ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

tYg ಶ್ರೀಮದ್ರಾಮಾಯಣವು [ಸರ್ಗ, ೯: ಇಹೋಗುವವರನ್ನು ತನ್ನ ಕಡೆಗೆ ಕೂಗಿ ಕರೆಯುವಂತಿರುವುದು! ನಿನ್ನ ಮೊಳಕಾಲುಗಳೆರಡೂ ಒಂದಕ್ಕೊಂದಕ್ಕೆ ಸ್ವಲ್ಪವೂ ವ್ಯತ್ಯಾಸವಿಲ್ಲದೆ ಸಮವಾಗಿರುವುವು. ಉದ್ದವಾದ ನಿನ್ನ ಕಾಲುಗಳೆರಡೂ ನಿನಗೆ ಎಷ್ಟೋ ಅಂದವನ್ನು ಕೊಡುತ್ತಿರುವುವು. ಎಲೆ ಸಖಿ ! ನೀನು ಬಿಳೀದುಕೂಲವ ನ್ನು ಟ್ಯ, ವಿಸ್ತಾರವಾದ ನಿನ್ನ ತೋಳನ್ನಾಡಿಸುತ್ತಾ, ನನ್ನ ಮುಂದೆ ನಡೆಯುತ್ತಿದ್ದರೆ, ರಾಜಹಂಸಿಯಂತೆಯೇ ಶೋಭಿಸುವೆ ! ನಿನ್ನ ರೂಪಾತಿಶ ಯವೂ ಹಾಗಿರಲಿ! ನಿನ್ನ ಅದ್ಭುತವಾದ ಬುದ್ಧಿಶಕ್ತಿಯನ್ನೇನೆಂದು ಹೇಳಲಿ ! ಪ್ರಸಿದ್ಧಮಾಯಾವಿಯಾದ ಶಂಬರಾಸುರನಲ್ಲಿ ಕಾಣುತಿದ್ದ ಸಾವಿರಾರು ಮಾಯೆಗಳೂ ನಿನ್ನಲ್ಲಿರುವುವು. ಅಷ್ಟು ಮಾತ್ರವೇ ಅಲ್ಲ! ಲೋಕದಲ್ಲಿರುವ ಇ ತರವಿಧವಾದ ಸಾವಿರಾರು ಲೌಕಿಕಮಾಯೆಗಳನ್ನೂ ನೀನು ಚೆನ್ನಾಗಿ ಬಲ್ಲೆ. ರಥದ ಮೂತಿಯಂತೆ ಉದ್ದವಾಗಿ ಉಬ್ಬಿ ಕಾಣುತ್ತಿರುವ ಈ ನಿನ್ನ ಎದೆಯ ಗಂಟು, ನೋಡುವವರ ಕಣ್ಣಿಗೆ ಒಂದು ಸೊಗಸನ್ನು ಬೀರುತ್ತಿರುವುದು. ಅಪಾರವಾದ ಬುದ್ಧಿಯೂ, ಇತರರಿಗೆ ತಿಳಿಯದ ರಾಜನೀತಿಗಳೂ.ಹೀಗೆ ವಿಚಿ ತ್ರವಾದ ಮಾಯೆಗಳೂ ನಿನ್ನೊಳಗೆ ತುಂಬಿಕೊಂಡಿರುವುದರಿಂದಲೇ,ಸ್ಥಳಸಂ ಕೋಚದಿಂದ ಈ ನಿನ್ನ ಅವಯವವು ಉಬ್ಬಿಕೊಂಡಿರುವುದೆಂದು ಊಹಿಸಬೇ ಕಾಗಿದೆ. ಎಲೆಕುಬೈ!ಭರತನು ಪಟ್ಟಾಭಿಷಿಕ್ತನಾಗಿ, ರಾಮನು ಕಾಡಿಗೆ ಕಳುಹಿ ಸಲ್ಪಟೊಡನೆಯೇ, ಈ ನಿನ್ನ ಗಂಟೆಗೆ ಒಂದುಬಂಗಾರದ ಮಾಲಿಕೆಯನ್ನಿಟ್ಟು, ಅಲಂಕರಿಸುವೆನು. ನಿಜವಾಗಿ, ಈಗ ನಾನು ಉದ್ದೇಶಿಸಿರುವ ಕಾರವು ಕೈಗೂ ಡಿದೊಡನೆ, ಪಟಹಾಕಿದ ಅಪರಂಜಿಯ ಭಂಗಾರದಿಂದ ಈ ನಿನ್ನ ಗೂ ನನ್ನು ಅಲಂಕರಿಸುವೆನು! ಮತ್ತು ನಿನ್ನ ಮುಖಕ್ಕೆ ಬಂಗಾರದ ತಿಲಕವೊಂ ದನ್ನು ಮಾಡಿಸಿಡುವೆನು. ಇನ್ನೂ ನಿನ್ನ ಅವಯವಗಳಿಗೆಲ್ಲಾ ಉತ್ತಮವಾದ ಅನೇಕಭೂಷಣಗಳನ್ನು ಮಾಡಿಸಿ ಹಾಕುವೆನು, ಈ ನಿನ್ನ ಗೂನಿನಮೇಲೆ ಘಮಘಮಿಸುತ್ತಿರುವಗಂಧವನ್ನು ನನ್ನ ಕೈಯಿಂದತೊಡೆಯುವೆನು, ನಾನು ಮಾಡಿಸಿಕೊಟ್ಟ ದಿವ್ಯಾಭರಣಗಳನ್ನು ತೊಟ್ಟು, ದುಕೂಲಗಳನ್ನು ಟ್ಟು, ನೀನು ಬೀದಿಯಲ್ಲಿ ಸಂಚರಿಸುತ್ತಿದ್ದರೆ, ದೇವತಾಸ್ಸಿಯಂತೆಯೇ ಕಾಣುವೆ ! ಪೂರ್ಣ ಚಂದ್ರನೊಡನೆ ಹೋರಾಡುವಂತಿರುವ ಈ ನಿನ್ನ ಮುಖದಿಂದ ನಾಲ್ಕು ದಿಕ್ಕು