ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೧೭.] ಯುದ್ಧಕಾಂಡವು. ೨೧೩ ದ ಅಲ್ಲಿನ ವಾನರರನ್ನು ಪ್ರಶ್ನೆ ಮಾಡಲು, ರಾಮಕಾಠ್ಯದಲ್ಲಿ ಬಹಳ ಎಚ್ಚರಿಕೆ ಯುಳ್ಳವರಾಗಿಯೂ, ಮನಃಪೂರೈಕವಾಗಿ ರಾಮನಿಗೆ ಹಿತವನ್ನು ಬಯಸತ ಕ್ಕವರಾಗಿಯೂ ಇದ್ದ ಆ ವಾನರರಲ್ಲಿ,*ಒಬ್ಬೊಬ್ಬರೂ ತಮ್ಮ ತಮ್ಮ ಅಭಿ ಪ್ರಾಯವನ್ನು ಹೇಳತೊಡಗಿದರು 14ರಾಮಾ ! ಈ ಮೂರುಲೋಕಗಳಲ್ಲಿ ಯೂ ನಿನಗೆ ತಿಳಿಯದುದೊಂದೂ ಇಲ್ಲ ನೀನು ಸತ್ವಜ್ಞನಾಗಿದ್ದರೂ ಕೇವಲ ವಾನರರಿಗೂ ನೀನು ಸುಹೃತೆಂಬ ಕೀರ್ತಿಯನ್ನು ಲೋಕದಲ್ಲಿ ಪ್ರಕಟಿಸು ವುದಕ್ಕಾಗಿಯೇ ನಮ್ಮನ್ನು ಹೀಗೆ ಪ್ರಶ್ನೆ ಮಾಡುತ್ತಿರುವೆ. ನೀನಾದರೋ ಶರ ಣಾಗತರಕ್ಷಣವೆಂಬ ವ್ರತವನ್ನು ದೃಢವಾಗಿ ಹಿಡಿದವನು. ಆ ವ್ರತಕ್ಕೆ ಎಂ ತಹ ಮಹಾವಿಷ್ಣು ಗಳು ಬಂದರೂ ಅವುಗಳನ್ನು ನಿವಾರಿಸತಕ್ಕ ಅಸಾಧಾರ ಣ ಶೌರವುಳ್ಳವನು ಪರಮಧಾರಿ ಕನು ದೃಢಪರಾಕ್ರಮವುಳ್ಳವನು. ಕಾಲ್ಯಾಕಾಠ್ಯಗಳನ್ನು ವಿಮರ್ಶಿಸಿ ನಡೆಸತಕ್ಕವನು ಅಸಾಧಾರಣವಾದ ಸ್ಮರಣಶಕ್ತಿಯುಳ್ಳವನು ಸತ್ವಸಮರನಾಗಿದ್ದರೂ, ಮಿತ್ರರಿಗಧೀನವಾದ ಮನಸ್ಸುಳ್ಳವನು ಹಿಗೆ ಸಿನಲ್ಲಿರುವ ಆಶ್ರಿತಪಾರತಂತ್ರದಿಂದ ನಮ್ಮ ಮಾತಿನಂತೆಯೇ ನಡೆಯಬೇಕೆಂದು ನಿನಗೆ ಅಭಿಪ್ರಾಯವಿದ್ದ ಪಕ್ಷದಲ್ಲಿ, ಇಲ್ಲಿ ನಿನ್ನ ಮಂತ್ರಿಗಳೊಬ್ಬೊಬ್ಬರೂ ತಮ್ಮ ತಮ್ಮ ಅಭಿಪ್ರಾಯಗಳನ್ನು ಬೇರೆ ಬೇರೆಯಾಗಿ ತಿಳಿಸಲಿ ! ಇವರೆಲ್ಲರೂ ಬುದ್ಧಿಶಾಲಿಗಳಾಗಿಯೂ, ಮಾತಿನಲ್ಲಿ ಸಮದ್ಧರಾಗಿಯೂ ಇರುವುದರಿಂದ, ಒಬ್ಬೊಬ್ಬರೂ ಕ್ರಮವಾಗಿ ತಮತ

  • ಇಲ್ಲಿ 'ಅಜ್ಞಾತಂ ನಾಸ್ತಿ ತೇ ಕಿಂಚಿತ್ರಿಷು ಲೋಕೇಷು ರಾಘವ ಆತ್ಮಾನಂ ಸೂಚರ್ಯ ರಾಮ ಸೃಚ್ಛಸ್ಯರ್ಸ್ಮಾ ಸುಹೃತ್ರಯಾ” ಎಂದು ಮೂಲವು “ನೀನು ಸತ್ವ ಜ್ಞನಾಗಿದ್ದರೂ ಈಗ ನಮ್ಮನ್ನು ಪ್ರಶ್ನೆ ಮಾಡುವುದು, ನಿನ್ನಲ್ಲಿರುವ ಆಶ್ರಿತ ಪಾರತಂ ತ್ರವೆಂಬ ಮಹಾತಿಶಯವನ್ನು ಲೋಕಕ್ಕೆ ತೋರಿಸುವುದಕ್ಕಾಗಿಯೇ ಹೊರತುಬೇರೆಯ

'ವೆಂದು ಅದರ ಮುಖ್ಯಾರ್ಥವು, ಇಲ್ಲಿ 'ಆತ್ಮಾನಂ ಪೂಜರ್ಯ' ಎಂಬ ಪಾರಾಂ ತರವೂ ಉಂಟು ಆ ಪಾಠದಲ್ಲಿ ಆತ್ಮಾನಂ ಎಂಬ ಏಕವಚನವು ಪ್ರಕಾರವಾ ಚಕವು, ಆದುದರಿಂದ ನಮ್ಮಲ್ಲಿ ಒಬ್ಬೊಬ್ಬನನ್ನೂ ಬೇರೆಬೇರೆಯಾಗಿ ಗೌರವಿಸಬೇಕಂ ಬ ಅಭಿಪ್ರಾಯದಿಂದಲೇ ನೀನು ಹೀಗೆ ಕೇಳುತ್ತಿರುವ'ಯೆಂದು ಅದರ ಭಾವವು. ಅಥವಾ (ಆತ್ಮಾನಂ) ಆತ್ಮ ಸ್ವಭಾವವನ್ನು ಎಂದರೆ, ರಾಜನೀತಿಯನ್ನು (ಪೂಜಯ೯ ಪರಿಪಾಲಿಸು ವುದಕ್ಕಾಗಿಯೇ ನಮ್ಮನ್ನು ಹೀಗೆ ಕೇಳುವೆಯೆಂದೂ ಅರ್ಧ೦ತರವನ್ನು ಹೇಳಬಹುದು. ಈ wws in --- + mo =