ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೬೪ ಶ್ರೀಮದ್ರಾಮಾಯಣವು [ಸರ್ಗ, ೧೭ ದೇಹವಿಲ್ಲ. ಇವನು ನಮ್ಮನ್ನು ವಂಚಿಸುವುದಕ್ಕಾಗಿಯೇ ಬಂದಿರುವನು. (ನಮ್ಮಲ್ಲಿ ಪೂರ್ಣವಾದ ಪರಸ್ಪರಾನುರಾಗವಿರುವಾಗ ಈತನಿಗೆ ಆ ಭೇದೆ? ಪಾಯವು ಸಾಧ್ಯವೆ?” ಎಂದು ಕೇಳುವೆಯಾ? ರಾಮಾ' ಈತನು ಒಂದುವೇಳ ನಮ್ಮಲ್ಲಿ ಬುದ್ದಿಭೇದವನ್ನು ಹುಟ್ಟಿಸಲಾರದೆ ಹೋದರೂ, ನಾವು ಇವನಲ್ಲಿ ಪೂರ್ಣವಾದ ನಂಬಿಕೆಯನ್ನು ತೋರಿಸುವವರೆಗೂ ನಮ್ಮೊಡನೆ ಸ್ನೇಹವ ನೈ ನಟಿಸುತಿದ್ದು, ನಮಗೆ ನಂಬಿಕೆ ಯು ಹುಟ್ಟಿದಮೇಲೆ, ಸಮಯವನ್ನು ನೋಡಿ, ಇಲ್ಲ ಇವನೇ ತನ್ನ ಬುಚಾತುರದಿಂದ ನಮ್ಮ ನು ಕೊಂದ ರೂಕೊಲ್ಲಬಹುದು ((ರಾಜರಿಗಿರಬೇಕಾದ ಆರ.ಬಗೆಯ ಬಲಗಳಲ್ಲಿ ಶತ್ರು ಬಲವೂ ಒಂದು ಮುಖ್ಯಬಲವೆಂದು ರಾಜಸೀತಿ ಯಲ್ಲವೆ?” ಎಂದು ನಿನಗೆ ಆಸೆಯಿರಬಹುದು ಹಾಗಲ್ಲ ' ಶತ್ರಜಯಕ್ಕೆ ಸಾಧನಗಳಾದ ಆರುಬಗೆಯ ಬಲಗಳಲ್ಲಿ, ಪಿತ್ರಬಲವನ್ನಾಗಲಿ, ಆಟವಿಕಬಲವನ್ನಾಗಲಿ, ಮಲಬಲ ವನಾ ಗಲಿ, ಭತ್ಯಬಲವನ್ನಾಗಲಿ, ಬೇರೆ ಯಾವ ವಿಧವಾದ ಬಲವ ನಾಗಲಿ ನಂ ಎಬಹುದೇ ಹೊರತು, ಶತ್ರಸಂಬಂಧವಾದ ಬಲವನ್ನು ಮಾತ್ರ ತಟ್ಟನೆ ಕೈಸೇರಿಸಿಕೊಳ್ಳಬಾರದು ಈತನು ಶತ್ರಬಲಕ್ಕೆ ಸೇರಿದವ ನಾದದರಿಂದ ತಜ್ಞನೇ ಹೊರತು ಎಂb ( ಗ್ರಾಹ್ಯವಲ್ಲ. ಇದರಮೇಲೆ ಈತನು ಸಾಮಾನ್ಯವಾಗಿ ಶತ್ರು ಪಕ್ಷದವನೆಂಬುದು ಮಾತ್ರವೇ ಅಲ್ಲ, ಸಹಜ ವಾ' ಯೇ ಕೈರಸ್ವಭಾವವುಳ್ಳ ರಾಕ್ಷಸಕುಲದವನು ನಿನ್ನ ಶತ್ರವಾದ ರಾವಂಸಿಗೆ ಒಡಹುಟ್ಟಿದ ತಮ್ಮನು ಇವನ ಬಾಯಿಂದಲೇ ನಾವು ಈ ಮಾ ತನ್ನು ಕೇಳಿರುವೆವು, ಆದರೆ ಸೀನೂ ಅಣ್ಣನನ್ನು ಬಿಟ್ಟು ಬಂದು ನನ್ನಲ್ಲಿ ಸೇರಿದವನಲ್ಲವೆ ? ” ಎಂದು, ನೀನು ನನ್ನನ್ನು ಕೇಳಬಹುದು ರಾಮಾ ' ನನ್ನ ಸಂಗತಿಯೇ ಬೇರೆ ” ಮೊದಲೇ ನನ್ನ ಇನು ನನ್ನ ನ್ನು ರಾಜ್ಯದಿಂದೊಡಿಸಿ ಬಿಟ್ಟನು. ಮೊದಲಿಂದಲೂ ನಮ್ಮಿಬ್ಬರಿಗೆ ಪರಸ್ಪರವೈರವೇ ಬಹಳವಾಗಿ ಬೆಳೆದು ಹೋಗಿದ್ದಿತು. ಈ ರಾಕ್ಷಸನ ಸಂಗತಿಯು ಹಾಗಲ್ಲ ಈತನು ಈಗಲೇ ನಿನ್ನ ಶತ್ರುವಿನ ಸಮೀಪವನ್ನು ತಾನಾಗಿ ಬಿಟ್ಟುಬಂದುದಾಗಿ ಹೇಳುತ್ತಿರು ವನು ಹೀಗಿರುವಾಗ ಇವನಲ್ಲಿ ನಾವು ಹೇಗೆ ವಿಶ್ವಾಸವನ್ನಿಡಬಹುದು ? ಹೇಗಿದ್ದರೂ ಶರಣಾರಿಯಾಗಿ ಬಂದವನನ್ನು ಪರಿತ್ಯಜಿಸಬಹುದೆ?” ಎಂದು ನೀನು ಕೇಳುವೆಯಾ ? ಈತನು ನಿಜವಾಗಿ ನಮ್ಮಲ್ಲಿ ಶರಣಾರಿಯಾಗಿ ಬಂದ