ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೩೭ ಶ್ರೀಮದ್ರಾಮಾಯನು [ಸರ್ಗ ೧೬. ಈ ವಿಭೀಷಣನು ಪರಮಭುತುಕನಾದ ಆ ರಾವಣನಿಗೆ ಸಾಕ್ಷಾತ್ಸಯೋ ದರನಲ್ಲವೆ !” ಎಂದನು. ವಾನರಪ್ರಭುವಾದ ಸುಗ್ರೀವನು ಚೆನ್ನಾಗಿ ಮಾತು ಬಲ್ಲವನಾದುದರಿಂದ, ವಾಕ್ಯಕುಶಲನಾದ ಆ ರಾಮನಿಗೂ ಮುಂದಿನಮಾ ತಿಗೆ ಅವಕಾಶವಿಲ್ಲದಂತೆ, ತಕ್ಕ ಸಮಾಧಾನಗಳಿಂದ ತನ್ನ ಸಿದ್ಧಾಂತವನ್ನು ಸ್ಥಾಪಿಸಿ ಸುಮ್ಮನಾದನು ಮಹಾಯಶಸ್ವಿಯಾದ ರಾಮನಾದರೋ ಈ ಸುಗ್ರೀವನ ವಾಕ್ಯವನ್ನು ಕೇಳಿದಮೇಲೆ, ತನ್ನ ಸಮೀಪದಲ್ಲಿ ಹನುಮಂತನೇ ಮೊದಲಾದ ವಾನರಪ್ರಮುಖರನ್ನು ಕುರಿತು, “ಎಲೈ ವಾನರರ ನಿಮ್ಮ ಪ್ರ ಭುವಾದ ಸುಗ್ರೀವನು ರಾವಣನ ತಮ್ಮ ನಾದ ಆ ವಿಭೀಷಣನ ವಿಷಯವಾಗಿ .ಅತ್ಯಂತಯುಕ್ತಿಯುಕ್ತವಾಗಿರುವಂತೆ ಹೇಳಿದ ಮಾತುಗಳನ್ನು ನೀವೆಲ್ಲರೂ ಕೇಳಿದಿರಷ್ಟೆ? ಈ ವಿಷಯದಲ್ಲಿ ನಿಮ್ಮ ಅಭಿಪ್ರಾಯವೇನೆಂದೂ ತಿಳಿಯಬೇ ಕಾಗಿದೆ ಆದರೆ ನೀವು ನಮ್ಮಿಬ್ಬರಿಗೂ ಪರತಂತ್ರರಾಗಿರುವುದರಿಂದ, ನಮ್ಮಿ ಬ್ಬರಲ್ಲಿ ಯಾರಪಕ್ಷವನ್ನು ಹಿಡಿದು ಮಾತಾಡಬೇಕೆಂದು ಸಂದೇಹಿಸಬೇಕಾ ದುದಿಲ್ಲ ಒಬ್ಬನಿಗೆ ಬಹಳಮಂದಿ ಸುಹೃತ್ರುಗಳಿದ್ದರೆ, ಅವರಲ್ಲಿ ಒಬ್ಬನು ಹೇಳಿದ ಮಾತನ್ನು ಕೇಳಿ ಮತೊಬ್ಬನು, ಆ ಅಭಿಪ್ರಾಯವು ತನಗಿಷ್ಟವಿಲ್ಲ ದಿದ್ದರೂ, ಆಸ್ನೇಹಿತನ ಮುಖೋಲ್ಲಾಸಕ್ಕಾಗಿ,ಮಾತಾಡದೆ ಸುಮ್ಮನಿರಬಾರ ದು'*ಇಂತಹ ಕಾರಸಂಕಟಗಳು ಬಂದೊದಗಿದಾಗ, ಯುಕ್ತಾಯುಕ್ತ ವಿವೇ ಚನೆಯುಳ್ಳವನಾಗಿಯೂ, ಬುದ್ಧಿಶಾಲಿಯಾಗಿಯೂ, ಮಾತಿನಲ್ಲಿ ಸಮರ್ಥ ನಾಗಿಯೂ ಇರುವ ಮಿತ್ರನು, `ನಿಜವಾಗಿ ತನ್ನ ಮಿತ್ರನಿಗೆ ಶಾಶ್ವತವಾದ ಶ್ರೇಯಸ್ಸನ್ನು ಕೋರುವನಾದರೆ, ಅವನಿಗೆ ಕಾಲೋಚಿತವಾದ ಬುದ್ದಿವಾದ ವನ್ನು ಹೇಳಿಯೇ ತೀರಬೇಕು ” ಎಂದನು ಹೀಗೆ ರಾಮನು ನಯವಾಕ್ಯದಿಂ

  • ಇಲ್ಲಿನ ಕಾರಸಂಟವೇನೆಂದರೆ'-ಅತ್ತಲಾಗಿ ವಿಭೀಷಣನು ತನ್ನಲ್ಲಿ ಶರಣಾಗತ ನಾಗಿ ಬಂದು ತನ್ನಾಶ್ರಯವನ್ನು ಪ್ರಾರ್ಥಿಸುತ್ತಿರುವನು ಇತ್ತಲಾಗಿ ಸುಗ್ರೀವನು 'ತಸ್ಯಾಹಂ ನಿಗ್ರಹಂ ಮನ್ನೇ” ಎಂದು ಆತನನ್ನು ನಿಗ್ರಹಿಸಲೇಬೇಕೆಂದು ನಿರ್ಬಂಧಿ ಸುತ್ತಿರುವನು ಇದೇ ಇಲ್ಲಿನ ಕಾರಸಂಕಟವು ಈ ಶ್ಲೋಕಾದಿಂದ ಭಗವಂನಿಗೆ ಆಡ್ರಿ ತರಾದವರು ತನ್ನ ಇಚ್ಛೆಯನ್ನನುವರ್ತಿಸದೆ ವಿರೋಧವನ್ನು ಹುಟ್ಟಿಸಿದರೂ, ಅವರಿಂದ ಲೇ ಅದನ್ನು ಪರಿಹಾರ ಮಾಡಿಸಬೇಕೆಂಬ ಆಶ್ರಿತಪಾರತಂತ್ರವು ಸೂಚಿಸಲ್ಪಡುವುದು.