ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೪೪ ಶ್ರೀಮದ್ರಾಮಾಯಣವು (ಸರ್ಗ * ರಾಮನಿಗೆ ವನವಾಸಪ್ರಾಪ್ತಿಯೂ, ಭರತನಿಗೆ ರಾಜ್ಯಾಭಿಷೇಕವೂ ಆಗುವು ದರಲ್ಲಿ ಸಂದೇಹವಿಲ್ಲ. ಇದುಹೊರತು, ರಾಜನು ನನ್ನ ಮನಸ್ಯಪ್ತಿಗಾಗಿ ಬಂಗಾರಗಳನ್ನೂ, ರತ್ನಗಳನ್ನೂ, ಆಭರಣಗಳನ್ನೂ ತಂದು ಮುಂದಿ ಟೈರೂ, ನಾನು ಅದಕ್ಕೆ ಕೈನೀಡತಕ್ಕವಳಲ್ಲ. ಅದರಿಂದ ನನ್ನ ಆಸೆಯೂ ತೀರು ವುದಿಲ್ಲ. ಅತ್ತಲಾಗಿ ರಾಮನಿಗೆ ಅಭಿಷೇಕವಾದರೆ, ಇತ್ತಲಾಗಿ ನನ್ನ ಪ್ರಾಣ ಕೈ ಅದೇ ಕೊನೆಯೆಂದು ತಿಳಿ!” ಎಂದಳು. ಆಮೇಲೆ ಮಂಥರೆಯು, ರಾಜಮ ಹಿಷಿಯಾದ ಆ ಭರತನ ತಾಯನ್ನು ನೋಡಿ, ಮತ್ತಷ್ಟು ಕೋಪವನ್ನು ಹುಟ್ಟಿಸುವ ಕೂರವಾಕ್ಯಗಳಿಂದ, ಪುನಃ ಅವಳನ್ನು ಕುರಿತು, ಅವಳ ಕಿವಿಗಿಂಪಾಗಿಯೂ, ರಾಮನ ಶ್ರೇಯಸ್ಸಿಗೆ ವಿಘಾತವನ್ನುಂಟುಮಾಡುವು ದಾಗಿಯೂ ಇರುವಂತೆ ಒಂದಾನೊಂದು ಮಾತನ್ನು ಹೇಳುವಳು. (ಎಲೆ ಕೈಕೇಯಿ! ಒಂದು ವಿಷಯವನ್ನು ಮಾತ್ರ ನೀನು ಚೆನ್ನಾಗಿ ಮನಸ್ಸಿನಲ್ಲಿಡು. ರಾಮನಿಗೆ ಈಗ ಅಭಿಷೇಕವು ನಡೆದುಹೋದುದರೆ, ಆಮೇಲೆ ನೀನೂ ನಿನ್ನ ಮಗನೂ ಜೀವಾವಧಿ ಸಂಕಟಕ್ಕೆ ಸಿಕ್ಕಿ ನರಳಬೇಕಾದುದೇನೋ ನಿಜವು. ಆದುದರಿಂದ ಮುಖ್ಯವಾಗಿ ಭರತನಿಗೆ ಅಭಿಷೇಕವು ನಡೆಯುವಂತೆ ಪ್ರಯ ತಿಸಬೇಕಾದುದು ಮೊದಲನೆಯ ಕೆಲಸವು,” ಎಂದಳು. ಹೀಗೆ ಆ ಗೂನಿಯು ಮೇಲೆಮೇಲೆ ಕೋಪಗೊಳಿಸುತ್ತ, ಬಾಣಗಳಂತೆ ಅತಿಕ್ರೂರವಾದ, ಮತ್ತು ಮರಭೇದಕಗಳಾದ ಮಾತಿನಿಂದ ಕೈಕೇಯಿಯನ್ನು ರೇಗಿಸುತ್ತಿರಲು, ಅವು ಗಳನ್ನು ಕೇಳಿ ಕೈಕೇಯಿಯು, ಸಹಿಸಲಾರದಷ್ಟು ಸಂಕಟದಿಂದಲೂ, ಕೋ ಪದಿಂದಲೂ ಆಗಾಗ ತನ್ನ ಎದೆಯಮೇಲೆ ಕೈಯ್ಯನ್ನಿಟ್ಟುಕೊಂಡು ಆಹಾ ಕೈಹಿಡಿದ ಗಂಡನೇ ಹೀಗೆ ಮಾಡುವುದುಂಟೆ!”ಎಂದು ಆಶ್ಚ ರಪಡುತ್ತಾ,ಬಾ ರಿಬಾರಿಗೂ ಆ ಮಂಥರೆಯನ್ನು ಸ್ತೋತ್ರಮಾಡುತ್ತಿದ್ದಳು, ಆಗಾಗ ರಾಮನ ಹೆಸರನ್ನು ಹೇಳಿ ಕೋಪದಿಂದ ಹಲ್ಲು ಕಡಿಯುತ್ತಿದ್ದಳು. ಕೊನೆಗೆ ಮಂಥರೆ ಯನ್ನು ಕುರಿತು, ಎಲೆ ಮಂಥರೆ! ಮುಂದೆ ಈ ಎರಡರಲ್ಲಿ ಒಂದು ಕೆಲಸವು ನಡೆಯುವುದೇನೋ ನಿಜವು. ನಾನು ಇಲ್ಲಿಯೇ ಪ್ರಾಣತ್ಯಾಗವನ್ನು ಮಾಡಬೇ ಕಾದ ಸಂಭವವು ಬಂದರೆ, ಅದನ್ನು ಕೇಳಿದೊಡನೆಯೇ ನೀನು ರಾಜನಿಗೆ ತಿಳಿ ಸಬೇಕಾದುದೊಂದು? ಅಥವಾ ರಾಮನು ಕಾಡಿಗೆ ಹೋಗಿ ನಿಷ್ಕಂಟಕವಾದ