ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, .] ಅಯೋಧ್ಯಾಕಾಂಡವು, att ಗಳನ್ನೂ ಕೊಡುವುದಕ್ಕೆ ಬರುವನು. ಅದರಲ್ಲಿ ನೀನು ಸ್ವಲ್ಪವೂ ಆಸೆಯನ್ನು ತೋರಿಸಕೂಡದು. ಹಿಂದೆ ನಡೆದ ದೇವಾಸುರಯುದ್ಧದಲ್ಲಿ,ಆತನು ನಿನಗೆ ಕೊ ಟಿರುವ ವರಗಳನ್ನೇ ಈಗ ಕೊಡಬೇಕೆಂದು ಕೇಳು, ಈ ಅವಕಾಶವನ್ನು ತಪ್ಪಿ ಸಿಕೊಳ್ಳಬೇಡ! ನಿನ್ನ ಕೋರಿಕೆಯು ಕೈಗೂಡುವಂತೆ ಪ್ರಯತ್ನಿ ಸು! ದಶರಥನು ಯಾವಾಗ ತಾನಾಗಿ ನಿನ್ನ ಸಮೀಪಕ್ಕೆ ಬಂದು, ತನ್ನ ಕೈಯಿಂದಲೇ ನಿನ್ನ ನ್ನು ಎತ್ತಿ ಕುಳ್ಳಿರಿಸಿ, ಆ ವರಗಳನ್ನು ಕೊಡುವುದಾಗಿ ಸತ್ಯಮಾಡಿಕೊಡುವ ನೋ, ಆಗಲೇ ನೀನು ಏಳಬೇಕು! ಅವನ ಬಾಯಿಂದಲೇ ಅವನನ್ನು ಕಟ್ಟಿಹಾ ಕಿ,ಆಮೇಲೆ ಆ ಎರಡುವರಗಳಲ್ಲಿ ಒಂದಕ್ಕೆ ರಾಮನನ್ನು ಹದಿನಾಲ್ಕುವರಗಳ ವರೆಗೆ ಕಾಡಿಗೆ ಕಳುಹಿಸಬೇಕೆಂದೂ, ಮತ್ತೊಂದಕ್ಕೆ ಭರತನಿಗೆ ರಾಜ್ಯವನ್ನು ಕೊಡಿಸಬೇಕೆಂದೂ ಕೇಳು! ಹೀಗೆ ರಾಮನನ್ನು ಹದಿನಾಲ್ಕು ವರ್ಷಗಳವರೆಗೆ ಕಾಡಿನಲ್ಲಿರುವಹಾಗೆ ಮಾಡಿಬಿಟ್ಟರೆ, ಅಷ್ಟರೊಳಗಾಗಿ ಭರತನಿಗೆ ರಾಜ್ಯವು ಸ್ಥಿ ಪಟ್ಟು ಹೋಗುವುದು. ಪ್ರಜೆಗಳಿಗೂ ಆತನಲ್ಲಿ ಪೂರ್ಣವಾದ ಪ್ರೇಮವುಂಟಾ ಗಿಬಿಡುವುದು, ಸೈನ್ಯಗಳೆಲ್ಲವೂ ಆತನಿಗೆ ವಶವಾಗುವುವು. ಆಮೇಲೆ ರಾಮ ನು ಹಿಂತಿರುಗಿಬಂದರೂ ಆತನಿಗೆ ರಾಜ್ಯವು ಸಿಕ್ಕದು. ಮುಂದಕ್ಕೂ ಭರತ ನೇ ರಾಜಾಧಿರಾಜನಾಗಿ ರಾಜ್ಯವನ್ನಾಳುತ್ತಿರುವನು. ರಾಮನು ಪುನಃ ಹಿಂತಿ ರುಗಿ ಕಾಡಿಗೇ ಹೋಗಬೇಕಾಗುವುದು. ಎಲೆ ಕೈಕೇಯಿ ! ಮುಖ್ಯವಾಗಿ ಈ ಒಂದಂಶವನ್ನು ಮಾತ್ರ ಮನಸ್ಸಿನಲ್ಲಿ ಚೆನ್ನಾಗಿ ನೆನಪಿಟ್ಟುಕೊಂಡಿರು! ಭರತನಿಗೆ ಪಟ್ಟವನ್ನು ಕಟ್ಟಿಸುವುದರಿಂದಮಾತ್ರವೇ ಪ್ರಯೋಜನವಿಲ್ಲ. ಮೊದಲು ರಾಮನನ್ನು ರಾಜ್ಯಭಷ್ಯನನ್ನಾಗಿ ಮಾಡಿಸಿದ ಕೊರತು, ಭರ ತನಿಗೆ ರಾಜ್ಯವು ಸ್ಥಿರಪಡದು. ಅವನ ಕೋರಿಕೆಗಳೆಲ್ಲವೂ ವಿಫಲವಾರು ವುವು. ರಾಮನನ್ನು ಮೊದಲು ಕಾಡಿಗೆ ಓಡಿಸಿಬಿಟ್ಟರೆ, ಆಮೇಲೆ ಆತನ ಹೆಸರೇ ಇರದು ! * ಆ ರಾಮನು ಇನ್ನು ಮುಂದೆ ರಾಮ

  • ಇಲ್ಲಿರಾಮೋ ರಾವೊ ಭವಿಷ, ಎಂದು ಮೂಲವು. ರಾಮನುರಾಮನು ಬೃನೇ ಆಗುವನು” ಎಂದರು. ರಾಮನು ಸಹಾಯಸಂಪಾದ ಕೇವಲ ಏಕಾಕಿಯ ಗಿಯೇ ನಿಲ್ಲಬೇಕಾದುದೆಂದು ಭಾವವು, ಅಥವಾ ರಮಯ ರಾಮ” ಎಂಬ ರ ತೃಪ್ತಿಯಿಂದ “ಮಸಿ ಆರಾಮಃ ಧರಿಸು” ಎಂದು ಹಡುದವನ್ನು ಮ,