ ರೂ ಒಟ್ಟುಗೂಡಿ ಆತನ ಮೈಯೆಲ್ಲವೂ ಜರ್ಝರಿತವಾಗುವಂತೆ, ನಾನಾವಿಧ ಶಸ್ತ್ರಾಸ್ತ್ರಗಳಿಂದ ಗಾಯಪಡಿಸಿದರು. ಕೊನೆಗೆ ದಶರಥನು ಮೂರೆ ಬಿದ್ದು ರಥದಮೇಲೆಯೇ ಮಲಗಿದನು, ಆಗ ನೀನೇ ಆತನಿಗೆ ಸಾರಥ್ಯವನ್ನು ಮಾಡುತ್ತಿದ್ದವಳಾದುದರಿಂದ, ಮೂಲ್ಕಿತನಾಗಿದ್ದ ಆ ದಶರಥನನ್ನು ಯುದ್ಧ ಭೂಮಿಯಿಂದ ತಪ್ಪಿಸಿ ಕರೆದುಕೊಂಡುಹೋಗಿ, ಆತನಿಗೆ ಶೈತ್ಯೋಪಚಾರಗ ಳನ್ನು ಮಾಡುತಿದ್ದೆ! ಅಲ್ಲಿಗೂ ರಾಕ್ಷಸರು ಬೆನ್ನಟ್ಟಿ ಬಂದು, ಆತನಮೇ ಲೆ ಬಾಣಗಳನ್ನು ಪ್ರಯೋಗಿಸುವುದಕ್ಕೆ ತೊಡಗಿದರು. ಅದನ್ನೂ ನೀನು ತಪ್ಪಿಸಿ, ರಥವನ್ನು ಬೇರೊಂದುಕಡೆಗೆ ತಿರುಗಿಸಿ, ನಿನ್ನ ಪತಿಯ ಪ್ರಾಣರಕ್ಷಣೆಯನ್ನು ಮಾಡಿದೆ! (ಎಲೆ ಮಂಗಳಾಂಗಿ : ಹೀಗೆ ನೀನು ಎರ ಡಾವರ್ತಿಯೂ ಆತನಿಗೆ ಸಂಭವಿಸಿದ ಅಪಮೃತ್ಯುವನ್ನು ತಪ್ಪಿಸಿದುದಕ್ಕಾಗಿ, ಅವನು ನಿನ್ನಲ್ಲಿ ಪ್ರಸನ್ನನಾಗಿ, ಎರಡುವರಗಳನ್ನು ಕೇಳಿಕೊಳ್ಳುವಹಾಗೆ ನಿನಗೆ ಹೇಳಿದನು. ಆಗ ನೀನು ಆ ವರಗಳನ್ನು ಅವಶ್ಯವಿದ್ದಾಗ ಕೇಳಿ ತೆಗೆದು ಕೊಳ್ಳುವುದಾಗಿ ಹೇಳಿರುವೆ ! ಅದಕ್ಕವನೂ ಹಾಗೆಯೇ ಆಗಲೆಂದು ಒಪ್ಪಿ ಕೊಂಡಿರುವನು. ಈ ವಿಷಯವೆಲ್ಲವನ್ನೂ ನೀನೇ ನನಗೆ ಹಿಂದೆ ಯಾವಾಗ ಲೋ ಒಮ್ಮೆ ಹೇಳಿರುವೆ. ನಾನುಬೇರೆ ಇದನ್ನು ಕಣ್ಣಾರೆ ನೋಡಿದವಳಲ್ಲ. ನಿನ್ನಲ್ಲಿ ನನಗಿರುವ ಪ್ರೇಮಾತಿಶಯದಿಂದ ಈಗಲೂ ಮರೆಯದೆ ಸ್ಮರಣೆಯಲ್ಲಿ ಟ್ಟುಕೊಂಡಿರುವೆನು. ಈಗ ದಶರಥನು ರಾಮಾಭಿಷೇಕಕ್ಕಾಗಿ ಬೇಕಾದ ಸಾಹಗಳೆಲ್ಲವನ್ನೂ ಮಾಡಿಕೊಂಡಿರುವನು. ಆ ಪ್ರಯತ್ನವನ್ನು ನೀನು ಇದರಿಂದ ತಪ್ಪಿಸಬಹುದು. ಈಗ ಆ ಎರಡುವರಗಳನ್ನೂ ಯಾಚಿಸು! ಅವುಗ ಇಲ್ಲಿ ಒಂದಕ್ಕೆ ಭರತನಿಗೆ ಅಭಿಷೇಕಮಾಡಬೇಕೆಂದೂ,ಮತ್ತೊಂದಕ್ಕೆ ರಾಮ 22