ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೯೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸರ್ಗ, ೧೦.೨ | ಅಯೋಧ್ಯಾಕಾಂಡವು. ೩೪ ರಾಜ್ಯವನ್ನು ಭರತನು ನೆಮ್ಮದಿಯಿಂದ ಆಳುತ್ತಿರುವುದು ಮತ್ತೊಂದು!ಇವೆ ರಡರಲ್ಲಿ ಯಾವುದೋ ಒಂದು ನಡೆಯುವುದು ಸಿದ್ದವು. ನಾನಾದರೋ ನನ್ನ ಕೋರಿಕೆಯು ಕೈಗೂಡುವವರೆಗೂ ಹಾಸಿಗೆಯಮೇಲೆ ಮಲಗುವವಳಲ್ಲ! ಹೂ ಗಳನ್ನು ಮುಡಿಯುವವಳಲ್ಲ! ಗಂಧವನ್ನು ತೊಡೆಯುವವಳಲ್ಲ ! ಅಭ್ಯಂಗನವ ನ್ನಾಗಲಿ, ಅನ್ನ ಪಾನಗಳನ್ನಾಗಲಿ ಕೈಕೊಳ್ಳುವವಳಲ್ಲ ! ಎಲ್ಲವನ್ನೂ ಬಿಟ್ಟು ಬಿಡುವೆನು. ಹೆಚ್ಚಾಗಿ ಹೇಳಿದುದರಿಂದೇನು ? ಎಲೆ ಮಂಥರೆ ! ದಶರಥನು ರಾಮನನ್ನು ಕಾಡಿಗೆ ಕಳುಹಿಸದಿದ್ದರೆ ಮಾತ್ರ, ನನ್ನ ಪ್ರಾಣವನ್ನೇ ನಾನು ಇಟ್ಟುಕೊಂಡಿರುವವಳಲ್ಲ. ಇದು ನಿಜವಾದ ಮಾತು!”ಎಂದಳು. ಹೀಗೆ ಕೈಕೇ ಯಿಯು ಅತಿಕರವಾದ ಮಾತುಗಳನ್ನಾಡಿ,ತಾನು ಧರಿಸಿದ ಒಡವೆಗಳೆಲ್ಲ ವನ್ನೂ ತೆಗೆದುಹಾಕಿ, ಪುಣ್ಯವು ಕ್ಷಯಿಸಿಹೋದಮೇಲೆ ಆಕಾಶದಿಂದ ಕೆಳಗೆ ಬಿದ್ದಿರುವ ಕಿನ್ನರಸಿಯಂತೆ ಬರೀನೆಲದಮೇಲೆ ಬಿದ್ದು ಹೊರಳುತಿದ್ದಳು. ಮಹಾಂಧಕಾರದಂತೆ ಮುಖದಲ್ಲಿ ಕೋಪವು ಆವರಿಸಿಕೊಂಡಿರಲು, ಪು ಷ್ಟಮಾಲ್ಯಾಭರಣಾದಿಗಳೆಲ್ಲವನ್ನೂ ತೆಗೆದು ನೆಲದಮೇಲೆ ಮಲಗಿದ್ದ ಆ ಕೈಕೇಯಿಯು,ನಕ್ಷತ್ರಗಳೆಲ್ಲವೂ ಅಸ್ತಂತವಾದಮೇಲೆ ಕತ್ತಲೆಯಿಂದ ಮ ರೆಸಲ್ಪಟ್ಟ ಗಗನಕ್ಷೆಯಂತೆ ತೋರುತ್ತಿದ್ದಳು ಇಲ್ಲಿಗೆ ಒಂಭತ್ತನೆಯ ಸರ್ಗವು. ( ದಶರಥನು ಕೈಕೇಯಿಯನ್ನು ನೋಡುವುದಕ್ಕಾಗಿ ಬಂ | *1 ದು, ಅವಳ ಕೋಶವನ್ನು ಸಮಾಧಾನಪಡಿಸಿದುದು. * ಹೀಗೆ ಕೈಕೇಯಿಯು ಪಾಪಬುದ್ದಿಯುಳ್ಳ ಆ ಮಂಥರೆಯ ದುರ್ಬೋ ಧನೆಗೊಳಗಾಗಿ, ಕೋಪಗೃಹಕ್ಕೆ ಹೋಗಿ, ಅಲ್ಲಿ ಉದ್ದಕ್ಕೆ ನೆಲದಮೇಲೆ ಮಲ ಗಿಬಿಟ್ಟಳು. ಆಗ ಅವಳು ವಿಷದಿಗ್ಧವಾದ ಬಾಣದಿಂದ ನೊಂದು, ಮೂರ್ಛಿತಳಾಗಿ ಬಿದ್ದಿರುವ ಕಿನ್ನರಯಂತೆ ಕಾಣಿಸುತಿದ್ದಳು. ಚತುರೆ ಯಾದ ಆ ಕೈಕೇಯಿಯು, ಮುಂದೆ ರಾಜನು ತನ್ನ ಬಳಿಗೆ ಬಂದಾಗ ತಾನು ನಡೆಸಬೇಕಾದ ಕೃತ್ಯಗಳೇನೆಂಬುದನ್ನು ಚೆನ್ನಾಗಿ ಆಲೋಚಿಸಿ, ಮನಸ್ಸಿನಲ್ಲಿ ನಿಶ್ಚಯಿಸಿಕೊಂಡಳು. ಅವೆಲ್ಲವನ್ನೂ ಕ್ರಮವಾಗಿ ಮಂಥರೆಯ