ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೧೬ ) ಯುದ್ದ ಕಾಂಡವು ೨೧೬೫ ವನಲ್ಲ. ರಾವಣನಿಗೆ ಗೂಢಚಾರನಾಗಿ ನಮ್ಮನ್ನು ವಂಚಿಸುವುದಕ್ಕಾಗಿಯೇ ಬಂದಿರುವನು. ಇವನ ವಿನಯಾದಿಗಳೆಲ್ಲವೂ ಕೇವಲ ನಟನೆಯೆಂಬುದರಲ್ಲಿ ಸಂದೇಹವಿಲ್ಲ ನೀನು ಯುಕ್ತ ಕಾರೈಗಳನ್ನು ಚೆನ್ನಾಗಿ ಆಲೋಚಿಸತಕ್ಕವ ನು ನಾನಾಗಿ ನಿನಗೆ ಹೇಳಿ ತಿಳಿಸಬೇಕಾದುದೇನೂ ಇಲ್ಲ, ಈಗ ನನಗೆ ತೋ ರಿರುವುದೇನೆಂದರೆ, ಇವನನ್ನು ಇಲ್ಲಿಯೇ ನಿಗ್ರಹಿಸಿಬಿಡುವುದೇ ಮೇಲು ! (ಚಾರನಾಗಿ ಬಂದವನನ್ನು ಕೊಲ್ಲುವುದು ಯುಕ್ಯವೆ ? ” ಎಂದು ನೀನು ಶಂ ಕಿಸಬಹುದು, ಈತನು ಕೇವಲಚಾರನಾಗಿ ಇಲ್ಲಿನ ಸಂಗತಿ ಯನ್ನು ತಿಳಿದು ಕೊಂಡು ಹೋಗುವುದಕ್ಕೆ ಮಾತ್ರವೇ ಬಂದುವಂಗಿ ತೆರಲ್ಲಿ ರಾಕ್ಷಸರಿ ಗೆ ಸಹಜವಾದ ಕಲಬುದ್ಧಿಯಿಂದ, ರಾವಣನ ಪ್ರೇರಣೆ ಋಮೇಲೆ ನಮ್ಮ ನ್ನು ಮೋಸಂದ ಕೊಲ್ಲುವುದಕ್ಕಾಗಿಯೇ ಬಂಹಿರವನು ನೀನು ಇವನ ಮಾಯೆಯನ್ನರಿಯದೆ ಈತನಲ್ಲಿ ವಿಶ್ವಾಸವನ್ನು ತೋರಿಸುತಿದ್ದರೆ, ಇವನು ನಮ್ಮೆಲ್ಲರನ್ನೂ ಕೊಲ್ಲುವುದೇ ನಿಜವು, (ಒಂದುವೇಳೆ ಅವನಲ್ಲಿ ಕಪಟ ಸ್ನೇಹದ ಸೂಚನೆಯು ಕಂಡುಬಂದರ ಆಗ ನಾವೇ ಮೊದಲು ಅವನನ್ನು ಕೊಲ್ಲಬಾರದೆ ? ” ಎಂದು ನೀನು ಹೇಳಬಹುದು, ಅದನ್ನು ಕಂಡುಕೊಳ್ಳು ವುದಕ್ಕೆ ನಮಗೆ ಸಾಧ್ಯವಲ್ಲ ಬುದ್ಧಿಶಾಲಿಯಾದವನು ತನ್ನ ಶತ್ರು ಸೈನ್ಯವನ್ನು ಪ್ರವೇಶಿಸಿರುವಾಗಲೂ, ಅವರಿಗೆ ತನ್ನಲ್ಲಿ ಸ್ವಲ್ಪವೂ ಸಂದೇಹ ವುಂಟಾಗದಂತೆ, ಸ್ನೇಹಭಾವವನ್ನೇ ನಟಿಸುತಿದ್ದು, ಎಂದಾದರೂ ಒಮ್ಮೆ ಅವಕಾಶವನ್ನು ಪಡೆದು ಅವರಲ್ಲರನ್ನೂ ಕೊಂದುಬಿಡುವನು ಈ ಸಂದರ್ಭ ದಲ್ಲಿ ಅವನು ತಾನು ಏಕಾಕಿಯಾಗಿದ್ದರೂ, ಕಾಗೆ ಯು, ಹಗಲಲ್ಲಿ ಗೂಬೆ ಗಳ ಗುಂಪನ್ನು ನುಗ್ಗಿ ಕೊಲ್ಲುವಂತೆ, ತಾನೊಬ್ಬನೇ ಸಮಸ್ತ ಸೈನ್ಯಗಳನ್ನೂ ಧ್ವಂಸಮಾಡಬಲ್ಲದು ಆದುದರಿಂದ ರಾಮಾ ! ಈತನನ್ನು ಈಗಲೇ ಕೊಂದುಬಿಡಬೇಕು ಒಂದುವೇಳೆ ಈಗ ನೀನು ಇವನನ್ನು ಕೊಲ್ಲದೆ ಬೇರೆವಿ ಧದಿಂದ ಭಂಗಪಡಿಸಿ 'ಓಡಿಸಿಬಿಟ್ಟರೂ, ಮಾರೀಚನಂತೆ ಇವನು ಮುಂದೆ ಯಾದರೂ ನಮಗೆ ಅನರವನ್ನೇ ತರುವನು, ಮತ್ತು ನೀನು ವಾಲಿಯನ್ನು ಕಂದಂತೆ ಇವನನ್ನು ಒಂದು ಬಾಣದಿಂದ ಕೊಂದರೂ ನನಗೆ ತೃಪ್ತಿಯಿಲ್ಲ. ಅತಿಕೂರದಂಡನೆಯಿಂದ ಇವನನ್ನೂ, ಇವನ ಮಂತ್ರಿಗಳನ್ನೂ ಚಿತ್ರ ವಧಮಾಡಿ ಕೊಲ್ಲಬೇಕು ಇವನು ನಮಗೆ ಸಾಮಾನ್ಯವಾದ ಶತ್ರವಲ್ಲ.