ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೯೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೩೪೧ 'ಸರ್ಗ, ೯.] ಅಯೋಧ್ಯಾಕಾಂಡವು. ಮವಾದ ಬುದ್ದಿವಾದಗಳೆಲ್ಲವನ್ನೂ ನಾನು ವಿಪರೀತವಾಗಿ ಎಣಿಸಿದ್ದೆನು. ಪ್ರಾಯಕವಾಗಿ ಕುಬ್ಬರಾದವರು ಬಹಳ ತಂತ್ರಿಗಳೆಂದು ಲೋಕಪ್ರಸಿದ್ದಿ ಯುಂಟು,ಅಂತವರಲ್ಲಿಯೂ ನಿನ್ನನ್ನು ಮೀರಿಸಿದವರೊಬ್ಬರೂ ಇಲ್ಲ! ನಿನ್ನ ಬು ಡ್ಡಿಯೇ ಬುದ್ಧಿ ಪೂರಾಪರಗಳನ್ನು ವಿಚಾರಿಸಿ ಕಾರಗಳನ್ನು ನಿಶ್ಚಯಿಸುವುದ ರಲ್ಲಿ ನಿನ್ನ ಸಾಮರವು ಯಾರಿಗುಂಟು? ಎಲೆಸಖಿ! ನನಗೆ ಎಷ್ಟು ಮಂದಿ ನಂ ಓರಿದರೇನು?ಎಷ್ಟು ಪರಿಜನರಿದ್ರೇನು?ನೀನೊಬ್ಬಳೇ ನನಗೆ ನಿಜವಾಗಿಯೇ ನ್ನು ಕೋರುವವಳು.ನಿನಗೊಬ್ಬಳಿಗೆಮಾತ್ರವೇ ನನ್ನ ಕಾವ್ಯದಲ್ಲಿ ಸಂಪೂರ್ ವಾದ ಅಕ್ಕರೆಯಿರುವುದು. ನನ್ನ ಭಾಗಕ್ಕೆ ನಿನ್ನನ್ನು ದೇವರಂತೆಯೇ ಎಣಿಸಬೇ ಕಾಗಿದೆ. ಈ ಸಮಯದಲ್ಲಿ ನೀನಿಲ್ಲದಿದ್ದರೆ, ರಾಜನು ರಾಮನಿಗೆ ಪಟ್ಟವನ್ನು ಕಟ್ಟೆ, ನನ್ನನ್ನು ಪೂರ್ಣವಾಗಿ ಕೆಡಿಸಿಯೇ ಬಿಡುತಿದ್ದನಲ್ಲವೆ! ಲೋಕದಲ್ಲಿ ಅಂಗ ಹೀನರಾಗಿಯ, ಕುರೂಪಿಗಳಾಗಿಯೂ ಇರುವವರು ಎಷ್ಮಮಂದಿಯುಂ ಟು, ಅಸಹ್ಯಕರವಾದ ಅವರರೂಪವು,ನೋಡವುದಕ್ಕೂ ಎಷ್ಟೋ ಭಯಂಕರ ವಾಗಿರುವುದು. ನಿನ್ನ ವಿಷಯವಾದರೋ ಹಾಗಲ್ಲ. ಗಾಳಿಯಿಂದ ಬಗ್ಗಿದ ತಾ ವರೆಬಳ್ಳಿಯಂತೆ, ಏನೋ ವಾತದೋಷದಿಂದ ನಿನ್ನ ಬೆನ್ನು ಸ್ವಲ್ಪ ಬಗ್ಗಿ ಹೋ ಗಿದ್ದರೂ, ನಿನಗೆ ಅದೂ ಒಂದು ಅಂದವಾಗಿಯೇ ಇರುವುದು. ನಿನ್ನ ಆಕಾರ ವು ನೋಡುವವರಿಗೆ ಎಷ್ಟೋ ರಮ್ಯವಾಗಿ ಕಾಣುವುದು. ಎಲೆ ಸುಂದರಾಂಗಿ! ನಿನ್ನ ಒಂದೊಂದು ಅವಯವದ ಸೌಂದರವನ್ನೂ ನಾನೇನುಹೇಳಲಿ ! ನಿ ವ್ರ ಎದೆಯು ಮಹೋನ್ನತವಾದ ನಿನ್ನ ಹೆಗಲಿನೊಡನೆ ಹೋರಾಡುವಂತೆ, ಆ ಹೆಗಲಿಗೆ ಸಮನಾಗಿ ಉಬ್ಬಿಕೊಂಡಿರುವುದು ! ಆದರಕೆಳಗೆ ಅಂದವಾದ ಹೊ ಕುಳಿಂದ ಕೂಡಿದ ನಿನ್ನ ಉದರಪ್ರದೇಶವು, ಆ ಎದೆಯ ಮಹೋನ್ನತಿಯನ್ನು ನೋಡಿ ನಾಚಿಕೆಗೊಂಡು ಕುಗ್ಗಿ ಹೊಂದತೆ ಕೃಶವಾಗಿರುವುದು ! ತುಂ ಬಿದ ನಿನ್ನ ಜಫುನವೂ, ಉಬ್ಬಿದ ಸ್ತನಗಳೂ,ಪೂರ್ಣಚಂದ್ರನಂತೆ ಹೊಳೆಯ ವ ನಿನ್ನ ಮುಖವೂ, ನಿನ್ನ ಅಸಾಧಾರಣಸೌಂದಯ್ಯಕ್ಕೆ ಕಳೆಯೇರಿಸುವುವು. ನಿನ್ನ ಅಂದವನ್ನು ಏನೆಂದುವರ್ಣಿಸಲಿ. ನಿನ್ನ ಜಘುವಪ್ರದೇಶದಲ್ಲಿ ಕಿರು ಜೈಗಳಿಂದ ಫುಲಫುಲನೆ ಧ್ವನಿಮಾಡುತ್ತಲಿರುವ ಕಾಂಚೀದಾಮವು, ಅತ್ರಿ