ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೯೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಶ್ರೀಮದ್ರಾಮಾಯಣವು [ಸರ್ಗ, ೧೦ ಕಿವಿಯಲ್ಲಿ ಹೇಳಿದಳು. ಮಂಥರೆಯ ಮಾತಿಗೆ ಮರುಳಾದ ಆ ಕೈಕೇಯಿಗೆ ನಿಜವಾಗಿಯೇ ಮೇಲೆಮೇಲೆ ದುಃಖವು ಹೆಚ್ಚು ತಿತ್ತು. ಹಾವಿನಂತೆ ಬಿಸಿಬಿಸಿ ಯಾಗಿ ನಿಟ್ಟುಸಿರನ್ನು ಬಿಡುತ್ತಿದ್ದಳು. ಹೀಗೆ ದುಃಖಿತೆಯಾದ ಕೈಕೇಯಿಯು ತಾನು ಮಾಡಬೇಕಾದ ಮುಂದಿನ ಕಾರವೇನೆಂಬುದನ್ನು ಸ್ವಲ್ಪ ಹೊತ್ತಿನ ವರೆಗೆ ಚೆನ್ನಾಗಿ ಆಲೋಚಿಸಿ, ತನ್ನ ಕೋರಿಕೆಯು ಕೈಗೂಡುವುದಕ್ಕೆ ಅನು ಕೂಲವಾದ ದಾರಿಯನ್ನೂ ನಿಶ್ಚಯಿಸಿಟ್ಟುಕೊಂಡಳು-ಮಂಥರೆಯು ಸ್ವಾರ ಪರಳಾಗಿ ಹಣದಾಸೆಯಿಂದಮಾತ್ರವೇ ಕೈಕೇಯಿಗೆ ಈ 'ದುರ್ಬೋಧನೆಯ 'ನ್ನು ಮಾಡಿದವಳಲ್ಲ. ಅವಳಿಗೆ ಕೈಕೇಯಿಯಲ್ಲಿ ಸಹಜವಾದ ಸ್ನೇಹವೂ ಇತ್ತು. ಈ ಎರಡುದ್ದೇಶಗಳಿಂದ ಮಾಡಿದ ದುರ್ಬೋಧನೆಯು ಸಾರಕ ವಾಗಿ, ಆವಳು ತನ್ನ ದಾರಿಗೆ ಬಂದುದನ್ನು ನೋಡಿ ಮಂಥರೆಗೆ ಪರಮಾನಂ ದವುಂಟಾಯಿತು. ಅವಳು ಆಗಲೇ ಸಿದ್ಧಿಯನ್ನು ಪಡೆದವಳಂತೆ ತನ್ನಲ್ಲಿತಾನು ಹಿಗ್ಗುತಿದ್ದಳು. ಕೈಕೇಯಿಯು ಹೀಗೆ ಮನಸ್ಸಿನಲ್ಲಿ ನಿಶ್ಚಯಮಾಡಿಕೊಂಡ ಮೇಲೆ, ಕೋಪಸೂಚಕವಾದ ಹುಬ್ಬನ್ನು ಗಂಟುಹಾಕಿ, ನೆಲದಮೇಲೆ ಮಲಗಿದಳು. ತಾನು ಮುಡಿದಿದ್ದ ವಿಚಿತ್ರವರ್ಣವುಳ್ಳ ಪುಷ್ಪಮಾಲಿಕೆ ಗಳನ್ನೂ , ತೊಟ್ಟಿದ್ದ ದಿವ್ಯಾಭರಣಗಳನ್ನೂ ಕಿತ್ತು, ಅಲ್ಲಲ್ಲಿ ನೆಲದಮೇಲೆ ಬಿಸುಟಿದ್ದಳು. ಹೀಗೆ ಅಲ್ಲಲ್ಲಿ ಬಿಸಾಡಿದ ಪಷ್ಟಮಾಲ್ಯಾಭರಣಗಳೆಲ್ಲವೂ ನಕ್ಷತ್ರಸಮೂಹಗಳಿಂದ ಕೂಡಿದ ಗಗನಪ್ರದೇಶದಂತೆ ಆಸ್ಥಳಕ್ಕೆ ಒಂದು ಅಂದವನ್ನು ಕೊಡುತಿತ್ತು. ಮುಂಗುರಳುಗಳನ್ನು ತಿದ್ದಿಕೊಳ್ಳದೆ, ಮಾಸಿದ ಬಟ್ಟೆಯನ್ನುಟ್ಟು, ಕೂದಲನ್ನು ಒಂದೇಜಡೆಯಾಗಿ ಎತ್ತಿಕಟ್ಟೆ, ಆ ಕೋಪಗೃಹದಲ್ಲಿ ಅಳ್ಳಾಡದೆ ಉದ್ದಕ್ಕೆ ಮಲಗಿದ್ದ ಆ ಕೈಕೇಯಿಯು, ಉಸಿ ರಾಡದೆ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಿರುವ ಕಿನ್ನರಸೀಯಂತೆ ತೋರುತ್ತಿದ್ದಳು. ಇಷ್ಟರಲ್ಲಿ ಇತ್ತಲಾಗಿ ದಶರಥನು, ರಾಮಾಭಿಷೇಕಕ್ಕೆ ಬೇಕಾದ ಸನ್ನಾಹಗಳ ನ್ನು ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಆಜ್ಞಾಪಿಸಿ, ಸಭಿಕರ ಅನುಮತಿಯ ನ್ನೂ ಪಡೆದು, ಸಭಾಸ್ಥಾನದಿಂದ ಹಿಂತಿರುಗಿ ಬರುತ್ತ, “ಈಗಲೀಗ ರಾಮನಿಗೆ ಪಟ್ಟಾಭಿಷೇಕವು ನಿಶ್ಚಿತವಾಯಿತು ! ಇನ್ನು ಮೇಲೆ ಏನೂ ಸಂದೇಹವಿಲ್ಲ " ವೆಂದು ಮನಸ್ಸಿನಲ್ಲಿ ನಿರ್ಧರಿಸಿಕೊಂಡನು. ಕೈಕೇಯಿಯು ತನಗೆ ಬಹಳ