ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೧೬] ಯುದ್ಧಕಾಂಡ ೨೧ ಣನೆಂದು ಹೆಸರು * ದುರಾತ್ಮನಾದ ಆ ರಾವಣನು, ಗರ್ಭವಾಸಾದಿ ದುಃಖಗಳನ್ನೂ ತಿಳಿಯದೆ ಬಾಲ್ಯದಿಂದಲೂ ಸುಖವಾಗಿ ಬೆಳೆದ ಸೀತೆಯೆಂಬ ವಳು ಜವಸ್ಥಾನದಲ್ಲಿದ್ದಾಗ, ಅವಳನ್ನು ಕದ್ದು ತರುತ್ಯ, ದಾರಿಯಲ್ಲಿ ತನ್ನನ್ನು ತಡೆಯುವುದಕ್ಕಾಗಿ ಬಂದ ಜಟಾಯುವನ್ನೂ ಕೊಂದು, ಆಕೆಯನ್ನು ಲಂಕೆ ಯಲ್ಲಿ ಸೆರೆಹಾಕಿರುವನು. ಅವಳಮೇಲೆ ಅನೇಕ ರಾಕ್ಷಸಿಯರನ್ನೂ ಕಾವಲಿರಿ ಸಿರುವನು ಅವಳು ದುಃಖದಿಂದ ಮೈಮರೆತು ಹೀನಳಾಗಿ ಕೊರಗುತ್ತಿರು ವಳು ಈ ಅಕೃತ್ಯವನ್ನು ನೋಡಿ ಸಹಿಸಲಾರದೆ ನಾನು ಆ ರಾವಣನಿಗೆ ಹೇತುಯುಕ್ತಗಳಾದ ನಾನಾವಿಧವಾಕ್ಯಗಳಿಂದ ನೀತಿಯನ್ನು ಬೋಧಿಸಿ, ಆ ಸೀತೆಯನ್ನು ರಾಮನಿಗೊಪ್ಪಿಸುವಂತೆ ಬಾರಿಬಾರಿಗೂ ನಿರ್ಬಂಧಿಸಿ ಹೇಳಿ ದೆನು ಎಷ್ಟು ಹೇಳಿದರೇನು? ಸಾವಿಗೆ ಸಿಕ್ಕಿದವನು ಔಷಧವನ್ನೊಲ್ಲದಂತೆ, ಮೃತ್ಯುವಶನಾದ ರಾವಣನಿಗೆ, ನನ್ನ ವಾಕ್ಯಗಳೊಂದೂ ಕಿವಿಗೇರಲಿಲ್ಲ. ಹಾಗೆ ಹಿತವನ್ನು ಹೇಳುವುದಕ್ಕಾಗಿ ಹೋದ ನನ್ನ ಸ್ನೇ ಆತನು ಕ್ರೂರವಾಕ್ಯ ಗಳಿಂದ ಧಿಕ್ಕರಿಸಿದುದೂ ಅಲ್ಲದೆ, ಕೇವಲದಾಸನಿಗಿಂತಲೂ ಕಡೆಮಾಡಿ ನನ್ನ - - - ಒಳಪಟ್ಟು ನಡೆಯಬೇಕಾಯಿತೆಂದು ಭಾವವ (ವಿಭೀಷಣ ಇತಿಶ್ರುತ8) ಮೇಲೆ ಹೇಳಿ ದಂತೆ ರಾವಣನೊಡನೆ ಸಂಬಂಧದಿಂದುಂಟಾದ ದೋಷವು ಮಾತ್ರವೇ ಅಲ್ಲದೆ, ನಾನು ಭಯಂಕದನೆಂದೇ ಲೋಕದಲ್ಲಿ ಕರೆಯಲ್ಪಡುತ್ತಿರುವೆನು, ರಾವಣನಿಗಾದರೋ ತನ್ನಲ್ಲಿ ಸಹಜನ್ಯಗಳಾದ ದೋಷಗಳು ಮಾತ್ರವೇ ಇರುವುವು, ನೆನಗೆ ನನ್ನ ದೋಷಗಳಲ್ಲದೆ ಅವನ ಸಂಬಂಧದಿಂದುಂಟಾದ ದೋಷಗಳೂ ಪ್ರಾಪ್ತವಾಗಿರುವುದೆಂದು ನಿರೇದವು ಸೂಚಿತವಾಗುವುದು (ವಿಭೀಷಣನ್ನು ಧರಾ ತಾ” ಎಂದು ವಿಭೀಷಣನು ತಾನು ಧರಾತನೆಂಬುದಾಗಿ ಲೋಕಪ್ರಸಿದ್ದಿಯನ್ನು ಹೊಂದಿದ್ದರೂ, ಶರಣಾಗತಿಗೆ ಬೇಕಾದ ಕಾರರೂಪವಾದ ಅಂಗವನ್ನು ಇದರಿಂದ ತೋರಿಸಿದುದಾಗಿ ಗ್ರಾಹ್ಯವ.

  • ರಾವಣನಲ್ಲಿ ಹಿಂದೆ ಹೇಳಿದ ದೋಷಗಳನ್ನು ಪ್ರಾಯಶ್ಚಿತಗಳಿಂದಾದರೂ ತೆ ಲಗಿಸಬಹುದು. ಇವಕ್ಕಿಂತಲೂ ಕರವಾಗಿ ನಕ್ಷಮಾಮಿ" ಎಂಬಂತೆ ಯಾವ ವಿಧ ದಿಂದಲೂ ಭಗವಂತನ ಕ್ಷಮೆಗೆ ಪಾತ್ರವಾಗದ ಭಾಗವತಾಪಚಾರಕ್ಕೂ ಆತನು ಪಾತ್ರ ನೆಂಬುದನ್ನು ಈ ವಾಕ್ಯದಿಂದ ಸೂಚಿಸುವುದಾಗಿ ಗ್ರಾಹ್ಯವು, ಇಲ್ಲಿ ಜಟಾಯುವ ಸೀತಾಪಹರಣೆಗಳೆರಡೂ ಭಾಗವತಾಪಚಾರಗಳೆಂದು ತಿಳಿಯಬೇಕು.

-